ನಾಯಿ ಇದೆ ಎಚ್ಚರಿಕೆ ! ಸಧ್ಯ ಗಾಂಧಿನಗರದಲ್ಲಿ ವಿಭಿನ್ನ ಶೀರ್ಷಿಕೆಯೊಂದಿಗೆ ಸದ್ದು ಮಾಡುತ್ತಿರುವ ವಿಶೇಷ ಮನರಂಜನೆಯ ಚಿತ್ರ …
ಟೈಟಲ್ ಜೊತೆಗೆ ಚಿತ್ರದ ಕಥೆ ಕೂಡ ವಿಭಿನ್ನ ಎನ್ನುವುದು ನಿರ್ದೇಶಕ ಕಲಿಗೌಡರ ಮಾತು , ಈ ಹಿಂದೆ ” ತನಿಖೆ ” ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿರುವ ಕಲಿಗೌಡ ಅವರು ” ನಾಯಿ ಇದೆ ಎಚ್ಚರಿಕೆ !! ” ಚಿತ್ರಕ್ಕೆ ಮತ್ತೆ ಕ್ಯಾಪ್ ತೊಟ್ಟಿದ್ದಾರೆ …
ಹೆಚ್ಚಿನ ಓದಿಗಾಗಿ;- ‘ತ್ರಿವಿಕ್ರಮ’ ಸೆನ್ಸಾರ್ ಪಾಸ್; ಇದೇ ವಾರ ರಾಜ್ಯಾದ್ಯಂತ ಅದ್ಧೂರಿ ಬಿಡುಗಡೆ
ಹಾಸ್ಯದ ಜೊತೆಗೆ ರೋಮಾಂಚಕಾರಿ ಕಥಾ ಹಂದರವಿರುವ ಚಿತ್ರದಲ್ಲಿ ಮಂಗಳೂರು ದಿನೇಶ್ , ಬಾಲ ರಾಜವಾಡಿ , ನಾಗೇಂದ್ರ ಅರಸು ಸೇರಿದಂತೆ ಮುಖ್ಯ ಪಾತ್ರದಲ್ಲಿ ಲೀಲಾ ಮೋಹನ್ ಪಿವಿಆರ್ ಮತ್ತು ಪ್ರಮುಖ ಪಾತ್ರದಲ್ಲಿ ಪ್ರಬಿಕ್ ಮೊಗವೀರ್ ಕಾಣಿಸಿಕೊಂಡಿದ್ದಾರೆ , ಇನ್ನುಳಿದಂತೆ ದಿವ್ಯ , ಚಂದನ , ಮಾನಸ , ಶ್ರೀನಿ , ಸುನೀಲ್ , ರಿಷಿ , ಯುವ ನಟಿಸಿದ್ದಾರೆ … ಚಿತ್ರದಲ್ಲಿ ರೂಬಿ ಎನ್ನುವ ನಾಯಿ ನಟಿಸದ್ದು ಚಿತ್ರದ ಕುತೂಹಲವನ್ನು ಇಮ್ಮಡಿಗೊಳಿಸಿದೆ , ಚಿತ್ರಕ್ಕೆ ಅಜಿತ್ ಕುಮಾರ್ ಛಾಯಾಗ್ರಹಣ , ಕ್ರಿಷ್ಟಪರ್ ಜಾಯ್ಸನ್ ಸಂಗೀತ ನೀಡಿದ್ದಾರೆ
ಈಗಾಗಲೇ ಚಿತ್ರದ ಕೊನೆಯ ಹಂತದ ಕೆಲಸಗಳು ನಡೆಯುತ್ತಿದ್ದು ಸಧ್ಯದಲ್ಲಿ ಬಿಡುಗಡೆಯಾಗಲು ಚಿತ್ರ ತಂಡ ತಯಾರಿ ನಡೆಸುತ್ತಿದೆ… ಪ್ರಬಿಕ್ ಮೊಗವೀರ್ ಮತ್ತು ಲಾವಣ್ಯ ಗಾಧೆ ಚಿತ್ರದ ನಿರ್ಮಾಪಕರಾಗಿದ್ದು ಚಿತ್ರಕ್ಕೆ ಭಂಡವಾಳ ಹೂಡಿದ್ದಾರೆ , ಈಗಾಗಲೇ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ದೊಡ್ಡ ಬೇಡಿಕೆ ಇದೆ ಎನ್ನುವುದು ಚಿತ್ರತಂಡದ ಮಾಹಿತಿ .