ಬಹುನಿರೀಕ್ಷಿತ ಸಲಾರ್ ನ ಟೀಸರ್ ಇಂದು ಜುಲೈ 6ರಂದು ಬಿಡುಗಡೆಯಾಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಕೆಜಿಎಫ್ ನ ನಂತರ ಪ್ರಶಾಂತ್ ನಿರ್ದೇಶಿಸಿರುವ ಸಿನಿಮಾ ಇದಾಗಿದ್ದು, ಈ ಚಿತ್ರವೂ ಸಹ ಸೂಪರ್ ಹಿಟ್ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಟೀಸರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 15 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ 400 ಕೋಟಿ ರೂ.ಗಳ ಪ್ರಾಜೆಕ್ಟ್ ಈಗಾಗಲೇ ಬ್ಲಾಕ್‌ಬಸ್ಟರ್ ಆಗಿ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ಬರೆಯಲಿದೆ ಎಂದು ಸಿನಿಮಾ ತಜ್ಞರು ಭವಿಷ್ಯ ನುಡಿಯುತ್ತಿದ್ದಾರೆ. ಹೌದು, ಭಾರತೀಯ ಚಿತ್ರರಂಗದಲ್ಲಿ ಕಳೆದ 6-7 ವರ್ಷಗಳಿಂದ ‘ಆನೆ ನಡೆದಿದ್ದೇ ದಾರಿ’ಎಂಬಂತಿದೆ ಪ್ರಶಾಂತ್ ನೀಲ್ ರ ಸಿನಿಮಾ ಪಯಣ.ಕೇವಲ ಒಂದು ದಶಕದ ಹಿಂದಷ್ಟೇ ಅಂದರೆ, 2014 ರಲ್ಲಿ ಉಗ್ರಂ ಎಂಬ ಕೇವಲ 4 ಕೋಟಿ ರೂಗಳ ಸಣ್ಣ ಕನ್ನಡ ಚಲನಚಿತ್ರದೊಂದಿಗೆ ಸಿನಿಮಾರಂಗಕ್ಕೆ ಪ್ರವೇಶ ಮಾಡಿದ ಪ್ರಶಾಂತ್ ನೀಲ್, ತನ್ನ ಮುಂದಿನ ಚಿತ್ರದಲ್ಲಿ 1200 ಕೋಟಿ ರೂಪಾಯಿ ಗಳಿಸುವ ಚಿತ್ರದ ನಿರ್ದೇಶಕರಾಗಿ ಹೇಗೆ ರೂಪುಗೊಂಡರು? ಇವರು ಭಾರತದ ಅಗ್ರಮಾನ್ಯ ನಿರ್ದೇಶಕರಾಗಿದ್ದು ಹೇಗೆ? .
ಪ್ರಶಾಂತ್ ನೀಲ್ ಅವರ ಬಗ್ಗೆ ಅತ್ಯಂತ ಗಮನಾರ್ಹವಾದ ಅಂಶವೆಂದರೆ, ಅವರು ಕಥೆಯನ್ನು ಪ್ರಸ್ತುತಪಡಿಸುವ ವಿಶಿಷ್ಟ ಶೈಲಿ. ಪ್ರಶಾಂತ್ ತಮ್ಮ ಚಲನಚಿತ್ರಗಳಲ್ಲಿ ಮುಖ್ಯವಾಗಿ ದೃಶ್ಯಗಳ ಸಂಯೋಜನೆಗೆ ಹೆಚ್ಚಿನ ಒತ್ತು ನೀಡುತ್ತಾರೆ.ಈಗಾಗಲೇ ಸಿನಿಮಾ ಮಂದಿ ಸಲಾರ್ ನಲ್ಲಿನ ಪ್ರಭಾಸ್ ನ ಲುಕ್ ಹಾಗೂ ಅವರು ಹೊಮ್ಮಿಸುವ ಭಾವನೆಯು ಕೆಜಿಎಫ್‌ನ ಯಶ್ ರ ಭಾವನಾಭಿವ್ಯಕ್ತದಂತೆ ಇದೆ ಎಂದು ಹೋಲಿಕೆ ಮಾಡಿದ್ದಾರೆ. ಆದರೆ, ಪ್ರಶಾಂತ್ ನೀಲ್ ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿದ್ದು, ಇವುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನಿರ್ದೇಶಕ ಪ್ರಶಾಂತ್ ಕಥೆ ಮತ್ತು ಚಿತ್ರಕಥೆಗೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ ಸಾಕಷ್ಟು ಆಕ್ಷನ್ ಮತ್ತು ಹೀರೋಯಿಸಂನೊಂದಿಗೆ ಭಾವನಾತ್ಮಕ ಅಂಶಗಳನ್ನು ಹೆಣೆಯುತ್ತಾರೆ.
