Left Ad
Pranayam Movie Review: ಪ್ರಣಯದೊಳಗೊಂದು ಹಾರರ್ ಕಥನ - Chittara news
# Tags

Pranayam Movie Review: ಪ್ರಣಯದೊಳಗೊಂದು ಹಾರರ್ ಕಥನ

RATING

ರೊಮ್ಯಾಂಟಿಕ್, ಫ್ಯಾಮಿಲಿ ಡ್ರಾಮಾ, ಮತ್ತು ಹಾರರ್ ನೆರಳಿನಲ್ಲಿ ಮೂಡಿ ಬಂದಿರುವ interesting screenplay ಇರುವ ಚಿತ್ರ ‘ಪ್ರಣಯಂ’. ಸಿನಿಮಾ titleಗೆ ತಕ್ಕ‌ಂತೆ, ಸಿನಿಮಾ ತುಂಬಾ ಪ್ರೀತಿ-ಪ್ರೇಮ-ಪ್ರಣಯಕ್ಕೆ ಸಾಕಷ್ಟು‌ ಜಾಗ ನೀಡಲಾಗಿದೆ. Engagement, marriage, family dramaದ ಮೂಲಕ‌ interesting ಆಗಿ ತೆರೆದುಕೊಳ್ಳುವ ‌ಸಿನಿಮಾ, ಮುಂದೆ twist&turns ಮೂಲಕ ಪ್ರೇಕ್ಷಕನಿಗೆ ಹತ್ತಿರವಾಗುತ್ತದೆ. ನಿರ್ದೇಶಕರು ಪ್ರತಿಯೊಂದು frame ಬಗ್ಗೆಯೂ ಆಸ್ಥೆಯಿಂದ ಕೆಲಸ ಮಾಡಿದ್ದು ತರೆ‌ಮೇಲೆ ಕಾಣಿಸುತ್ತದೆ. ಇದೇ ಕಾರಣದಿಂದ ಕಥೆಗೆ, ಸನ್ನಿವೇಶಗಳು‌ ಪೂರಕವಾಗಿ‌ ಮೂಡಿ‌ ಬಂದಿದೆ.

 

READ MORE  Ondu Sarala Prema Kathe Movie Review: ಬಾಳು `ಸರಳ’, ಪ್ರೇಮ `ವಿರಳ’.. ವಿಧಿ ಕರಾಳ!

 

ಆರಂಭದಿಂದಲೇ‌ ಮನೋರಂಜನೆಯನ್ನು‌ ನೀಡುತ್ತಾ ಬರುವ ನಿರ್ದೇಶಕರು climax ಹಂತಕ್ಕೆ ಬರುವಾಗ ಅಚ್ಚರಿ‌ ಮೂಡಿಸುತ್ತಾರೆ. ‘ಪ್ರಣಯ ಹೀಗೂ ಇರುತ್ತಾ’ ಅನ್ನುವ ಗಂಭೀರ ಪ್ರಶ್ನೆಯನ್ನು ನೋಡುಗನಲ್ಲಿ ತುಂಬುತ್ತಾರೆ. ರೊಮ್ಯಾನ್ಸ್ ಮೂಡ್ ನಿಂದ ಪ್ರೇಕ್ಷಕರನ್ನು ನಾಜೂಕಾಗಿ ಹಾರರ್ ಫೀಲ್‌ಗೆ ಕರೆತರುವ ನಿರ್ದೇಶಕರ‌ ಜಾಣ್ಮೆ‌ ಮೆಚ್ಚಬೇಕಾದದ್ದೇ.ರೊಮ್ಯಾಂಟಿಕ್ ಸಿನಿಮಾ ಹಾರರ್ ಆಗಿ ಬದಲಾಗುವ screenplay magic ಅನ್ನು ತೆರೆಯ ಮೇಲೆ‌ ನೋಡಿಯೇ ಅನುಭವಿಸಬೇಕು. ಪ್ರಣಯದ ಜೊತೆ suspense ಅಂಶಗಳು ಸಾಗುವುದರಿಂದ ಸಿನಿಮಾ ಪ್ರೇಕ್ಷಕರ ತಾಳ್ಮೆಯನ್ನು ಬೇಡುವುದಿಲ್ಲ. Mansvi Ventures & P2 productions ಅಡಿಯಲ್ಲಿ ಸಿನಿಮಾ‌ ನಿರ್ಮಾಣ ಮಾಡಿರುವ ನಿರ್ಮಾಪಕರಾದ ಪರಮೇಶ್‌ ಅವರೇ ‘ಪ್ರಣಯಂ’ನ ಕಥೆ ಹೆಣೆದಿರೋದು ವಿಶೇಷ.

READ MORE  Baanadariyalli Review: ದಾರಿ ತಪ್ಪಿದ ಬಾನ`ದಾರಿ’, ಪ್ರೇಕ್ಷಕನಿಗಿದು ದುಬಾರಿ!

Camera work, costumes, music ಎಲ್ಲವೂ ಕಥೆಗೆ ಪೂರಕವಾಗಿ‌ ಮೂಡಿಬಂದಿದೆ. ಅದರಲ್ಲೂ editor ಗಿರೀಶ್‌ ಕುಮಾರ್ ಅವರ ಕೆಲಸ ಮೆಚ್ಚಬೇಕಾದ್ದೇ, ಏಕಂದರೆ horror/suspense thriller ಕಥೆಗಳು editorಗೆ‌ ನಿಜಕ್ಕೂ‌challenging. ಈ‌ ನಿಟ್ಟಿನಲ್ಲಿ editor ಅದ್ಭುತವಾಗಿ ತಮ್ಮ ಕೆಲಸವನ್ನು ‌ನಿಭಾಯಿಸಿದ್ದಾರೆ. ನಾಯಕ ರಾಜವರ್ಧನ್ ಆ್ಯಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆದು, ಭಾವನಾತ್ಮಕ‌ ನಟನೆಯ ಮೂಲಕ ಒಂದು mature performance ನೀಡಿದ್ದಾರೆ. ನಾಯಕಿ ನೈನಾ ಗಂಗೂಲಿ ಗ್ಲಾಮರ್‌ & ಸಿನಿಮಾ‌ ಗ್ರಾಮರ್‌ ಎರಡನ್ನೂ ಕರಗತ ಮಾಡಿಕೊಂಡಿದ್ದು ಚಿತ್ರದುದ್ದಕ್ಕೂ ಕಾಣುತ್ತದೆ. ರೊಮ್ಯಾಂಟಿಕ್ ಸಿನಿಮಾ ಇಷ್ಟಪಡುವ youthsಗೆ ‘ಪ್ರಣಯಂ’ best option.

Spread the love
Translate »
Right Ad