ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ಬ್ಯೂಟಿ ಜೂಹಿ ಚಾವ್ಲಾ ಹೆಸರು ಕೇಳಿದರೆ ಥಟ್ಟನೇ ನೆನಪಿಗೆ ಬರುವುದು ಪ್ರೇಮಲೋಕ ಸಿನಿಮಾ. 80ರ ದಶಕದಲ್ಲಿ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುವುದರ ಜತೆಗೆ ಕನ್ನಡ ಚಿತ್ರರಂಗಕ್ಕೆ ಹೊಸ ರೂಪ ಕೊಟ್ಟ ಸಿನಿಮಾ ಅಂದರೆ ಅದು ಪ್ರೇಮಲೋಕ.
ಹರ್ಷಿಕಾ ಪೂಣಚ್ಚ ಅಭಿನಯದ ಹೊಸ ಸಿನಿಮಾ ‘ತಾಯ್ತ’ಗಾಗಿ ‘ಪ್ರೇಮಲೋಕ’ ಸಿನಿಮಾದ ‘ನೋಡಮ್ಮ ಹುಡುಗಿ.. ಕೇಳಮ್ಮ ಸರಿಯಾಗಿ..’ ಹಾಡನ್ನ ರೀಕ್ರಿಯೇಟ್ ಮಾಡಲಾಗುತ್ತಿದೆ. ‘ತಾಯ್ತ’ ಚಿತ್ರಕ್ಕಾಗಿ ಶೂಟ್ ಮಾಡುತ್ತಿರುವ ‘ನೋಡಮ್ಮ ಹುಡುಗಿ..’ ಹಾಡಿನ ತುಣುಕನ್ನು ನಟಿ ಹರ್ಷಿಕಾ ಪೂಣಚ್ಚ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ಇದೇ ಸಾಂಗ್ ಅನ್ನು ನಟಿ ಹರ್ಷಿಕಾ ಪೂಣಚ್ಚ ನಟನೆಯ ಹೊಸ ಸಿನಿಮಾ ತಾಯ್ತಾದಲ್ಲಿ ಮರುಸೃಷ್ಟಿಸಲಾಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಹಾಡಿನ ಚಿತ್ರೀಕರಣಕ್ಕೆ ಸಂಬಂಧಿಸಿದ ವಿಡಿಯೋ ತುಣಕನ್ನು ಹರ್ಷಿಕಾ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ತಾಯ್ತ ಸಿನಿಮಾ ಮೂಲಕ ಪ್ರೇಮಲೋಕ ಮರಳಿ ಬರುತ್ತಿದೆ.
ಈ ಹಾಡಿನಲ್ಲಿ ನನಗೆ ಜೂಹಿ ಚಾವ್ಲಾ ಮೇಡಂ ತುಂಬಾ ಇಷ್ಟವಾದರೂ ಎಂದು ಅಡಿಬರಹ ನೀಡಿ ಜೂಹಿ ಚಾವ್ಲಾ ಅವರನ್ನು ಹರ್ಷಿಕಾ ಟ್ಯಾಗ್ ಮಾಡಿದ್ದಾರೆ. ಇದೀಗ ಹರ್ಷಿಕಾ ಶೇರ್ ಮಾಡಿಕೊಂಡಿರುವ ವಿಡಿಯೋ ನೋಡಿ ಜೂಹಿ ಚಾವ್ಲಾ ಅವರು ಪ್ರತಿಕ್ರಿಯೆ ನೀಡಿದ್ದು, ಹರ್ಷಿಕಾ ಖುಷಿಗೆ ಪಾರವೇ ಇಲ್ಲದಂತಾಗಿದೆ. ಹರ್ಷಿಕಾ ವಿಡಿಯೋಗೆ ಲವ್ ಎಮೋಜಿ ಕಾಮೆಂಟ್ ಮಾಡುವ ಮೂಲಕ ಜೂಹಿ ಚಾವ್ಲಾ ಹರ್ಷಿಕಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರಿಂದ ಖಷಿಯಾಗಿರುವ ಹರ್ಷಿಕಾ, ನನ್ನ ವಿಡಿಯೋಗೆ ಪ್ರತಿಕ್ರಿಯಿಸುವ ಮೂಲಕ ನೀವು ಈ ದಿನವನ್ನು ನನ್ನದಾಗಿಸಿದಿರಿ ಮೇಡಂ ಎಂದಿದ್ದಾರೆ. ಹರ್ಷಿಕಾ ಅವರ ವಿಡಿಯೋಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದಿಗೂ ಈ ಹಾಡನ್ನು ಕೇಳುತ್ತಿದ್ದರೆ, ಹೊಸ ಅನುಭವವೇ ಬರುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸದ್ಯ ಜಾಲತಾಣದಲ್ಲಿ ಹಾಡಿನ ಮರುಸೃಷ್ಟಿ ವಿಡಿಯೋ ಸಂಚಲನ ಮೂಡಿಸಿದೆ.
https://www.instagram.com/reel/Cd5PfBhj9az/?igshid=YmMyMTA2M2Y=