ಹೆಣ್ಣಿಗೆ ಸೀರೆ ಯಾಕೆ ಅಂದ.. ಆ ಅಂದ ಚಂದ ಅವಳ ಒಳಗೆ ಅಡಗಿರೋದ್ರಿಂದ ಎಂಬ ಹಾಡು ಎಲ್ಲರಿಗೂ ಗೊತ್ತೇ ಇದೆ. ಹೆಣ್ಣು ಮಕ್ಕಳು ಸೀರೆಯಲ್ಲಿ ಎಷ್ಟು ಅಂದವಾಗಿ ಕಾಣುತ್ತಾರೆ. ಸೀರೆಯನ್ನು ಉಟ್ಟುಕೊಂಡು ಮುಖದಲ್ಲೂ ಒಂದು ಚಂದದ ಮುಗುಳ್ನಗೆ ಇದ್ದರೆ ಸಾಕು ಅದರ ಕಳೆಯೇ ಬೇರೆ.
ಇದೀಗ ನಟಿ ಪ್ರಿಯಾಮಣಿ ಅವರು ವಿಭಿನ್ನವಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟಿ ಪ್ರಿಯಾಮಣಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟಿ ಪ್ರಿಯಾಮಣಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ನಟಿ ಶೇರ್ ಮಾಡಿಕೊಂಡ ಫೋಟೋದಲ್ಲಿ ಪ್ರಿಯಾಮಣಿ ಅವರು ಗೋಲ್ಡನ್ ಸೀರೆಯಲ್ಲಿ ಬ್ಲೌಸ್ ಹಾಕದೇ ಬಹಳ ಸೊಗಸಾಗಿ ಸೀರೆಯನ್ನು ಉಟ್ಟುಕೊಂಡಿದ್ದಾರೆ. ಅವರ ಈ ಫೋಟೋಗಳನ್ನು ನೋಡಿದ ಫ್ಯಾನ್ಸ್ ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಜವಾನ್ ಸಿನಿಮಾ, ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್, ನೆರು ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪ್ರಿಯಾಮಣಿ ಆರ್ಟಿಕಲ್ 370 ಸಿನಿಮಾದಲ್ಲಿಯೂ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.