ಅಂಬಾರಿ, ಜೊತೆಜೊತೆಯಲಿ ಸೇರಿದಂತೆ ಹಲವು ಜನಪ್ರಿಯ ಧಾರವಾಹಿಗಳನ್ನು ನಿರ್ದೇಶಿಸಿರುವ ರಂಜಿತ್ ತಾಜ್ ಈಗ ಕಿರುತೆರೆಯಿಂದ ಹಿರಿತೆರೆಗೆ ತಮ್ಮ ಮೊದಲ ಹೆಜ್ಜೆ ಇಟ್ಟಿದ್ದಾರೆ. ದಶಕಗಳಕಾಲ ಕಿರುತೆರೆಯ ಅನುಭವವನ್ನು ಬೆನ್ನಿಗಿಟ್ಟುಕೊಂಡು ತಮ್ಮ ಮೊದಲ ಪ್ರಯತ್ನದಲ್ಲೇ ವಿಭಿನ್ನ ಶೀರ್ಷಿಕೆಯೊಂದಿಗೆ ಕ್ರೆöÊಂ, ಸಸ್ಪೆನ್ಸ್ ಥ್ರಿಲ್ಲರೆ, ಜೊತೆಗೆ ಪ್ರೀತಿ ಘಮಲಿರುವ ಕಥೆಯನ್ನು ಎಳೆದಿದ್ದಾರೆ. ಇನ್ನು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ
ಸಾಮರಸ್ಯ ಹಾಗೂ ಸಹಬಾಳ್ವೆ ಯ ಕಥೆ ಹೇಳಲಿದೆ ಕರಾವಳಿ ಭಾಗದ `ಕುದ್ರು’
ರಂಜಿತ್ ರವರ ಮೊದಲ ಚಿತ್ರವಾದ್ದರಿಂದ ಪಾತ್ರವರ್ಗದ ಮತ್ತು ತಾಂತ್ರಿಕವರ್ಗಗಳ ಆಯ್ಕೆಯಲ್ಲಿ ಬಹಳ ಜಾಗರೂಕತೆ ವಹಿಸಿದ್ದಾರೆ. ನಾಯಕ ರಾಗಿ ತುಳು ಚಿತ್ರಗಳು ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ರಾಹುಲ್ ಅಮೀನ್ ಇನ್ನು ನಾಯಕಿಯಾಗಿ ಕೃಷ್ಣಾ ಭಟ್ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಮುಖ್ಯಪಾತ್ರಗಳಲ್ಲಿ ‘ಗೀತಾ’ ಧಾರಾವಾಹಿಯಿಂದ ಮನೆಮಾತಾಗಿರುವ ಕರಾವಳಿ ಪ್ರತಿಭೆ ವಿಜಯ್ ಶೋಭರಾಜ್ ಪಾವೂರ್, ‘ಲುಂಗಿ’, ‘ಬರ‍್ಬಲ್’, ‘ಗರುಡ ಗಮನ ವೃಷ¨s’À ವಾಹನ ಚಿತ್ರದ ಮೂಲಕ ಗಮನ ಸೆಳೆದಿರುವ ಯುವ ಪ್ರತಿಭೆ ವನೀತ್, ಡಾ| ವಿಷ್ಣು ವರ್ಧನ್ ಮತ್ತು ಶಿವಣ್ಣ ರವರ ಜೊತೆ ನಟಿಸಿರುವ ಅನುಭವಿ ಕಲಾವಿದ ಮಧು ಹೆಗ್ಡೆ, ರಂಗಭೂಮಿ ಪ್ರತಿಭೆಗಳಾದ ಕೃಷ್ಣಾಭಟ್, ಶನೀಲ್ ಗುರು ನಟಿಸಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ಶೈನ್ ಶೆಟ್ಟಿ ಮುಖ್ಯ ಪಾತ್ರದ ಕಾಣಿಸಿಕೊಂಡಿದ್ದಾರೆ.
ರೋಚಕ ಅನುಭವ ನೀಡಲು, ಡಾ. 56 ಮೂಲಕ ಸಿಬಿಐ ಆಫೀಸರ್ ಆಗಿ ಡಿಸೆಂಬರ್ 9ಕ್ಕೆ ಬರ್ತಿದ್ದಾರೆ ಪ್ರಿಯಾಮಣಿ
ಈ ಚಿತ್ರದಲ್ಲಿ ಮೂರು ಹಾಡುಗಳಿಗೆ ರಂಜಿತ್ ರಾಜ್ ಸಾಹಿತ್ಯ ಬರೆದಿದ್ದು ವಿಜಯ ಕೃಷ್ಣರವರ ಸಂಗಿತ ನಿರ್ದೇಶನವಿದೆ, ರಾಜ್ಯ ಪ್ರಶಸ್ತಿ ವಿಜೇತ ತೇಜಸ್ವಿ ಹರಿದಾಸ್ ೨ ಹಾಡುಗಳನ್ನು ಹಾಡಿದ್ದಾರೆ ಮತ್ತು ಹೊಸ ಪ್ರತಿಭೆ ಅಭಿಜಿತ್ ಕಿಷನ್ ಒಂದು ಹಾಡಿಗೆ ತಮ್ಮ ಕಂಠವನ್ನು ನೀಡಿದ್ದಾರೆೆ, ಪ್ರಶಾಂತ್ ಪಾಟೀಲ್‌ರವರ ಛಾಯಾಗ್ರಹಣ, ದಯಾ ರವರ ವಿ.ಎಫ್.ಎಕ್ಸ್, ಆಶೋಕ್.ಕೆ ರವರ ಸಂಕಲನ ಈ ಚಿತ್ರಕ್ಕಿದೆ ಬೆಂಗಳೂರು, ಮಂಗಳುರು ಸೇರಿದಂತೆ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರದ ಚಿತ್ರೀಕರಣವನ್ನು ಮಾಡಲಾಗಿದೆ ಈಗಾಗಲೇ ಚಿತ್ರದ TRAILER ಸಾಕಷ್ಟು ಸದ್ದು ಮಾಡಿದ್ದು ಡಿಸೆಂಬರ್9 ರಂದು ರಾಜ್ಯಾದ್ಯಂತೆ ಬಿಡುಗಡೆಯಾಗಲಿದೆ.