ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.
ಉಗ್ರಂ ಸಿನೆಮಾ ಮೂಲಕ ನಿರ್ದೇಶಕನಾಗಿ ಸಿನಿಲೋಕಕ್ಕೆ ಎಂಟ್ರಿಕೊಟ್ಟ ಪ್ರಶಾಂತ್ ನೀಲ್ ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೆಜಿಎಫ್ ಸಿನೆಮಾ ಮೂಲಕ ವಿಶ್ವದಲ್ಲಿ ಕನ್ನಡ ಸಿನಿರಂಗದ ಹೆಸರನ್ನು ಮೊಳಗಿಸಿದ ಕೀರ್ತಿ ಪ್ರಶಾಂತ್ ನೀಲ್ ಗೆ ಸೇರುತ್ತದೆ.
ಭಾರತದ ಸಿನಿರಂಗದಲ್ಲಿ ಟಾಪ್ ಸ್ಟಾರ್ ನಿರ್ದೇಶಕರಲ್ಲಿ ಕನ್ನಡಿಗ ಪ್ರಶಾಂತ್ ನೀಲ್ ಸಹ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಇದೀಗ ಬಹುಬೇಡಿಕೆಯ ನಿರ್ದೇಶಕರಾಗಿದ್ದು, ಟಾಲಿವುಡ್ ನಲ್ಲಿ ಪ್ಯಾನ್ ಇಂಡಿಯಾ ಸಿನೆಮಾಗಳನ್ನು ಮಾಡಲು ಶುರು ಮಾಡಿದ್ದಾರೆ. ದೊಡ್ಡ ಸ್ಟಾರ್ ನಟರು ಸಹ ಅವರ ಜೊತೆ ಸಿನೆಮಾ ಮಾಡಲು ಕ್ಯೂ ನಲ್ಲಿ ನಿಂತಿದ್ದಾರೆ. ಒಬ್ಬ ಕನ್ನಡ ನಿರ್ದೇಶಕ ಈ ಮಟ್ಟಿಗೆ ಖ್ಯಾತಿ ಗಳಿಸಿರುವುದು ಕನ್ನಡ ಸಿನಿರಂಗದ ಹೆಮ್ಮೆ ಎಂದೂ ಸಹ ಹೇಳಲಾಗುತ್ತಿದೆ.
ಕೆಜಿಎಫ್-2 ಸಿನೆಮಾ ಮೂಲಕ ಇಡೀ ದೇಶದ ಸಿನಿರಂಗಕ್ಕೆ ಭಯ ಹುಟ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್. ಈ ಸಿನೆಮಾ ಮಾಡಿದ ಸಾಧನೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆಗುತ್ತದೆ. ಈ ಸಿನೆಮಾವನ್ನು ಪ್ರಶಾಂತ್ ನೀಲ್ ತಮ್ಮ ನಾಯಕತ್ವದಲ್ಲಿ ಮುನ್ನೆಡಿಸಿದ್ದಾರೆ. ಸಿನೆಮಾದ ಸಕ್ಸಸ್ ಗೆ ಮೂಲ ಕಾರಣವೇ ಪ್ರಶಾಂತ್ ನೀಲ್ ರವರು ಎನ್ನಬಹುದಾಗಿದೆ. ಸದ್ಯ ಎಲ್ಲಿ ನೋಡಿದರೂ ಸಹ ಪ್ರಶಾಂತ್ ನೀಲ್ ರವರನ್ನು ಗುಣಗಾಣ ಮಾಡುತ್ತಿದ್ದಾರೆ. ಇನ್ನೂ ಪ್ರಶಾಂತ್ ನೀಲ್ ತಮ್ಮ ಜಯಭೇರಿಯನ್ನು ಬಾರಿಸಲು ಮತಷ್ಟು ರಗಡ್ ಸಿನೆಮಾಗಳನ್ನು ಮಾಡಲು ಮುಂದಾಗಿದ್ದಾರೆ. ಅದೂ ದೊಡ್ಡ ಸ್ಟಾರ್ ನಟರೊಂದಿಗೆ ಬಿಗ್ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ಸಿನೆಮಾಗಳನ್ನು ಮಾಡುತ್ತಿದ್ದು, ಈ ಸಿನೆಮಾಗಳ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಕೆಜಿಎಫ್-2 ಸಿನೆಮಾ ಬಳಿಕವಂತೂ ಪ್ರಶಾಂತ್ ನೀಲ್ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಕೆಜಿಎಫ್-2 ಸಾವಿರ ಕೋಟಿ ಗಡಿ ದಾಟಿದ್ದು ದೇಶದ ಎಲ್ಲಾ ಸಿನಿರಂಗದ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ.
ಈ ದೊಡ್ಡ ಸಾಧನೆ ಬಳಿಕ ಬಂದಂತಹ ಪ್ರಶಾಂತ್ ನೀಲ್ ಗೆ ಬಂದಂತಹ ಹುಟ್ಟುಹಬ್ಬವಾಗಿದ್ದರಿಂದ ಈ ಬಾರಿ ಪ್ರಶಾಂತ್ ನೀಲ್ ರವರಿಗೆ ವಿಶೇಷವಾಗಿದೆ. ಕೆಜಿಎಫ್-2 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಈ ಖುಷಿಯ ಜೊತೆಗೆ ಪ್ರಶಾಂತ್ ನೀಲ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.ಸದ್ಯ ಪ್ರಶಾಂತ್ ನೀಲ್ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಸಿನೆಮಾ ಮಾಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸಿನೆಮಾದ ಅಪ್ಡೇಟ್ ಗಾಗಿ ಎಲ್ಲರೂ ಕಾಯುತ್ತಿದ್ದಾರೆ.
ಇದರ ಜೊತೆಗೆ ಖ್ಯಾತ ನಟ ನಂದಮೂರಿ ವಂಶದ ಜೂನಿಯರ್ ಎನ್.ಟಿ.ಆರ್ ಜೊತೆಗೆ ಸಹ NTR31 ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಈ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಎನ್.ಟಿ.ಆರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದಾರೆ.
ಇನ್ನೂ ಅವರ ಜನ್ಮದಿನಕ್ಕೆ ಸಿನೆಮಾ ಗಣ್ಯರು ಅವರ ಅಭಿಮಾನಿಗಳು ಶುಭಾಷಯಗಳ ಸುರಿಮಳೆ ಹರಿದು ಬರುತ್ತಿದೆ