ಇನ್ನೂ ಓದಿ ‘ಅಪರೂಪ’ ಸಿನಿಮಾದ ಟ್ರೇಲರ್ ರಿಲೀಸ್..ಹೊಸಬರಿಗೆ ಡಾಲಿ ಧನಂಜಯ್ ಸಾಥ್..*
ನೀವು ಗಮನಿಸಿರಬಹುದು, ಸಾಮಾನ್ಯವಾಗಿ ಪ್ರಶಾಂತ್ ರ ಸಿನಿಮಾಗಳಲ್ಲಿ ನಾಯಕ ‘ಲಾರ್ಜರ್ ದಾನ್ ಲೈಫ್, ಅಸಾಮಾನ್ಯ’ ಎಂಬಂತಿರುತ್ತಾರೆ. ಆದರೆ, ಇದರ ಜೊತೆ-ಜೊತೆಗೆ ಪ್ರಶಾಂತ್, ಪ್ರೇಕ್ಷಕರು ನಾಯಕನೊಂದಿಗೆ ಒಂದು ಬಗೆಯ ಸಂಪರ್ಕ ಸಾಧಿಸಲು ಸಾಧ್ಯವಾಗುವಂತೆ ಭಾವನಾತ್ಮಕ ಅಂಶಗಳುಳ್ಳ ದೃಶ್ಯಗಳನ್ನು ರೂಪಿಸಿರುತ್ತಾರೆ. ಉದಾಹರಣೆಗೆ, ಕೆಜಿಎಫ್‌ನಲ್ಲಿ ರಾಕಿ ಭಾಯ್ ಗೆ ತಾಯಿಯೊಂದಿಗಿರುವ ಭಾವನಾತ್ಮಕ ಬಂಧ.ನಾನು ಪ್ರತಿ ಸಿನಿಮಾವನ್ನು ಫ್ಯಾಂಟಸಿಯಂತೆ ನೋಡುತ್ತೇನೆ. ನನ್ನ ಚಲನಚಿತ್ರಗಳು ಅವರ ಜಗತ್ತನ್ನು ನಿಮಗೆ ಮನವರಿಕೆ ಮಾಡಬೇಕು ಮತ್ತು ಅದು ಹೊಸ, ವಿಭಿನ್ನ ಜಗತ್ತಾಗಿರಬೇಕು. ಅದು ಸ್ವಲ್ಪ ಹೆಚ್ಚಾಗಿಯೇ ಇದೆ ಅಥವಾ ತುಂಬಾ ಅಲಂಕಾರಿಕವಾಗಿದೆ ಎಂಬ ಭಾವನೆಯುಂಟಾದರೆ, ನಾನು ಯಶಸ್ವಿಯಾಗಿದ್ದೇನೆ ಎಂದರ್ಥ ಎನ್ನುತ್ತಾರೆ.
