Sandalwood Leading OnlineMedia

*ಪ್ರಶಾಂತ್ ನೀಲ್ ನಿರ್ದೇಶನದ ಸಾಲಾರ್ ಮೇಲೆ ಅಭಿಮಾನಿಗಳ ಕಾತರ*

ಪ್ರಭಾಸ್ ಫ್ಯಾನ್ಸ್ ಗೆ ಇನ್ನೂ ಸಲಾರ್ ನ  ರೋಚಕ ಅಪ್ಡೇಟ್ಸ್ ಗಳು, ಆದಿಪುರುಷ್ ಫ್ಲಾಪ್ ನ  ನಂತರ, ಅಭಿಮಾನಿಗಳ  ಕಾತರ   ಪ್ರಶಾಂತ್ ನೀಲ್ ನಿರ್ದೇಶನದ  ಸಲಾರ್ ಮೇಲೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿಮಾನಿಗಳು ಸಲಾರ್ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ.ಸೆಪ್ಟೆಂಬರ್ 28 ರಂದು ಪ್ರೇಕ್ಷಕರ ಮುಂದೆ ತರುವುದಾಗಿ ತಯಾರಕರು ಈಗಾಗಲೇ ಘೋಷಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದು, ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಜಗಪತಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಲಯಾಳಂ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸುತ್ತಿದ್ದು, ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇನ್ನೂ ಓದಿ *Exclusive interview : ಮಾರಕಾಸ್ತ್ರ ಚಿತ್ರ ನಿರ್ದೇಶಕರಾದ ಗುರುಮೂರ್ತಿ ಸಂದರ್ಶನ*

ಇತ್ತೀಚೆಗೆ ನಿರ್ಮಾಪಕರು ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಟೀಸರ್ ದಿನಾಂಕ ಘೋಷಣೆ ಮಾಡಿದ್ದಾರೆ. ಸಲಾರ್ ಚಿತ್ರದ ಟೀಸರ್ ಇದೇ ಜುಲೈ 6 ರಂದು ಬೆಳಗ್ಗೆ 5.12ಕ್ಕೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆಯಾಗಲಿದೆ.ಈ ಪೋಸ್ಟ್‌ #SalaarTeaser ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಪೋಸ್ಟರ್‌ನಿಂದ ಅಭಿಮಾನಿಗಳ ನಿರೀಕ್ಷೆಗಳು ಮುಂದಿನ ಹಂತಕ್ಕೆ ತಲುಪಿವೆ. ಪೋಸ್ಟರ್‌ನಲ್ಲಿ ಪ್ರಭಾಸ್ ಅವರ ಲುಕ್ ಅನ್ನು ಹಿಂದಿನಿಂದ ತೋರಿಸಲಾಗಿದೆ. ನಾಯಕ ತನ್ನ ಕೈಯಲ್ಲಿ ಕೊಡಲಿ ಹಿಡಿದು ಮಾಸ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಪೋಸ್ಟರ್ ಹೈ ರೇಂಜ್ ನಲ್ಲಿದೆ. ಸಿನಿಮಾ ಖಂಡಿತಾ ಬ್ಲಾಕ್ ಬಸ್ಟರ್ ಆಗುತ್ತೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

Share this post:

Translate »