Sandalwood Leading OnlineMedia

ಪ್ರಭಾಸ್ ರ ಪ್ರಾಜೆಕ್ಟ್ ‘ಕೆ’ ಈಗ  ‘ಕಲ್ಕಿ 2898 ಎಡಿ’, ಈ  ಚಿತ್ರ ತಂಡಕ್ಕೆ ರಾಜ ಮೌಳಿ ಕೇಳಿದ ಪ್ರಶ್ನೆ ಏನು -?

ನಿರ್ದೇಶಕ ರಾಜಮೌಳಿ ಅವರು ಯಾವುದಾದರೂ ಟೀಸರ್ ನೋಡಿ ಮೆಚ್ಚಿದರು ಎಂದರೆ ಅದರಲ್ಲೊಂದು ವಿಶೇಷತೆ ಇದೆ ಎಂದೇ ಅರ್ಥ. ಅದೇ ರೀತಿ ಅವರಿಗೆ ‘ಕಲ್ಕಿ 2898-ಎಡಿ’ ಚಿತ್ರದ ಮೊದಲ ಗ್ಲಿಂಪ್ಸ್ ಇಷ್ಟವಾಗಿದೆ.ಪ್ರಭಾಸ್ ನಟನೆಯ, ನಾಗ್ ಅಶ್ವಿನ್ ನಿರ್ದೇಶನದ ಹೊಸ ಚಿತ್ರಕ್ಕೆ ‘ಪ್ರಾಜೆಕ್ಟ್ ಕೆ’ ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿತ್ತು. ಚಿತ್ರದ ಹೆಸರು ಏನು ಎಂಬುದನ್ನು ತಂಡ ರಿವೀಲ್ ಮಾಡಿದೆ. ಮೊದಲ ಗ್ಲಿಂಪ್ಸ್ ರಿಲೀಸ್ ಮಾಡಿ, ‘ಕಲ್ಕಿ 2898-ಎಡಿ’ ಶೀರ್ಷಿಕೆ ರಿವೀಲ್ ಮಾಡಲಾಗಿದೆ. ಮೊದಲ ಗ್ಲಿಂಪ್ಸ್ ನೋಡಿದ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ ಎಂದು ಎಲ್ಲರೂ ಭಾವಿಸಿದ್ದಾರೆ. ವಿಡಿಯೋ ಬಗ್ಗೆ ರಾಜಮೌಳಿ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

  *ದಿ ರೆಕಾರ್ಡಿಂಗ್ ಅಕಾಡೆಮಿ(ಗ್ರ್ಯಾಮಿ ಪ್ರಶಸ್ತಿಗಳ ಮನೆ) ಮತದಾನ ಸದಸ್ಯರಾಗಿ ಇಂಡೋ – ಆಸ್ಟ್ರೇಲಿಯನ್ ಗಾಯಕ ಶ್ರೀರಾಮ್ ಅಯ್ಯರ್ ಆಯ್ಕೆ* .

ನಿರ್ದೇಶಕ ರಾಜಮೌಳಿ ಅವರಿಗೆ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. ಅವರು ಯಾವುದಾದರೂ ಟೀಸರ್ ನೋಡಿ ಮೆಚ್ಚಿದರು ಎಂದರೆ ಅದರಲ್ಲೊಂದು ವಿಶೇಷತೆ ಇದೆ ಎಂದೇ ಅರ್ಥ. ಅದೇ ರೀತಿ ಅವರಿಗೆ ‘ಕಲ್ಕಿ 2898-ಎಡಿ’ ಚಿತ್ರದ ಮೊದಲ ಗ್ಲಿಂಪ್ಸ್ ಇಷ್ಟವಾಗಿದೆ. ವಿಚಾರವನ್ನು ಸ್ವತಃ ರಾಜಮೌಳಿ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ತಮಗೆ ಮೂಡಿರುವ ಒಂದು ಪ್ರಶ್ನೆಯೂ ಬಗ್ಗೆಯೂ ಅವರು ಕೇಳಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೋ ಹಾಡು ಕೇಳಿ! ಹೇಳಿ.

ನಾಗ್ ಅಶ್ವಿನ್ ಹಾಗೂ ವೈಜಯಂತಿ ಮೂವೀಸ್​ ನಿಜಕ್ಕೂ ನೀವು ಅದ್ಭುತ ಕೆಲಸ ಮಾಡಿದ್ದೀರಿ. ಭವಿಷ್ಯದ ಕಥೆ ಇಟ್ಟುಕೊಂಡು ಸಿನಿಮಾ ಮಾಡುವುದು ತುಂಬಾ ಕಷ್ಟಕರವಾದ ಕೆಲಸ. ಅದನ್ನು ನೀವು ಸಾಧ್ಯವಾಗಿಸಿದ್ದೀರಿ. ಡಾರ್ಲಿಂಗ್ ಸ್ಮಾಶಿಂಗ್ ಆಗಿ ಕಾಣಿಸುತ್ತಿದ್ದಾರೆ. ರಿಲೀಸ್​ ಡೇಟ್ ಯಾವಾಗ ಎಂಬ ಒಂದು ಪ್ರಶ್ನೆ ಮಾತ್ರ ಉಳಿದುಕೊಂಡಿದೆ’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

*ಅನಿರುದ್ಧ್ ಜತ್ಕರ್ ಅಭಿನಯದ  ನೂತನ ಚಿತ್ರಕ್ಕೆ ಮೈಸೂರಿನ ಡಾ|| ವಿಷ್ಣುವರ್ಧನ್ ಸ್ಮಾರಕದಲ್ಲಿ ಭಾರತಿ ವಿಷ್ಣುವರ್ಧನ್ ಅವರಿಂದ ಚಾಲನೆ* .

ಪ್ರಾಜೆಕ್ಟ್​ ಕೆ’ ಚಿತ್ರವನ್ನು ಮುಂದಿನ ಜನವರಿ 12ರಂದು ರಿಲೀಸ್ ಮಾಡುವುದಾಗಿ ತಂಡ ಹೇಳಿಕೊಂಡಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಚಿತ್ರದ ಗ್ರಾಫಿಕ್ಸ್​ ಕೆಲಸಗಳು ಬಾಕಿ ಇವೆ. ಕಾರಣಕ್ಕೆ ಸಿನಿಮಾ ಜನವರಿ ತಿಂಗಳಲ್ಲಿ ರಿಲೀಸ್ ಆಗುತ್ತಿಲ್ಲ. ವಿಚಾರವನ್ನು ತಂಡದವರು ಅಧಿಕೃತ ಮಾಡಿಲ್ಲ.

Share this post:

Related Posts

To Subscribe to our News Letter.

Translate »