Sandalwood Leading OnlineMedia

ಕಣ್ಣಪ್ಪನ ಜೊತೆಗೆ ಪ್ರಭಾಸ್‍ ಆಪ್ತ ಗೆಳೆಯನ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟನೆ

 

ಅಚಲ ಭಕ್ತಿಗೆ ಮತ್ತೊಂದು ಹೆಸರಾದ ಶಿವನ ಅಪ್ರತಿಮ ಭಕ್ತನಾದ ಕಣ್ಣಪ್ಪನ ಚರಿತ್ರೆಯನ್ನು ತೆರೆಯ ಮೇಲೆ ತರಬೇಕು ಎಂಬ ವಿಷ್ಣು ಮಂಚು ಅವರ ಬಹುಕಾಲದ ಕನಸು ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಈಗಾಗಲೇ ಕಳೆದ ತಿಂಗಳು ‘ಕಣ್ಣಪ್ಪ’ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ. ವಿಷ್ಣು ಮಂಚು ಅವರ ಶ್ರದ್ಧೆ ಮತ್ತು ಸಮರ್ಪಣಾ ಭಾವವು ಚಿತ್ರವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದ್ದು, ಇದು ಬರೀ ಚಿತ್ರ ಎನ್ನುವುದಕ್ಕಿಂತ ಭಾರತೀಯ ಪುರಾಣದ ಆಳವನ್ನು ಪರಿಚಯಿಸುವ ಮಹಾಕಾವ್ಯವಾಗಿದೆ.

ಈ ಕನಸನ್ನು ಇನ್ನಷ್ಟು ಅಸಾಧಾರಣವಾಗಿಸಿರುವುದು ಭಾರತದ ದೊಡ್ಡ ಸೂಪರ್‌ ಸ್ಟಾರ್ ಮತ್ತು ವಿಷ್ಣು ಮಂಚು ಅವರ ಆಪ್ತ ಸ್ನೇಹಿತರಾದ ಪ್ರಭಾಸ್‍ ಅವರ ಸೇರ್ಪಡೆ. ಚಿತ್ರದಲ್ಲಿ ಪ್ರಭಾಸ್‍ ಒಂದು ವಿಶೇಷ ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಸೇರ್ಪಡೆಯು ಈ ಚಿತ್ರಕ್ಕಾಗಿ ಕಾಯುತ್ತಿರುವ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ‘ಕಣ್ಣಪ್ಪ’ ಚಿತ್ರದಲ್ಲಿ ಪ್ರಭಾಸ್‍ ಅವರ ಪಾತ್ರವನ್ನು ಸದ್ಯಕ್ಕೆ ಚಿತ್ರತಂಡದವರು ಸದ್ಯಕ್ಕೆ ಗೌಪ್ಯವಾಗಿಟ್ಟಿದ್ದು, ಮುಂದಿನ ದಿನಗಳಲ್ಲಿ ಬಹಿರಂಗಪಡಿಸುವ ಸಾಧ್ಯತೆ ಇದೆ.

ವಿಷ್ಣು ಮಂಚು ಅವರ ಸಮರ್ಪಣೆ, ಪ್ರಭಾಸ್ ಅವರ ಸ್ಟಾರ್ ಪವರ್‌ ಜೊತೆಗೆ ಭಕ್ತಿಯ ಪರಾಕಾಷ್ಠೆಯನ್ನು ಬಿಂಬಿಸುವ ‘ಕಣ್ಣಪ್ಪ’ ಜನರ ಮನಸ್ಸನ್ನು ಸೂರೆಗೊಳ್ಳುವ ಚಿತ್ರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Share this post:

Translate »