ನೀವು ಮಹಿಳಾ ಬಾಂಡ್ ಆಗಿ ನಟಿಸಲು ನಿಮಗೆ ಇಷ್ಟವಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, ಹೌದು ನಾನು ಮಹಿಳಾ ಜೇಮ್ಸ್ ಬಾಂಡ್ ಆಗಿ ನಟಿಸಲು ಬಯಸುತ್ತೇನೆ ಎಂದು ಬಾಲಿವುಡ್ ಖ್ಯಾತ ನಟಿ ಪ್ರಿಯಾಕಾ ಚೋಪ್ರಾ ತಿಳಿಸಿದ್ದಾರೆ. ಅಮೆರಿಕದ ಜನಪ್ರಿಯ ಟೆಲಿವಿಜನ್ ಕಾರ್ಯಕ್ರಮ ಗುಡ್ ಮಾರ್ನಿಂಗ್ ಅಮೆರಿಕದ ಪ್ರಕಾರ, ಬಾಲಿವುಡ್ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಮಹಿಳಾ ಜೇಮ್ಸ್ ಬಾಂಡ್ ಪಾತ್ರದಲ್ಲಿ ನಟಿಸಲಿದ್ದಾಳಂತೆ.
ಅಮೆರಿಕದ ನಿವೃತ್ತ ಫುಟ್ಬಾಲ್ ಆಟಗಾರ ಮಿಚೈಲ್ ಸ್ಟ್ರಾಹಾನ್ ಮತ್ತು ಸಹೃನಟ ಬ್ಲೇರ್ ಅಂಡರ್‌ವುಡ್ ನಡೆಸಿಕೊಡುವ ಗುಡ್ ಮಾರ್ನಿಂಗ್ ಅಮೆರಿಕ ಕಾರ್ಯಕ್ರಮದಲ್ಲಿ ಕ್ವಾಂಟಿಕೋ ತಾರೆ ಪ್ರಿಯಾಂಕಾ ಚೋಪ್ರಾ ಪಾಲ್ಗೊಂಡಿದ್ದರು. ಕಳೆದ ಹಲವು ವರ್ಷಗಳಿಂದ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಉತ್ತಂಗಕ್ಕೇರಿದ ಪ್ರಿಯಾಂಕಾ, ಕ್ವಾಂಟಿಕೋ ಚಿತ್ರದಲ್ಲಿ ನಟಿಸುವಾಗ ತುಂಬಾ ನರ್ವಸ್ ಆಗಿದ್ದೆ. ವಾಶ್‌ರೂಮ್‌ಗೆ ಹೋಗಿ ನನ್ನನ್ನು ನಾನೇ ನಟಿಸಿ ಖಚಿತಪಡಿಸಿಕೊಂಡೆ ಎಂದು ತಿಳಿಸಿದ್ದಾರೆ.
ನಟಿ ಪ್ರಿಯಾಂಕಾ ಮುಂದಿನ ಚಿತ್ರದಲ್ಲಿ ನಟಿಸುತ್ತಿದ್ದು, ದ್ವಾಯನೆ ಜಾನ್ಸನ್ ಎಪ್ರೊನ್ ಸೇರಿದಂತೆ ಇನ್ನಿತರ ಖ್ಯಾತನಾಮ ನಟರು ನಟಿಸಿದ್ದಾರೆ.