ಸ್ಯಾಂಡಲ್‌ವುಡ್ ಬ್ಯೂಟಿ ಪ್ರಣಿತಾ ಸುಭಾಷ್, ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ತಮ್ಮ ಮುದ್ದು ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಿದ್ದಾರೆ. ಆ ಕ್ಷಣಗಳನ್ನು ಫೋಟೋ ಮತ್ತು ವಿಡಿಯೋ ರೂಪದಲ್ಲಿ ಸೆರೆ ಹಿಡಿದು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
ಇದೀಗ ಮಗುವಿಗೆ ಯಾವ ಹೆಸರಿನಿಂದ ಕರೆಯುತ್ತಾರೆ ಎನ್ನುವುದನ್ನೂ ಚೆಂದದೊಂದು ಫೋಟೋಶೂಟ್ ಮಾಡಿಸಿ, ಅಭಿಮಾನಿಗಳಿಗೆ ಪರಿಚಯಸಿದ್ದಾರೆ. ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.
ತಮ್ಮ ಮುದ್ದಾದ ಮಗಳಿಗೆ ಆರ್ನಾ ಎಂದು ಪ್ರಣಿತಾ ಹೆಸರಿಟ್ಟಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಆರ್ನಾ ಫೋಟೋವನ್ನು ಹಂಚಿಕೊಂಡಿರುವ ಪ್ರಣಿತಾ, ‘ಆರ್ನಾಳನ್ನು ಪರಿಚಯಿಸುತ್ತಿದ್ದೇನೆ..’ ಎಂದು ಹೇಳಿಕೊಂಡಿದ್ದಾರೆ.
ಅಭಿಮಾನಿಗಳು ಮಗಳ ಫೋಟೋ ನೋಡಿ ಕಾಮೆಂಟ್ ಮಾಡುತ್ತಿದ್ದಾರೆ ಅಂದಹಾಗೆ, 2021ರ ಮೇ ತಿಂಗಳಿನಲ್ಲಿ ಉದ್ಯಮಿ ನಿತಿನ್ ರಾಜು ಅವರ ಜೊತೆಗೆ ಪ್ರಣಿತಾ ಸುಭಾಷ್ ಸಪ್ತಪದಿ ತುಳಿದಿದ್ದರು.
ಕನ್ನಡದ ‘ಪೊರ್ಕಿ’ ಸಿನಿಮಾ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಬಹುಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಸಹ ಅವರು ಅಭಿನಯಿಸಿ, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಈ ಮೊದಲು ಪ್ರಣಿತಾ ಸುಭಾಷ್ ಅವರಿಗೆ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಅವರೇ ಸ್ವತಃ ಇನ್ಸ್ಟಾಗ್ರಾಂ ಮಗುವಿನೊಂದಿಗಿನ ಫೋಟೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದರು. ಅಲ್ಲದೇ, ನಂತರ ಮಗುವಿನ ವಿಡಿಯೋ ಹಂಚಿಕೊಂಡಿದ್ದು, ಆ ವಿಡಿಯೋ ಮೂಲಕ ಮಗುವಿನ ಮುಖ ರಿವೀಲ್ ಮಾಡಿದ್ದರು.
https://www.instagram.com/p/CgtCRx6PCW5/
ಇನ್ನು ಪ್ರಣೀತಾ ತಮ್ಮದೇ ಆದ ಫೌಂಡೇಶನ್ ಮಾಡಿಕೊಂಡು ಅದರ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದ್ದಾರೆ. ಜೊತೆಗೆ ಲಾಕ್ಡೌನ್ನಲ್ಲಿ ಸಮಯದಲ್ಲಿ ಸಂಕಷ್ಟದಲ್ಲಿದ್ದ ಜನರಿಗೆ ಆಹಾರ ಹಾಗೂ ದಿನಸಿ ಕಿಟ್ಗಳನ್ನು ನೀಡುವ ಮೂಲಕ ಜನರ ಕಷ್ಟಕ್ಕೆ ನೆರವಾಗಿದ್ದರು.