Sandalwood Leading OnlineMedia

ಮತದಾನದ ಮಹತ್ವ ತಿಳಿಸುವ “ಪ್ರಭುತ್ವ”. .

 

ಚೇತನ್ ಚಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರ ನವೆಂಬರ್ 22 ರಂದು ತೆರಗೆ .

ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳನ್ನು ಜನ ಹೆಚ್ಚಾಗಿ ಮೆಚ್ಚಿಕೊಳ್ಳುತ್ತಿದ್ದಾರೆ. ಅಂತಹುದೇ ಉತ್ತಮ ಕಂಟೆಂಟ್ ವುಳ್ಳ , ಮತದಾನದ ಮಹತ್ವ ತಿಳಿಸುವ ” “ಪ್ರಭುತ್ವ” ಈ ವಾರ(ನವೆಂಬರ್ 22) ತೆರೆ ಕಾಣುತ್ತಿದೆ. ಚೇತನ್ ಚಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದಾರೆ. ಮೇಘಡಹಳ್ಳಿ ಶಿವಕುಮಾರ್ ಕಥೆ ಬರೆದಿದ್ದಾರೆ. ಬಿಡುಗಡೆಯ ಬಗ್ಗೆ ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

ಪ್ರತಿಯೊಬ್ಬ ಮತದಾರರು ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವದ ಬಗ್ಗೆ ತಿಳಿಸುವ ಚಿತ್ರವಿದು. ಈ ಚಿತ್ರಕ್ಕೆ ನಾನೇ ಕಥೆ ಬರೆದಿದ್ದೇನೆ. ನನ್ನ ಮಗ ರವಿರಾಜ್ ಎಸ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ನವೆಂಬರ್ 22 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ದೀಪಕ್ ಗಂಗಾಧರ್ ಅವರು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಮೇಘಡಹಳ್ಳಿ ಡಾ||ಶಿವಕುಮಾರ್.

ಚಿತ್ರತಂಡದ ಸಹಕಾರದಿಂದ “ಪ್ರಭುತ್ವ” ಚೆನ್ನಾಗಿ ಮೂಡಿಬಂದಿದೆ. ದಯವಿಟ್ಟು ಎಲ್ಲರೂ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಎಂದು ನಿರ್ಮಾಪಕ ರವಿರಾಜ್ ಎಸ್ ಕುಮಾರ್ ತಿಳಿಸಿದರು.
ನಾನು ಚಿತ್ರ ನೋಡಿದೆ. ತುಂಬಾ ಚೆನ್ನಾಗಿದೆ. 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು ವಿತರಕ ದೀಪಕ್ ಗಂಗಾಧರ್.

ಇದು ನನ್ನ ಹನ್ನೆರಡನೇ ಸಿನಿಮಾ. ಬಹಳ ದಿನಗಳ ನಂತರ ನಿಮ್ಮ ಮುಂದೆ ಬರುತ್ತಿದ್ದೇನೆ. ಮೇಘಡಹಳ್ಳಿ ಡಾ||ಶಿವಕುಮಾರ್ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಹಾಗೂ ಎಲ್ಲಾ ಕಲಾವಿದರ ಅಭಿನಯ ಅದ್ಭುತವಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಾಯಕ ಚೇತನ್ ಚಂದ್ರ.

ಚಿತ್ರದಲ್ಲಿ ಅಭಿನಯಿಸಿರುವ ಆದಿ ಲೋಕೇಶ್, ವಿಜಯ್ ಚೆಂಡೂರ್, ಡ್ಯಾನಿ, ಸಂದೀಪ್,ಚಿತ್ರಕಥೆ, ಸಂಭಾಷಣೆ ಜೊತೆಗೆ ಸಹ-ನಿರ್ದೇಶನ ಮಾಡಿರುವ ವಿನಯ್ ಮೂರ್ತಿ, ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ಮುಂತಾದವರು “ಪ್ರಭುತ್ವ” ಚಿತ್ರದ ಕುರಿತು ‌ಮಾತನಾಡಿದರು.

ಪಾವನ ಈ ಚಿತ್ರದ ನಾಯಕಿಯಾಗಿ ನಟಿಸಿದ್ದು, ಖ್ಯಾತ ನಟ ನಾಸರ್,ಶರತ್ ಲೋಹಿತಾಶ್ವ,ಅಂಬಿಕಾ,
ರೂಪಾದೇವಿ,ರಾಜೇಶ್ ನಟರಂಗ,ಅವಿನಾಶ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಮಿಲ್ ಸಂಗೀತ ನೀಡಿದ್ದಾರೆ.

 

 

 

Share this post:

Related Posts

To Subscribe to our News Letter.

Translate »