ಇನ್ನೂ ಓದಿ *ತಮಿಳು ಚಿತ್ರ ನಟ ದಳಪತಿ ವಿಜಯ್ ಸಿನಿಮಾಗೆ ಗುಡ್ ಬೈ ಹೇಳಲಿದ್ದಾರೆ! ರಾಜಕೀಯ ಎಂಟ್ರಿಗೆ ಸಿದ್ದತೇನಾ?*
ಇನ್ನು ಪ್ರಶಾಂತ್ ನೀಲ್ ರ ಸಿನಿಮಾಗಳಲ್ಲಿ ತಂತ್ರಜ್ಞಾನದ ಗರಿಷ್ಠ ಪ್ರಯೋಗವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞರೇ ಇವರ ಸಿನಿಮಾಗಳ ಹೀರೋ ಎಂದರೆ ತಪ್ಪಿಲ್ಲ.ಇವರ ಪ್ರತಿಯೊಂದು ಪ್ರಾಜೆಕ್ಟ್‌ನಲ್ಲಿ ಅತ್ಯುನ್ನತ ಸಿನಿಮಾ ತಂತ್ರಜ್ಞರಾದ ಸಂಗೀತ ನಿರ್ದೇಶಕ ರವಿ ಬಸ್ರೂರ್, ಸಂಕಲನಕಾರ ಉಜ್ವಲ್ ಕುಲಕರ್ಣಿ (ಉಗ್ರಮ್ ಹೊರತುಪಡಿಸಿ) ಮತ್ತು ಛಾಯಾಗ್ರಾಹಕ ಭುವನ್ ಗೌಡ ಇದ್ದೇ ಇರುತ್ತಾರೆ.ನಿರ್ದೇಶಕರ ದೃಷ್ಟಿಯಲ್ಲಿ ನಿರ್ಮಾಣ ಸಂಸ್ಥೆಯು ಆತನ ಮೇಲಿಡುವ ನಂಬಿಕೆ ಹಾಗೂ ನೀಡುವ ಬೆಂಬಲ ಬಹುಳ ಮುಖ್ಯುವಾಗುತ್ತದೆ. ಪ್ರಶಾಂತ್ ನೀಲ್ ಈ ವಿಚಾರದಲ್ಲಿ ಅದೃಷ್ಟವಂತರೆಂದೇ ಹೇಳಬೇಕು.ಏಕೆಂದರೆ, ಹೊಂಬಾಳೆ ಫಿಲಂಸ್ ಬಜೆಟ್ ವಿಷಯದಲ್ಲಿ ಪ್ರಶಾಂತ್ ಗೆ ಎಂದೂ ನಿರ್ಬಂಧ ಹೇರಿಲ್ಲವಂತೆ. ಹೊಂಬಾಳೆ ಫಿಲಂ ನ ವಿಜಯ್ ಕಿರಂಗದೂರು ಪ್ರಶಾಂತ್ ರ ಪರಿಕಲ್ಪನೆಗಳನ್ನು ದೃಶ್ಯ ರೂಪಕ್ಕೆ ತರಲು ಸಾಕಷ್ಟು ಹಣವನ್ನು ಒದಗಿಸಿಕೊಟ್ಟಿದ್ದಾರೆ.
ಇನ್ನೂ ಓದಿ *ಸೆಟ್ಟೇರಿದ ಪೊನ್ನಿಯಿನ್ ಸೆಲ್ವನ್ ಸ್ಟಾರ್ ಜಯಂರವಿ ಹೊಸ ಸಿನಿಮಾ…ಚೆನ್ನೈನಲ್ಲಿ ’ಜೀನಿ’ ಅದ್ಧೂರಿ ಮುಹೂರ್ತ*
ಹೊಂಬಾಳೆ ಫಿಲಂಸ್ ನ ಕೆಜಿಎಫ್ ಚಾಪ್ಟರ್ 1 ಅನ್ನು 80 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು ಹಾಗೂ ಅದು ಬಾಚಿಕೊಂಡಿದ್ದು, ಸುಮಾರು 230 ಕೋಟಿ ರೂಪಾಯಿಗಳನ್ನು. ಇನ್ನು ಇದರ ಭಾಗ 2 ಅನ್ನು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಥಿಯೇಟರ್‌ಗಳಲ್ಲಿ ಬರೋಬ್ಬರಿ 1500 ಕೋಟಿ ರೂಪಾಯಿಗಳನ್ನು ಗಳಿಸಿತ್ತು.ವಾಸ್ತವವಾಗಿ, ಕೆಜಿಎಫ್ ಚಾಪ್ಟರ್ 2 ಆ ಸಮಯದಲ್ಲಿ ತಯಾರಾದ ಅತ್ಯಂತ ದುಬಾರಿ ಕನ್ನಡ ಚಲನಚಿತ್ರವಾಗಿತ್ತು.ಕೆಜಿಎಫ್ ಚಾಪ್ಟರ್ 1 ಸೂಪರ್‌ಹಿಟ್ ಆದಾಗ ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಮಾತನಾಡಿದ ಪ್ರಶಾಂತ್, “ನಾನು ಪ್ಯಾನ್-ಇಂಡಿಯಾ ಚಲನಚಿತ್ರವನ್ನು ಆಕಸ್ಮಿಕವಾಗಿ ಮಾಡಿದ್ದೇನೇ ಹೊರತು, ಯೋಜಿಸಿ ಮಾಡಿದ್ದಲ್ಲ” ಎಂದು ಹೇಳಿದ್ದರು.