ಚಿತ್ರರಂಗದಲ್ಲಿ ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ವರ್ಷಗಟ್ಟಲೆ ಕಷ್ಟಪಟ್ಟು ದುಡಿದ ಕೆಲವರು ಮಾತ್ರ ತಮ್ಮದೇ ಆದ ಕ್ರೇಜ್ ಹೊಂದಿರುತ್ತಾರೆ. ವರ್ಷಕ್ಕೆ ಹತ್ತಾರು ಹೊಸ ಹೀರೋಗಳು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟರೂ ಅದರಲ್ಲಿ ಯಶಸ್ಸು ಕಾಣುವವರು ಕೆಲವರು ಮಾತ್ರ. ಅದರಲ್ಲಿಯೂ ಟಾಪ್ ಹೀರೋ ಆಗುವ ಅದೃಷ್ಟ ಎಲ್ಲರಿಗೂ ಇರಲ್ಲ. ಈಗ ಸೂಪರ್ ಸ್ಟಾರ್ ಎನಿಸಿಕೊಂಡಿರುವ ಕೆಲ ನಟರು ತಮ್ಮ ಸಿನಿ ಕೆರಿಯರ್ ಆರಂಭದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದರು.

ಈಗ ದೇಶಾದ್ಯಂತ ವಿಶೇಷ ಕ್ರೇಜ್ ಗಿಟ್ಟಿಸಿಕೊಂಡಿರುವ ಹೀರೋ, ಒಂದಾನೊಂದು ಕಾಲದಲ್ಲಿ ಬೀದಿ ಬೀದಿಗಳಲ್ಲಿ ಆಭರಣ ಮಾರಾಟ ಮಾಡಿ ಹಣ ಸಂಪಾದಿಸಿದ್ದಾರೆ. ಆ ಹಂತದಿಂದ ಈಗ ಹೆಚ್ಚು ಸಂಭಾವನೆ ಪಡೆಯುತ್ತಿರುವ ಬಾಲಿವುಡ್ ಹೀರೋಗಳಲ್ಲಿ ಒಬ್ಬರು. ಆ ನಟ ಬೇರೆ ಯಾರೂ ಅಲ್ಲ ಬಾಲಿವುಡ್ ನ ಹೀರೋ ಅಕ್ಷಯ್ ಕುಮಾರ್ ಎಂದ್ರೆ ನಂಬಲೇಬೇಕು

