ಬಿಗ್ ಬಾಸ್ ಮನೆಯಲ್ಲಿ ಅದರದ್ದೇ ನೀತಿ-ನಿಯಮಗಳು ಇದೆ. ಆ ನಿಯಮಗಳನ್ನು ಮುರಿಯುವುದು ಅಷ್ಟು ಸುಲಭವಲ್ಲ. ಮಿರಿದರೆ ಖಂಡಿತ ಬಿಗ್ ಬಾಸ್ ಶಿಕ್ಷೆಯನ್ನು ವಿಧಿಸುತ್ತದೆ. ಈ ಬಾರಿಯ ಅಂದರೆ ಸೀಸನ್ 10 ಸ್ಪರ್ಧಿಗಳು ಸಾಕಷ್ಟು ರೂಲ್ಸ್ ಬ್ರೇಕ್ ಮಾಡಿ, ಹಲವು ಬಾರಿ ಶಿಕ್ಷೆಗೆ ಗುರಿಯಾಗಿದ್ದಾರೆ. ಇದೀಗ ಪ್ರತಾಪ್ ನ ಮುದ್ದೆಯಿಂದಾಗಿ ಇಡೀ ಮನೆ ಶಿಕ್ಷೆಗೆ ಗುರಿಯಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಗ್ಯಾಸ್ ಆನ್ ಮಾಡಿಟ್ಟು ಎಲ್ಲಿಯೂ ಹೋಗುವ ಹಾಗಿಲ್ಲ. ಒಂದು ವೇಳೆ ತುರ್ತು ಪರಿಸ್ಥಿತಿ ಉಂಟಾದರೆ ಆಗ ಗ್ಯಾಸ್ ಆಫ್ ಮಾಡಿಯೇ ಹೋಗಬೇಕು. ಇದು ಬಿಗ್ ಬಾಸ್ ನಿಯಮ. ಬಿಗ್ ಬಾಸ್ ಈ ಬಗ್ಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದೆ. ಆದರೆ ಮನೆ ಮಂದಿ ಅದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಅದಕ್ಕೆ ಗ್ಯಾಸ್ ಕೊಡುವಾಗ ಸಮಯದ ಅವಧಿಯನ್ನು ನೀಡಿದೆ. ಬಿಗ್ ಬಾಸ್ ನೀಡಿರುವ ಸಮಯದಲ್ಲಿಯೇ ಅಡುಗೆ ಮಾಡಿ ಮುಗಿಸಬೇಕು. ಅರ್ಧಂಬರ್ಧ ಆದರೂ ಬಿಗ್ ಬಾಸ್ ತಲೆಕೆಡಿಸಿಕೊಳ್ಳುವುದಿಲ್ಲ.
ಹೀಗಿರುವಾಗ ಪ್ರತಾಪ್ ಅಡುಗೆ ಮಾಡಲು ಬಂದು ಎಲ್ಲಾ ಯಡವಟ್ಟು ಮಾಡಿಕೊಂಡಿದ್ದಾರೆ. ಮುದ್ದೆ ಮಾಡುವುದಕ್ಕೆ ಸಮಯ ಕಡಿಮೆ ತೆಗೆದುಕೊಳ್ಳುವುದಿಲ್ಲ. ಮಧ್ಯಾಹ್ನದ ಊಟಕ್ಕೆ ಮುದ್ದೆ ಮಾಡುವ ಸಾಹಸಕ್ಕೆ ಇಳಿದಿದ್ದಾರೆ. ಮನೆಯಲ್ಲಿ ಹಲವರು ಇದಕ್ಕೆ ವಿರೋಧಿಸಿದರೆ, ಕಾರ್ತಿಕ್ ಬೆಂಬಲ ನೀಡಿದ್ದಾರೆ. ಮುದ್ದೆ ಆಗುವುದರೊಳಗಾಗಿ ಗ್ಯಾಸ್ ಆಫ್ ಆಗಿದೆ. ಇದು ವಿನಯ್ ಅಂಡ್ ಟೀಂ ಅವರ ಕೆಂಗಣ್ಣಿಗೆ ಗುರಿಯಾಗಿದೆ. ರಾತ್ರಿ ವೇಳೆಗೆ ಅಡುಗೆಯಾಗದೆ ಇದ್ದರೆ ಇದೆ ಅಂತ ವಿನಯ್ ಎಚ್ಚರಿಕೆ ನೀಡಿದ್ದಾರೆ. ಬಿಗ್ ಬಾಸ್ ಬಳಿ ಪ್ರತಾಪ್ ವಿನಯದಿಂದ ಮನವಿ ಮಾಡಿಕೊಂಡಿದ್ದಾರೆ.