ಪ್ರಶಾಂತ್ ನೀಲ್ ಅವರು ‘ಸಲಾರ್: ಸೀಸ್ಫೈರ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಇದಾದ ಬಳಿಕ ಅವರು ‘ಸಲಾರ್ 2’ ಕೈಗೆತ್ತಿಕೊಳ್ಳುತ್ತಾರಾ ಅಥವಾ ‘NTR31’ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಇನ್ನೂ ಓದಿ
ಪ್ರಶಾಂತ್ ನೀಲ್ ಅವರ ನಿರ್ದೇಶನದ, ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಸದ್ದು ಮಾಡಿದೆ.ಟೀಸರ್ನಲ್ಲಿ ‘ಸಲಾರ್ 2’ ಬರುವ ವಿಚಾರವನ್ನು ರಿವೀಲ್ ಮಾಡಲಾಯಿತು. ಸದ್ಯ ಈ ವಿಚಾರ ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಇದಕ್ಕೂ ಕಾರಣ ಇದೆ. ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಸಿನಿಮಾ ಅನೌನ್ಸ್ ಆಗಿ ಈಗಾಗಲೇ ಬಹಳ ಸಮಯ ಕಳೆದಿದೆ. ಇವರ ಕಾಂಬಿನೇಷನ್ನ ಸಿನಿಮಾ ನೋಡಲು ಕಾದಿರುವ ಫ್ಯಾನ್ಸ್ಗೆ ‘ಸಲಾರ್ 2’ ನಿರ್ಧಾರ ಕೊಂಚ ಆಂತಕ ಮೂಡಿಸಿದೆ.
ಇನ್ನೂ ಓದಿ“13” ಐಟಂ ಸಾಂಗ್ ಬಿಡುಗಡೆ
ಜೂನಿಯರ್ ಎನ್ಟಿಆರ್ ಅವರು ‘ಆರ್ಆರ್ಆರ್’ ಸಿನಿಮಾ ಮೂಲಕ ದೊಡ್ಡ ಯಶಸ್ಸು ಕಂಡಿದ್ದಾರೆ. ರಾಜಮೌಳಿ ಜೊತೆ ಕೆಲಸ ಮಾಡಿದ ಬಳಿಕ ಒಂದು ಸೋಲು ಖಚಿತ ಎನ್ನುವ ನಂಬಿಕೆ ಅನೇಕರಲ್ಲಿದೆ. ಈ ಕಾರಣಕ್ಕೆ ‘ದೇವರ’ ಸಿನಿಮಾ ಸೋಲಬಹುದೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಒಂದೊಮ್ಮೆ ಹಾಗಾದರೆ ‘NTR31’ ಸಿನಿಮಾ ಬಗ್ಗೆ ಅವರು ಹೆಚ್ಚು ಗಮನ ಹರಿಸಬೇಕಾಗುತ್ತದೆ.
ಇನ್ನೂ ಓದಿ*ನೀವೆಂದೂ ಕೇಳಿರದ ಬೆಚ್ಚಬೀಳಿಸೋ ಕಥೆ ಹೊತ್ತು ತಂದಿದೆ ಅಂಬುಜ ಚಿತ್ರ….ಜುಲೈ 21ಕ್ಕೆ ಶುಭಾ-ರಜನಿ ಸಿನಿಮಾ ತೆರೆಗೆ*
ಸದ್ಯ ಪ್ರಶಾಂತ್ ನೀಲ್ ಅವರು ‘ಸಲಾರ್: ಸೀಸ್ಫೈರ್’ ಚಿತ್ರದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ಇದಾದ ಬಳಿಕ ಅವರು ‘ಸಲಾರ್ 2’ ಕೈಗೆತ್ತಿಕೊಳ್ಳುತ್ತಾರಾ ಅಥವಾ ‘NTR31’ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.ಇನ್ನು, ಜೂನಿಯರ್ ಎನ್ಟಿಆರ್ ಕೂಡ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ದೇವರ’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ‘ವಾರ್ 2’ ಚಿತ್ರ ಕೂಡ ಒಪ್ಪಿಕೊಂಡಿದ್ದು, ಹೃತಿಕ್ ರೋಷನ್ಗೆ ಜೊತೆಯಾಗಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾಕಷ್ಟು ಆಯಕ್ಷನ್ ಇರಲಿದೆ.
ಇನ್ನೂ ಓದಿ*ಬಿಡುಗಡೆಯಾಯಿತು ‘ಜವಾನ್’ ಚಿತ್ರದ ಪ್ರಿವ್ಯೂ* .
ಇತ್ತೀಚೆಗೆ ವರದಿ ಆದ ಪ್ರಕಾರ ‘ದೇವರ’ ಸಿನಿಮಾ ಕೆಲಸ ಪೂರ್ಣಗೊಂಡ ಬಳಿಕ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾದಲ್ಲಿ ಪ್ರಶಾಂತ್ ನೀಲ್ ಅವರು ‘ಸಲಾರ್ 2’ ಅಥವಾ ‘ಕೆಜಿಎಫ್ 3’ ಕೆಲಸ ಶುರು ಮಾಡಬೇಕಾಗುತ್ತದೆ. ಇದು ಈಗ ಜ್ಯೂ,ಎನ್. ಟಿ. ಆರ್ ಅಭಿಮಾನಿಗಳಲ್ಲಿ ಇರುಸು- ಮುರುಸು ಮಾಡಿದೆ.