ಅರ್ಥಪೂರ್ಣವಾಗಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಟಿ , ಸಮಾಜಸೇವಕಿ ಡಾ|| ಪೂಜಾ ರಮೇಶ್.
ನಟಿ ಹಾಗು ಸಮಾಜಸೇವಕಿ ಪೂಜಾ ರಮೇಶ್ ತನ್ನದೇ ಸ್ವಂತ ಖರ್ಚಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿ ಬಡಜನರಿಗೆ ಸ್ಫೂರ್ತಿಯಾಗಿರುವ ಸಮಾಜಸೇವಕಿ. 2021ರಲ್ಲಿ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಡಾಕ್ಟರ್ ಪೂಜಾ ರಮೇಶ್ ಫ್ಯಾಶನ್ ಕ್ಷೇತ್ರದಲ್ಲೂ ಕೂಡ ದೊಡ್ಡ ಮಟ್ಟಿಗೆ ಹೆಸರು ಮಾಡಿದವರು.
ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸೆಲೆಬ್ರಿಟಿ ಗೆಸ್ಟ್ ಆಗಿ ಹೋಗುತ್ತಿದ್ದ ನಟಿ ಡಾಕ್ಟರ್ ಪೂಜಾ ರಮೇಶ್. ಈಗ ತಮ್ಮ ತಾಯಿ ಹೆಸರಿನಲ್ಲಿ “ವಸಂತಲಕ್ಷ್ಮಿ ಫೌಂಡೇಶನ್” ಸಂಸ್ಥೆಯನ್ನು ಮಾಡಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದಾರೆ .ಅವರ ಮೊದಲ ಕಾರ್ಯಕ್ರಮ ಚಿಂದಿ ಸ್ಟಾರ್ಸ್ , ಚಿಂದಿ ಆಯುವ ಮಕ್ಕಳಿಗೆ ವೇದಿಕೆ ಕಲ್ಪಿಸಿದ್ದು ಈ ಸಂಸ್ಥೆಯ ಮೊದಲ ಕಾರ್ಯಕ್ರಮವಾಗಿದೆ..
ಇವೆಲ್ಲವನ್ನು ಗಮನಿಸಿದ ಹಲವು ಸಂಸ್ಥೆಗಳು ಹಲವು ಅವಾರ್ಡ್ ಗಳನ್ನು ಕೊಟ್ಟಿದ್ದಾರೆ .ಇನ್ನ ಅವರ ಹುಟ್ಟುಹಬ್ಬ ದಿನದಂದು ಅವರ ಅಭಿಮಾನಿಗಳು ದೊಡ್ಡ ಮಟ್ಟಕ್ಕೆ ಸೇರಿದ್ದು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು .
ಹುಟ್ಟುಹಬ್ಬ ದಿನ ದಂದು ನಟಿ ಪೂಜಾ ರಮೇಶ್ ಅವರಿಗೆ ಸನ್ ಸೈನ್ ಅವಾರ್ಡ ಲಭಿಸಿದೆ ,ಇನ್ನು ಅವರು ಹೀರೋಯಿನ್ ಆಗಿ ಅಭಿನಯಿಸುತ್ತಿರುವ #Production no1 ಚಿತ್ರದ ಬರ್ತಡೆ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದ್ದು. ನಟಿ ಪೂಜಾ ರಮೇಶ್ ಅವರಿಗೆ ತುಂಬ ಖುಷಿಯಾಗಿದೆ .ಇದೇ ರೀತಿ ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ, ಸಿನಿಮಾ ಕ್ಷೇತ್ರದಲ್ಲೂ ಕೂಡ ದೊಡ್ಡ ಮಟ್ಟಕ್ಕೆ ಹೆಸರು ಮಾಡಿ ಎಂದು ನಾವು ಕೂಡ ಹಾರೈಸುತ್ತೇವೆ.