ಹುಟ್ಟು ಹಬ್ಬ ಆಚರಿಸದಿರಲು: ಪ್ರಜ್ವಲ್ ದೇವರಾಜ್ ಮನವಿ
ಜುಲೈ 4 ರಂದು ನಟ ಪ್ರಜ್ವಲ್ ದೇವರಾಜ್ ರವರ ಹುಟ್ಟುಹಬ್ಬ. ಸಂಪ್ರದಾಯದಂತೆ ಅಭಿಮಾನಿಗಳು ಪ್ರಜ್ವಲ್ ಮನೆ ಬಳಿ ಬಂದು, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ.
ಆದರೆ ಈ ಸಂಪ್ರದಾಯಕ್ಕೆ ಪ್ರಜ್ವಲ್ ಬ್ರೇಕ್ ಹಾಕಿದ್ದಾರೆ. ಅಭಿಮಾನಿಗಳೇ ದೇವರು, ಇತ್ತೀಚೆಗೆ ನನ್ನ ಅಭಿಮಾನಿಯನ್ನ ಕಳೆದುಕೊಂಡೆ ಅದೇ ನಿಟ್ಟಿನಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಬಟ್ ನಿಮ್ಮ ಪ್ರೀತಿ ಅಭಿಮಾನ ಆಶೀರ್ವಾದ ಸದಾ ನನ್ನ ಮೇಲೆ ಇರತ್ತೆ ಅನ್ನೋ ನಂಬಿಕೆ ಸದಾ ಇದೆ ಎಲ್ರೂ ಖುಷಿಯಾಗಿರಿ, ಪ್ರೀತಿನಾ ಹಂಚಿ, ಸುತ್ತಾ ಮುತ್ತಾ ಇರೋರನ್ನಾ ಚೆನ್ನಾಗಿ ನೋಡ್ಕೋಳಿ, ತಂದೆ ತಾಯಿಯರನ್ನ ಚೆನ್ನಾಗಿ ನೋಡ್ಕೋಳಿ, ನೀವೆಲ್ರು ಚೆನ್ನಾಗಿದ್ರೆ ನಾವೆಲ್ಲಾ ಚೆನ್ನಾಗಿರ್ತೀವಿ ಎಲ್ಲರಿಗೂ ನಮಸ್ಕಾರ ಎಂಬ ಮಾತುಗಳನ್ನ ವೀಡಿಯೋ ಮುಖಾಂತರ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.
https://www.instagram.com/p/Cfb25YAOsXu/