ಪ್ರಭಾಸ್ ಅವರು ಕಲ್ಕಿ ನಂತರ ಇನ್ನೊಂದು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದ್ದಾರೆ. ಅವರು ಕಣ್ಣಪ್ಪ ಸಿನಿಮಾ ಮೂಲಕ ಸಿನಿ ಪ್ರಿಯರ ಮುಂದೆ ಬರಲಿದ್ದಾರೆ. ಕಾಯುವಿಕೆ ಅಂತೂ ಕೊನೆಯಾಗಿದೆ. ಕಣ್ಣಪ್ಪ ಸಿನಿಮಾ ತಂಡ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಾರೆ. ತೆಲುಗಿನ ‘ಕಣ್ಣಪ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಹುಟ್ಟಾಕ್ಕಿದೆ. ಮಂಚು ವಿಷ್ಣು ಹೀರೋ ಆಗಿ ನಟಿಸುತ್ತಿರುವ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಮಲಯಾಳಂ ನಟ ಮೋಹನ್ ಲಾಲ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಪ್ರಭಾಸ್ ಕೂಡ ಚಿತ್ರದಲ್ಲಿದ್ದಾರೆ.
ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಕಣ್ಣಪ್ಪದಲ್ಲಿ ಪ್ರಭಾಸ್ ಪಾತ್ರ ರಿವೀಲ್ ಆಗಿದೆ. ಪ್ರಭಾಸ್ ಅವರು ರುದ್ರ ಎಂಬ ಪಾತ್ರ ಮಾಡಲಿದ್ದಾರೆ. ಪೋಸ್ಟರ್ನಲ್ಲಿ ಪ್ರಭಾಸ್ ಅವರನ್ನು ಸನ್ಯಾಸಿ ವೇಷದಲ್ಲಿ ಕಾಣಬಹುದು. ಅವನ ಹಣೆಯಲ್ಲಿ ಪವಿತ್ರ ಚಂದನವನ್ನು ಹಚ್ಚಲಾಗಿದೆ. ದೈವಿಕ ಶಕ್ತಿ ಮತ್ತು ಆಕಾಶ ಶಕ್ತಿಯನ್ನು ಸೂಚಿಸುವ ಅರ್ಧಚಂದ್ರನ ಚಿಹ್ನೆ ಕೈಯಲ್ಲಿ ಹಿಡಿಯಲಾಗಿದೆ.
ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ಪ್ರಭಾಸ್ ರೆಡಿಯಾಗಿದ್ದಾರೆ. ತನ್ನ ಲುಕ್ ಮೂಲಕ ವಿಸ್ಮಯ ಮತ್ತು ನಿಗೂಢತೆಯನ್ನು ಉಂಟುಮಾಡುತ್ತಾರೆ ಪ್ರಭಾಸ್. ಈ ಐತಿಹಾಸಿಕ ಸಿನಿಮಾದಲ್ಲಿ ಸೂಪರ್‌ಸ್ಟಾರ್‌ನ ಫಸ್ಟ್ ಲುಕ್ ನೋಡಿ ರೆಬೆಲ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಮುಕೇಶ್ ಕುಮಾರ್ ಸಿಂಗ್ ನಿರ್ದೇಶನದ ಮತ್ತು ಎಂ. ಮೋಹನ್ ಬಾಬು ನಿರ್ಮಿಸಿದ, ಕಣ್ಣಪ್ಪ ಒಂದು ಸಿನಿಮೀಯ ಅದ್ಭುತ ಆಗುವುದರಲ್ಲಿ ಸಂದೇಹವಿಲ್ಲ ಎನ್ನಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಾಂಪ್ರದಾಯಿಕ ಕಥಾಹಂದರವನ್ನು ಬೆರೆಸಿ ಈ ಸಿನಿಮಾ ರೆಡಿಯಾಗಲಿದೆ.