Left Ad
ಸಲಾರ್ ನಲ್ಲಿ ಎಲ್ಲಾ ಐದು ಭಾಷೆಗೂ ತಾವೇ ಡಬ್ಬಿಂಗ್ ಮಾಡಿ ಸೈ ಎನಿಸಿಕೊಂಡ ಪೃಥ್ವಿರಾಜ್. - Chittara news
# Tags

ಸಲಾರ್ ನಲ್ಲಿ ಎಲ್ಲಾ ಐದು ಭಾಷೆಗೂ ತಾವೇ ಡಬ್ಬಿಂಗ್ ಮಾಡಿ ಸೈ ಎನಿಸಿಕೊಂಡ ಪೃಥ್ವಿರಾಜ್.

ಸಲಾರ್ ನಲ್ಲಿ ಎಲ್ಲಾ ಐದು ಭಾಷೆಗೂ ತಾವೇ ಡಬ್ಬಿಂಗ್ ಮಾಡಿ ಸೈ ಎನಿಸಿಕೊಂಡ ಪೃಥ್ವಿರಾಜ್. ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಲಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ನಾಯಕ ಪ್ರಭಾಸ್ ಸ್ನೇಹಿತನಾಗಿ ಪೃಥ್ವಿರಾಜ್ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೃಥ್ವಿ ಸ್ನೇಹಿತರಾಗಿದ್ದು ಇವರಿಬ್ಬರ ನಡುವೆಯೇ ಕತೆ ಹೆಚ್ಚು ಕೇಂದ್ರೀಕೃತವಾಗಿದೆ. ಪ್ರಭಾಸ್ ‘ದೇವ’ ಎನ್ನುವ ಪಾತ್ರ ಮಾಡಿದ್ದರೆ ಪೃಥ್ವಿ ‘ವರದ’ ಎನ್ನುವ ಪಾತ್ರ ಮಾಡಿದ್ದಾರೆ.
ಸಿನಿಮಾ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಪೃಥ್ವಿರಾಜ್ ತಮ್ಮ ಪಾಲಿನ ಡಬ್ಬಿಂಗ್ ಮುಗಿಸಿದ್ದಾರೆ. ಈ ವಿಚಾರವನ್ನು ಅವರೇ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಸಲಾರ್ ಸಿನಿಮಾದ ನನ್ನ ಪಾತ್ರಕ್ಕಾಗಿ ಡಬ್ಬಿಂಗ್ ಮುಗಿಸಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ನನ್ನ ಮಾತೃ ಭಾಷೆ ಮಲಯಾಳಂ ಸೇರಿದಂತೆ ಐದೂ ಭಾಷೆಗಳಲ್ಲಿ ನಾನೇ ಡಬ್ ಮಾಡಿರುವುದು ಖುಷಿ ಎನಿಸಿತು ಎಂದಿದ್ದಾರೆ.
Spread the love
Translate »
Right Ad