Sandalwood Leading OnlineMedia

ಕೆಡಿ’ ತಂಡದಿoದ `ಮಚ್ ಲಕ್ಷ್ಮಿ’ಗೆ ಮಸ್ತ್ ಬರ್ತ್ಡೇ ಗಿಫ್ಟ್!

ರೀಷ್ಮಾ ನಾಣಯ್ಯ ಕನ್ನಡದ ಕೆಡಿ ಸಿನಿಮಾದಲ್ಲಿ ಮಚ್‌ಲಕ್ಷ್ಮಿ ಅನ್ನೋ ಪಾತ್ರ ಮಾಡಿದ್ದಾರೆ. ಪಕ್ಕಾ ಹಳ್ಳಿ ಹುಡುಗಿನೇ ಆಗಿದ್ದಾರೆ. ಲಂಗಾ-ದಾವಣಿ ಧರಿಸಿಕೊಂಡು ಸಖತ್ ಆಗಿಯೂ ಕಾಣಿಸುತ್ತಿದ್ದಾರೆ. ಆದರೆ, ಸಿನಿಮಾದ ಆರಂಭದಲ್ಲಿ ಮಾತ್ರ ಡೈರೆಕ್ಟರ್ ಜೋಗಿ ಪ್ರೇಮ್ ಈ ಪಾತ್ರದ ಒಂದು ಪೋಸ್ಟರ್ ಬಿಟ್ಟಿದ್ದರು. ಆದರೆ ಇದೀಗ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಕೈಯಲ್ಲಿ ತಮಟೆ ಹಿಡಿದಿರೋ ಮಚ್ಲಕ್ಷ್ಮಿ ಇಲ್ಲಿ ಸಖತ್ ಖುಷಿಯಾಗಿ ಕಾಣಿಸುತ್ತಿದ್ದಾರೆ. ಮಸ್ತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದಾರೆ. ಈ ಪೋಸ್ಟರ್ ಚಿತ್ರದ ಮಚ್ಲಕ್ಷ್ಮಿಯ ಇನ್ನೂ ಒಂದು ಖದರ್ ತೋರಿಸುತ್ತಿದೆ.

ಇನ್ನಷ್ಟು ಓದಿಗಾಗಿ;   “Family is My Weakness” -Ragini Dwivedi ; Chittara Exclusive

ಮಚ್‌ಲಕ್ಷ್ಮಿ ಪಾತ್ರಧಾರಿ ರೀಷ್ಮಾ ನಾಣಯ್ಯ ಪ್ರತಿ ವರ್ಷ ಏಪ್ರಿಲ್-28 ರಂದು ಜನ್ಮ ದಿನ ಸೆಲೆಬ್ರೇಟ್ ಮಾಡುತ್ತಾರೆ. ಅದರಂತೆ ಈ ಸಲ ಕೆಡಿ ಸಿನಿಮಾ ಈ ಬೆಡಗಿಗೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ. ಅದು ವಿಶೇಷವಾಗಿಯೇ ಅನ್ನೋದು ಮೋಷನ್ ಪೋಸ್ಟರ್‌ನಲ್ಲಿಯೇ ತಿಳಿಯುತ್ತದೆ. ಕೆಡಿ ಚಿತ್ರದ ಒಂದು ಭಾಗದ ಚಿತ್ರೀಕರಣ ಮುಗಿಸಿರೋ ಡೈರೆಕ್ಟರ್ ಜೋಗಿ ಪ್ರೇಮ್, ತಮ್ಮ ಚಿತ್ರದ ನಾಯಕಿಯ ಹುಟ್ಟುಹಬ್ಬಕ್ಕೆ ಈ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಈ ಮೂಲಕ ವಿಶೇಷವಾಗಿಯೇ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಇನ್ನಷ್ಟು ಓದಿಗಾಗಿ;     “My Favorite Possession – a CD gifted by Chiru’’ – Meghana Raj Sarja : chittara exclusive

ಕನ್ನಡದ UI ಸಿನಿಮಾದಲ್ಲೂ ರೀಷ್ಮಾ ನಾಣಯ್ಯ ಅಭಿನಯಿಸಿದ್ದಾರೆ. ರಿಯಲ್ ಸ್ಟಾರ್ ಉಪ್ಪಿ ಡೈರೆಕ್ಷನ್ ಇರೋ ಚಿತ್ರದಲ್ಲಿ ನಟಿಸಿರೋ ಖುಷಿ ಕೂಡ ಇದೆ. ಇದರ ಜೊತೆಗೆ ಟ್ರೋಲ್ ಸಾಂಗ್ ಮೂಲಕ ಎಲ್ಲೆಡೆ ವೈರಲ್ ಕೂಡ ಆಗಿದ್ದಾರೆ. ರೀಷ್ಮಾ ನಾಣಯ್ಯ ಅಂದ್ರೆ ಟ್ರೋಲ್ ಸಾಂಗ್ ಹುಡುಗಿ ಅನ್ನೋಮಟ್ಟಿಗೆ ರೀಚ್ ಆಗಿದ್ದಾರೆ. ರೀಷ್ಮಾ ನಾಣಯ್ಯ ಈ ಒಂದು ಚಿತ್ರದಲ್ಲಿ ತಮ್ಮದೇ ಒಂದು ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ತಮ್ಮ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆಯೋಕೂ ಸಜ್ಜಾಗಿದ್ದಾರೆ. ಕೆ.ಪಿ.ಶ್ರೀಕಾಂತ್ ಹಾಗೂ ಲಹರಿ ಸಂಸ್ಥೆ ನಿರ್ಮಿಸಿರೋ ಈ ಚಿತ್ರದ ಕ್ರೇಜ್ ಜಾಸ್ತಿನೇ ಇದೆ. ಟ್ರೋಲ್ ಹೀರೋಯಿನ್ ರೀಷ್ಮಾ ನಾಣಯ್ಯ ಕ್ರೇಜ್ ಕೂಡ ಪೀಕ್ ಅಲ್ಲಿಯೇ ಇದೆ ಅಂತಲೂ ಹೇಳಬಹುದು.

Share this post:

Related Posts

To Subscribe to our News Letter.

Translate »