ನಿರ್ಮಾಣ: ಚಿಂತನ್ ಕಂಬಣ್ಣ.ನಿರ್ದೇಶನ: ಸುಂದರ್ ಎಸ್.
ಪಾತ್ರವರ್ಗ: ಮಾಹಿನ್ ಕುಬೇರ್, ಮುತ್ತುರಾಜ್ ಟಿ, ಪ್ರದೀಪ್ ಕುಮಾರ್, ರಾಜ್ ಗಗನ್, ಶಿವು ಭೈರ, ಚಿಂತನ್ ಕಂಬಣ್ಣ, ಮಧು ಬಿಜೆ, ಗಣೇಶ್ ಆರ್.
ರೇಟಿಂಗ್:3/5
READ MORE ; ʻಯಾಕೆʼ.. ಸೆಟ್ಟೇರಿತು ವಿಭಿನ್ನ ಶಿರ್ಷಿಕೆಯ ಸಿನಿಮಾ
ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊತ್ತ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಮನೋರಂಜನೆಯ ಜೊತೆಗೆ ಸಮಾಜಕ್ಕೆ ಬೇಕಾದ ಸಂದೇಶವನ್ನೂ ನೀಡುತ್ತದೆ. ಈ ಪ್ರಯತ್ನ ಹೊಸಬರದ್ದಾದರೂ ಎಲ್ಲೂ ಹೊಸಬರ ಚಿತ್ರ ಅನ್ನುವ ಫೀಲ್ ಕೊಡುವುದಿಲ್ಲ. ನಿರ್ದೇಶಕ ಸುಂದರ್.ಎಸ್ ತಮ್ಮ ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಸುಂದರ್ ಅವರ ಸುಂದರ ಕನಸನ್ನು ಚಿಂತನ್ ಕಂಬಣ್ಣ ಅವರು ನಿರ್ಮಾಣದ ಮೂಲಕ ಪೂರ್ಣಗೊಳಿಸಿದ್ದಾರೆ. ಕೊಲೆ ರಹಸ್ಯದ ಕಥೆ ಹೊತ್ತ `ಪ್ರಕರಣ ತನಿಖಾ ಹಂತದಲ್ಲಿದೆ’ ತರಹದ ಚಿತ್ರಕ್ಕೆ ತನ್ನದೇ ಆದ ಪ್ರೇಕ್ಷಕ ವರ್ಗವಿದೆ. ಈ ವರ್ಗಕ್ಕೆ ಚಿತ್ರದಲ್ಲಿನ ಕೊಲೆಗಾರ ಯಾರು ಎಂಬುದನ್ನು ಪತ್ತೆ ಹಚ್ಚುವ ಕಥೆ ನಿಜಕ್ಕೂ ಒಂಥರಾ ಥ್ರಿಲ್ ನೀಡುವಲ್ಲಿ ಯಶಸ್ವಿಯಾಗಿದೆ. ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದಲ್ಲಿನ ಮರ್ಡರ್ ಮಿಸ್ಟರಿ ಕಹಾನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿದ್ದು, ಹೊಸ ಕಲಾವಿದರು ಕಮಾಲ್ ಮಾಡಿದ್ದಾರೆ. ನಟಿಸಿದ್ದಾರೆ.
ಡ್ರಗ್ಸ್ ಮಾಫಿಯಾದ ಮೂಲಕ ಬಿಚ್ಚಿಕೊಳ್ಳುವ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾದ ಕಥೆ, ಕೋಟ್ಯಂತರ ಬೆಲೆಯ ಮಾದಕ ವಸ್ತುವನ್ನು ಕಳ್ಳಸಾಗಣೆ ಮಾಡುವ ಜಾಲದಲ್ಲಿ ಖದೀಮರ ಸಮಾಜ ವಿರೋಧಿ ಕೆಲಸಗಳನ್ನು ಜನರ ಮುಂದಿಡುತ್ತಾ ಹೋಗುತ್ತದೆ. ಇದರ ಮಧ್ಯೆ ಅಚಾನಕ್ ಆಗಿ ಒಂದು ಕೊಲೆ ನಡೆದು ಹೋಗುತ್ತದೆ. ನಂತರ ಸಿನಿಮಾ ಹೊಸ ಹೊಸ ಟ್ವಿಸ್ಟ್ಗಳ ಮೂಲಕ ಇಂಟ್ರೆಸ್ಟಿ0ಗ್ ಆಗಿ ಸಾಗುತ್ತದೆ. ನಂತರ ಸಾಲು ಸಾಲು ಕೊಲೆ ನಡೆದು, ಸಿನಿಮಾದ ಕಥೆ ಮಹತ್ವದ ಘಟ್ಟಕ್ಕೆ ತಲುಪುತ್ತದೆ. ಈ ಸಿನಿಮಾದಲ್ಲಿರುವುದು ಕೆಲವೇ ಪಾತ್ರಗಳಾದರೂ, ಪ್ರತಿಯೊಂದು ಪಾತ್ರದ ಪಾತ್ರ ಪೋಷಣೆ ಅದ್ಭುತವಾಗಿ ಮೂಡಿಬಂದಿದೆ. ಹಲವು ಪಾತ್ರಗಳು ಕೊಲೆಯ ರುವಾರಿ ಎಚಿದು ಬಿಂಬಿಸಲಾಗುತ್ತಾದರೂ, ಕೊಲೆಗಾರ ಯಾರು ಎಂಬುದಕ್ಕೆ ಚಿತ್ರ ನೋಡಬೇಕು.
