ಪ್ರೀತಿ ಎನ್ನುವುದು ವರ್ಣಿಸಲಾಗದ ಭಾವನೆ. ಪ್ರೀತಿಗೆ ಸಾವಿರ ಅರ್ಥಗಳು. ಅದನ್ನು ತೋರ್ಪಡಿಸಲು ನೂರಾರು ಬಗೆ. ಈ ನಿಟ್ಟಿನಲ್ಲಿ, ಪ್ರೀತಿಯನ್ನು ಆಧಾರವನ್ನಾಗಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಕಲ್ಪಿಸಿಕೊಂಡಿದೆ. ಇದೇ ಸಾಲಿನಲ್ಲಿ `ಪ್ರಣಯಂ’ ಸಿನಿಮಾದ ಮೂಲಕ ಒಂದು ಮಾಡರ್ನ್ ಅಮರ ಕಥೆಯನ್ನು ಹೇಳ ಹೊರಟಿದೆ ಒಂದು ಚಿತ್ರತಂಡ. ದತ್ತಾತ್ರೇಯ ನಿರ್ದೇಶನದಲ್ಲಿ `ಪ್ರಣಯಂ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದ್ದು, ರಾಜವರ್ಧನ್ ನಟಿಸಿದ್ದಾರೆ. ರಾಜವರ್ಧನ್ ಜೊತೆಯಾಗಿ ನೈನಾ ಗಂಗೂಲಿ ನಾಯಕಿಯಾಗಿ ನಟಿಸಿದ್ದಾರೆ. ಬೆಂಗಾಲಿ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕೆಲಸ ಮಾಡಿರುವ ನೈನಾ ಗಂಗೂಲಿ `ಪ್ರಣಯಂ’ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಶಿಡ್ಲಘಟ್ಟದಲ್ಲಿ ಫೆಬ್ರವರಿ 26 ರಂದು `ಕಬ್ಜ’ ಮೇನಿಯಾ!
`ಮಾನ್ಸಿ ವೆಂಚರ್ಸ್’ ಸಹಯೋಗದಲ್ಲಿ `ಪಿ೨ ಪ್ರೊಡಕ್ಷನ್ಸ್’ನ ಪರಮೇಶ್ ಅವರು ನಿರ್ಮಾಣ ಮಾಡಿದ್ದು, ಈ ಹಿಂದೆ ಅಂಬಾರಿ, ಪಲ್ಲಕ್ಕಿ, ಪಾರಿಜಾತ, ಓ ಗುಲಾಬಿ, ಗಣಪ ಮತ್ತು ಕರಿಯ-೨ಗೆ ಬಂಡವಾಳ ಹೂಡಿ, ಸದಭರುಚಿಯ ನಿರ್ಮಾಪಕ ಎಂಬುದನ್ನು ಸಾಬೀತು ಪಡಿಸಿದ್ದರು. ಚಿತ್ರಕ್ಕೆ ಮನೋಮೂರ್ತಿ ಸಂಗೀತ ನಿರ್ದೇಶನ, ನಾಗೇಶ್ ಆಚಾರ್ಯ ಛಾಯಾಗ್ರಹಣ ಮತ್ತು ಮದನ್ ಹರಿಣಿ ನೃತ್ಯ ಸಂಯೋಜನೆಯಿದೆ. ಇನ್ನು, ಉಪೇಂದ್ರ ಅವರ ಬ್ಲಾಕ್‌ಬ್ಲಸ್ಟರ್ ಚಿತ್ರಗಳಿಗೆ ಸಂಕಲನಕಾರರಾಗಿ ದುಡಿದಿದ್ದ ಕೆ.ಗಿರೀಶ್ ಕುಮಾರ್ ಅವರು `ಪ್ರಣಯಂ’ ಚಿತ್ರದ ಸಂಕಲದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

SK Bhagavan: ಕನ್ನಡ ಚಿತ್ರರಂಗದ ದಂತಕಥೆ, ಹಿರಿಯ ನಿರ್ದೇಶಕ ಭಗವಾನ್ ಇನ್ನಿಲ್ಲ
`ಪ್ರಣಯಂ’ ಚಿತ್ರದ ನಿರ್ಮಾಪಕ ಪರಮೇಶ್ ನಿರ್ಮಾಣದ ಒಂಭತ್ತನೇ ಸಿನಿಮಾ. ಸಿನಿಮಾ ರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಹೆಬ್ಬೆಯಕೆಯಿಂದ ಕಾಲಿಟ್ಟ ಇವರು ನಿರ್ಮಿಸಿದ ಎಲ್ಲಾ ಚಿತ್ರಗಳೂ ಪ್ರಶಂಸೆಗೆ ಒಳಗಾದ ಚಿತ್ರಗಳೇ. ಈ ನಿಟ್ಟಿನಲ್ಲಿ `ಪ್ರಣಯಂ’ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈಗಾಗಲೇ ಪೋಸ್ಟರ್‌ಗಳಿಂದ ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿರುವ `ಪ್ರಣಯಂ’ ಚಿತ್ರದ ಟೀಸರ್ ಫೆಬ್ರವರಿ 27ರಂದು ರಿಲೀಸ್ ಆಗಲಿದ್ದು, ನಿರೀಕ್ಷೆ ಇನ್ನಷ್ಟು ಹೆಚ್ಚಿಸುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.