ಸಿವಿಲ್ ಕಂಟ್ರಾಕ್ಟರ್ ಆಗಿದ್ದ ರಮೇಶ್ ರೆಡ್ಡಿ ಅವರು 2017ರಲ್ಲಿ `ತೇಜಸ್ವಿನಿ enterprises’ ಬ್ಯಾನರ್‌ನಡಿಯಲ್ಲಿ `ಉಪ್ಪು ಹುಳಿ ಖಾರ’ ಚಿತ್ರದ ಮೂಲಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಮುಂದೆ.. ಪಡ್ಡೆ ಹುಲಿ, ನಾತಿಚರಾಮಿ, 100, ಗಾಳಿಪಟ-2 ಹೀಗೆ ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸುವುದರ ಮೂಲಕ ಕನ್ನಡದ ನಿರ್ಮಾಪಕರಲ್ಲಿ ಅಗ್ರಗಣ್ಯರು ಎಂದೆನಿಸಿಕೊ0ಡರು. ಪ್ರಸ್ತುತ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅರ್ಜುನ್ ಜನ್ಯ ನಿರ್ದೇಶನದ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್.ಬಿ.ಶೆಟ್ಟಿ ಅಭಿನಯದ `45’ ಎಂಬ ವಿಭಿನ್ನ ಶಿರ್ಷಿಕೆಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹೀಗೆ, ಕನ್ನಡ ಸದಭಿರುಚಿಯ ನಿರ್ಮಾಪಕರೊಲ್ಲಬ್ಬರಾದ ರಮೇಶ್ ರೆಡ್ಡಿಯವರು ತಮ್ಮ ಪುತ್ರಿ ತೇಜಸ್ವಿನಿ ಮದುವೆಯನ್ನು ಕಾರ್ತಿಕ್ ಜೊತೆ ಇತ್ತೀಚಿಗೆ ಅರೆಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರೆವೇರಿಸಿದರು. ರಮೇಶ್ ರೆಡ್ಡಿಯವರ ಆಮಂತ್ರಣ ಸ್ವೀಕರಿಸಿ ಸುಧಾ ಮೂರ್ತಿ, ರಮೇಶ್ ಅರವಿಂದ್, ಗುರು ದೇಶಪಾಂಡೆ, ಅರ್ಜುನ್ ಜನ್ಯ, ಯೋಗರಾಜ್ ಭಟ್, ಧ್ರುವ ಸರ್ಜಾ, ದಿಗಂತ್, `ಚಿತ್ತಾರ’ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್.. ಹೀಗೆ ಸ್ಯಾಂಡಲ್‌ವುಡ್‌ನ ಬಹುಪಾಲು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿನಿಮಾ ಮಂದಿ ಅಷ್ಟೇ ಅಲ್ಲದೇ ಮದುವೆ ಸಮಾರಂಭದಲ್ಲಿ ರಾಜಕೀಯ ನಾಯಕರು, ಉದ್ಯಮಿಗಳು ಭಾಗವಹಿಸಿ ನವದಂಪತಿಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಪರೂಪದ ಚಿತ್ರಗಳು ಇಲ್ಲಿವೆ..
ಫೋಟೋ ಕೃಪೆ : ಕೆ.ಎನ್.ನಾಗೇಶ್ ಕುಮಾರ್