ಅದ್ಭುತ ನಟನೆಯೊಂದಿಗೆ ಹಲವು ಬ್ಲಾಕ್ ಬಸ್ಟರ್ ಗಳನ್ನು ನೀಡಿದ ನಂತರ ಐಷಾರಾಮಿ ಜೀವನವನ್ನು ನಡೆಸುತ್ತಿರುವ ಅಕ್ಷಯ್, ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಅನೇಕ ಕಷ್ಟಗಳನ್ನು ಅನುಭವಿಸಿದ್ರು. ವಿವಿಧ ನಗರಗಳಲ್ಲಿ ಕೂಲಿ ಕೆಲಸ ಮಾಡಿದ್ರು. ಗಿಲ್ಟ್ ಆಭರಣಗಳನ್ನು ಬೀದಿಗಳಲ್ಲಿ ಮಾರಾಟ ಮಾಡಿದ್ರು. ಈಗ ಅಕ್ಷಯ್ ಕುಮಾರ್ ಬಾಲಿವುಡ್ ನ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದಾರೆ. ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. 80 ಕೋಟಿ ಮೌಲ್ಯದ ಐಷಾರಾಮಿ ಕಟ್ಟಡದಲ್ಲಿ ವಾಸವಾಗಿದ್ದಾರೆ. ಅವರ ಗ್ಯಾರೇಜ್ನಲ್ಲಿ ಐಷಾರಾಮಿ ಕಾರುಗಳಿವೆಗೆ ಕೊರತೆಯಿಲ್ಲ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ಮಾತಾಡಿದ ಅಕ್ಷಯ್ ಕುಮಾರ್, ನಾನು 15ನೇ ವಯಸ್ಸಿನಿಂದಲೇ ದುಡಿಯಲು ಆರಂಭಿಸಿದೆ ಎಂದು ಹೇಳಿದ್ರು. ‘ನಾನು ಕಲ್ಕತ್ತಾದ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಸಹಾಯ ಮಾಡುವ ಹುಡುಗನಾಗಿ ಕೆಲಸ ಮಾಡುತ್ತಿದ್ದೆ. ನನ್ನ ಮೊದಲ ಸಂಬಳ 150 ರೂ. ಜೀವನೋಪಾಯಕ್ಕಾಗಿ ನಾನು ಅನೇಕ ಕೆಲಸಗಳನ್ನು ಮಾಡಿದ್ದೆ ಎಂದ್ರು. ನಾನು ದೆಹಲಿಯ ಬೀದಿಗಳಲ್ಲಿ ಆಭರಣಗಳನ್ನು ಮಾರಿದೆ. ಅದರ ನಂತರ ನಾನು ಢಾಕಾಗೆ ಹೋದೆ. ಅಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡಿದ್ದೆ. ನಂತರ ನಾನು ಬ್ಯಾಂಕಾಕ್ ಗೆ ಹೋಗಿದ್ದೆ. ನಾನು ದೆಹಲಿಯಲ್ಲಿ ಆಭರಣ ಖರೀದಿಸಿ ಮುಂಬೈನಲ್ಲಿ ಮಾರಾಟ ಮಾಡುತ್ತಿದ್ದೆ. ದೆಹಲಿಯಲ್ಲಿ 20,000 ರೂ.ಗೆ ಗಿಲ್ಟ್ ಆಭರಣ ಖರೀದಿಸಿ ಮುಂಬೈನಲ್ಲಿ 24,000 ರೂ.ಗೆ ಮಾರಾಟ ಮಾಡಿದ್ದೆ ಎಂದು ಅಕ್ಷಯ್ ಹೇಳಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಸಿನಿಮಾ ಪ್ರವೇಶಿಸುವ ಮುನ್ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಚಿತ್ರರಂಗಕ್ಕೆ ಬರಲು ಅವರು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ರು. ನಂತರ ಸಿಕ್ಕ ಅವಕಾಶಗಳ ಬಳಸಿಕೊಂಡು ಸಾಲು ಸಾಲು ಹಿಟ್ ಸಿನಿಮಾ ನೀಡಿದ್ದಾರೆ. ಫಿರ್ ಹೆರಾ ಫೇರಿ, ಭೂಲ್ ಭುಲಯ್ಯ, ರೌಡಿ ರಾಥೋಡ್, ಗರಂ ಮಸಾಲಾ, ಹೌಸ್ಫುಲ್ ಮುಂತಾದ ಹಿಟ್ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಒಂದು ಹಂತದಲ್ಲಿ ವರ್ಷಕ್ಕೆ ಅಕ್ಷಯ್ ನಾಯಕನಾಗಿ ನಟಿಸಿದ 4 ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಇದೀಗ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ.

ಫೋರ್ಬ್ಸ್ ವರದಿ ಪ್ರಕಾರ ಭಾರೀ ಸಂಭಾವನೆ ಅಕ್ಷಯ್ ಕುಮಾರ್ ಪ್ರತಿ ಚಿತ್ರಕ್ಕೆ 60 ರಿಂದ 150 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಅವರ ನಿವ್ವಳ ಮೌಲ್ಯ ರೂ .2,500 ಕೋಟಿ. ಅಕ್ಷಯ್ ಸಹ ನಟಿ ಟ್ವಿಂಕಲ್ ಖನ್ನಾ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅಕ್ಷಯ್ ಕುಮಾರ್ ರೂ. 260 ಕೋಟಿ ಮೌಲ್ಯದ ಖಾಸಗಿ ಜೆಟ್ ಹೊಂದಿದ್ದಾರೆ. ರೂ.10 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಫ್ಯಾಂಟಮ್ VII ಮತ್ತು ರೂ.4 ಕೋಟಿ ಮೌಲ್ಯದ ಬೆಂಟ್ಲಿ ಕಾಂಟಿನೆಂಟಲ್ ಜಿಟಿಯಂತಹ ಐಷಾರಾಮಿ ಕಾರುಗಳಿವೆ.

ಅಕ್ಷಯ್ ಕುಮಾರ್ ಅಭಿನಯದ ‘ಬಡೆ ಮಿಯಾ ಚೋಟೆ ಮಿಯಾ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್, ಅಲೆಯ ಎಫ್, ಮಾನುಷಿ ಚಿಲ್ಲರ್ ಮುಂತಾದ ನಟರು ಈ ಚಿತ್ರದಲ್ಲಿ ನಟಿಸಿದ್ದಾರೆ.