READ MORE ; ಸಕ್ಕತ್ ಸ್ಟುಡಿಯೋ ನಿರ್ಮಾಣದ ಮರ್ಯಾದೆ ಪ್ರಶ್ನೆ ಸಿನಿಮಾದಿಂದ ಒಂದು ಮಿಡ್ಲ್ ಕ್ಲಾಸ್ ಆಂತೆಮ್
ನಾನಿ ಕೃಷ್ಣ ಅವರ ಎಡಿಂಟಿ0ಗ್ ಈ ಸಿನಿಮಾದ ಪ್ಲಸ್ ಪಾಯಿಂಟ್. ಯಾವುದೇ ಅನಗತ್ಯ ದೃಶ್ಯಗಳನ್ನು ಸೇರಿಸದೇ, ಮುಖ್ಯವಾದ ವಿಷಯದ ಮೇಲೆಯೇ ಸಿನಿಮಾ ಸಾಗುವಂತೆ ಅವರು ಗಮನ ಹರಿಸಿದ್ದಾರೆ. ಬಹುತೇಕ ಹೊಸ ಕಲಾವಿದರೇ ನಟಿಸಿರುವುದರಿಂದ ಯಾವ ಪಾತ್ರದ ಬಗ್ಗೆಯೂ ಪೂರ್ವಾಗ್ರಹ ಇಲ್ಲದೇ ನೋಡಿಸಿಕೊಂಡು ಹೋಗುವ ಗುಣ ಈ ಸಿನಿಮಾಗಿದೆ. ಒಂದು ಸಸ್ಪೆನ್ಸ್ ಕಥೆಗೆ ಇರಬೇಕಾದ ಮುಖ್ಯ ಆಧಾರವಿದು. ಆ ವಿಚಾರದಲ್ಲಿ ‘ಪ್ರಕರಣ ತನಿಖಾ ಹಂತದಲ್ಲಿದೆ’ ಸಿನಿಮಾ ಗಮನ ಸೆಳೆಯುತ್ತದೆ. ರಂಗಭೂಮಿ ಪ್ರತಿಭೆ ಮಾಹಿನ್ ಕುಬೇರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ತಾನೊಬ್ಬ ಉತ್ತಮ ನಟ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಉಳಿದಂತೆ ಚಿಂತನ್ ಕಂಬಣ್ಣ, ರಾಜ್ ಗಗನ್, ಮುತ್ತುರಾಜ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ವೈದ್ಯನಾಗಿ ಎರಡು ಶೇಡ್ ಇರುವ ಪಾತ್ರದಲ್ಲಿ ಚಿಂತನ್ ಕಂಬಣ್ಣ ಅವರು ಕಾಣಿಸಿಕೊಂಡಿದ್ದು, ಆ ಪಾತ್ರ ಪ್ರೇಕ್ಷಕರಿಗೆ ಒಂದು ವಿಭಿನ್ನ ಅನುಭೂತಿ ನೀಡುತ್ತದೆ. ಶಿವೋಂ ಪ್ರಸಾದ್ ಅವರ ಸಂಗೀತ ಭಾಮಿನಿ ಶಟ್ಪದಿಯ ತೂಕ ಹೆಚ್ಚಿಸಿದೆ.
READ MORE ;ದೀಪಾವಳಿಗೆ ಬಘೀರನ ಅಬ್ಬರ ಶುರು; ಅ. 17ಕ್ಕೆ ಮೊದಲ ಹಾಡು
ಮೋಹನ್ ಮತ್ತು ಜಗದೀಶ್ ಅವರ ಛಾಯಾಗ್ರಹಣ, ಡಾ.ಶಿವಣ್ಣ ಅವರ ಸಾಹಿತ್ಯ ಸುಂದರ್ ಕಂಡ ಕನಸನ್ನು ನನಸು ಮಾಡಲು ಪೂರಕವಾಗಿದೆ. ಈ ಸಮಾಜದಲ್ಲಿ ಡ್ರಗ್ಸ್ ದೊಡ್ಡ ಪಿಡುಗಾಗಿದ್ದು, ಇಂದಿನ ಯುವ ಜನತೆಗೆ ಮಾರಕವಾಗಿರುವ ಮಾದಕ ದ್ರವ್ಯದ ಬಗ್ಗೆ ಎಚ್ಚರಿಕೆ ಸಂದೇಶ ನೀಡುವ ಪ್ರಯತ್ನವನ್ನು ‘ಪ್ರಕರಣ ತನಿಖಾ ಹಂತದಲ್ಲಿದೆ’ ಮಾಡಲಾಗಿದೆ. ಒಟ್ಟಿನಲ್ಲಿ ಹೊಸಬರ ‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರ ನಿಜಕ್ಕೂ ಮನೋರಂಜನೆಯ ಮೂಲಕ ಎಚ್ಚರಿಸುವ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿದೆ.