Sandalwood Leading OnlineMedia

ಸಿನಿಮಾ ಸಕ್ಸಸ್ ಗಾಗಿ ತವರೂರಿನ ದೇವರ ಮೊರೆ ಹೋದ್ರಾ ಪೂಜಾ ಹೆಗ್ಡೆ?

ಮಂಗಳೂರು: ಮಂಗಳೂರು ಮೂಲದ ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಇತ್ತೀಚೆಗೆ ತವರೂರು ಉಡುಪಿಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ಇತ್ತೀಚೆಗಷ್ಟೇ ಪೂಜಾ ಹೆಗ್ಡೆ ಉಡುಪಿಯ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಾಲಯದ ಅರ್ಚಕರು ಅವರ ವೃತ್ತಿ, ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಪ್ರಾರ್ಥನೆ ವೇಳೆ ಹರಸಿದ್ದಾರೆ. ಸಾಂಪ್ರದಾಯಿಕ ಸೀರೆಯಲ್ಲಿ ದೇವಾಲಯಕ್ಕೆ ಬಂದಿದ್ದ ಪೂಜಾ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಪೂಜಾಗೆ ಸಿನಿ ಕರಿಯರ್ ನಲ್ಲಿ ಹೇಳಿಕೊಳ್ಳುವ ಯಶಸ್ಸು ಸಿಗುತ್ತಿಲ್ಲ. ಕೊನೆಯದಾಗಿ ಸಲ್ಮಾನ್ ಖಾನ್ ಜೊತೆಗೆ ನಟಿಸಿದ್ದ ಬಾಲಿವುಡ್ ಸಿನಿಮಾವೂ ಮಕಾಡೆ ಮಲಗಿತ್ತು. ಟಾಲಿವುಡ್ ನಲ್ಲಿ ಹಲವು ಅವಕಾಶಗಳು ಕೈ ತಪ್ಪಿ ಹೋಗಿದ್ದವು.

ಇದೆಲ್ಲದರ ಬೆನ್ನಲ್ಲೇ ಪೂಜಾ ತಮ್ಮ ತವರಿಗೆ ಭೇಟಿ ನೀಡಿದ್ದು, ಟೆಂಪಲ್ ರನ್ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಂಬಳ ಉತ್ಸವಕ್ಕೆ ಬಂದಿದ್ದ ಪೂಜಾ ಮುಂದೆ ಅವಕಾಶ ಸಿಕ್ಕರೆ ಕನ್ನಡದಲ್ಲಿ ನಟಿಸಲೂ ಸಿದ್ಧ ಎಂದಿದ್ದರು.

Share this post:

Related Posts

To Subscribe to our News Letter.

Translate »