Sandalwood Leading OnlineMedia

`ಕಾಶೀಯಾತ್ರೆ’ ಹೋಗ್ತಾರಂತೆ  ಪ್ರಮೋದ್ ಶೆಟ್ಟಿ!

 Kaashiyaatre | Pramod Shetty – Birthday Teaser

 

ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ಪ್ರಮೋದ್ ಶೆಟ್ಟಿ ಮೊಟ್ಟಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿರುವ ಚಿತ್ರ “ಕಾಶೀಯಾತ್ರೆ”.ಇತ್ತೀಚೆಗೆ ಪ್ರಮೋದ್ ಶೆಟ್ಟಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ  ಪ್ರಮೋದ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. “ಕಾಶೀಯಾತ್ರೆ” ಗೆ ಹೊರಟಿರುವ ಮಧುಮಗನ ವೇಷದಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಅವರ ವಿಭಿನ್ನ ಲುಕ್ ಎಲ್ಲರ ಗಮನ ಸೆಳೆಯುತ್ತಿದೆ.

 

 ಚಿತ್ರಪ್ರೇಮಿಗಳಿಗೆ  ‘ಕಿಕ್’ಕೊಡಲು ಸಜ್ಜಾದ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ರಾಜ್

 

 

ನೋಡುಗರನ್ನು ನಗೆಗಡಲಿನಲ್ಲಿ ತೇಲಿಸುವ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಿನಯ್ ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. ಕಿರುಚಿತ್ರ ನಿರ್ದೇಶಿಸಿರುವ ವಿನಯ್ ಶಾಸ್ತ್ರಿ ಅವರಿಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ.gunnybag studios ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿಶ್ವಿ ಸಂಗೀತ ನಿರ್ದೇಶನ ಹಾಗೂ ಸುನೀತ್ ಹಲಗೇರಿ ಅವರ ಛಾಯಾಗ್ರಹಣವಿದೆ‌.ಸೆಪ್ಟೆಂಬರ್ 12ರಿಂದ ಬೆಂಗಳೂರು ಹಾಗೂ ಮೈಸೂರಿನಲ್ಲಿ “ಕಾಶೀಯಾತ್ರೆ” ಚಿತ್ರದ ಚಿತ್ರೀಕರಣ ನಡೆಯಲಿದೆ. ಪ್ರಮೋದ್ ಶೆಟ್ಟಿ, ಟಿ.ಎಸ್.ನಾಗಾಭರಣ, ಚಿತ್ತರಂಜನ್ ಕಶ್ಯಪ್, ಸ್ವರ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Share this post:

Related Posts

To Subscribe to our News Letter.

Translate »