ಮುಂಬೈ: ಸೌತ್ ಸುಂದರಿ ಪೂಜಾ ಹೆಗ್ಡೆ ಈಗ ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎನಿಸುತ್ತಿದೆ. ಇದೀಗ ಪೂಜಾ ಹೆಗ್ಡೆ ಬಾಲಿವುಡ್ ನಟ ರೋಹಾನಾ ಮೆಹ್ರಾ ಜೊತೆ ಓಡಾಡುತ್ತಿದ್ದಾರೆ.ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಬಾಲಿವುಡ್ ಸಿನಿಮಾ ಮಾಡಿದ ಬಳಿಕ ಪೂಜಾ ಸೌತ್ ಕಡೆ ಬಂದೇ ಇಲ್ಲ. ಒಪ್ಪಿಕೊಂಡ ಟಾಲಿವುಡ್ ಸಿನಿಮಾಗಳಿಂದಲೂ ಹೊರಬಂದಿದ್ದರು. ಅವರ ಅವಕಾಶಗಳನ್ನು ಈಗ ಕನ್ನಡತಿ ಶ್ರೀಲೀಲಾ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಪೂಜಾ ಹೆಗ್ಡೆ ಸಿನಿಮಾ ಬಿಟ್ಟು ವೈಯಕ್ತಿಕ ಜೀವನದ ಕಡೆಗೆ ಗಮನ ಕೊಡುತ್ತಿದ್ದಾರೆ.
ಪೂಜಾ ಹೆಗ್ಡೆ ರೋಹಾನ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಮುಂಬೈನಲ್ಲಿ ಬಾಯ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾರೆ. ಹಿರಿಯ ನಟ ವಿನೋದ್ ಮೆಹ್ರಾ ಪುತ್ರ ರೋಹಾನ್ ಮೆಹ್ರಾ. ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ದುಡಿದಿದ್ದಲ್ಲದೆ, ಸಣ್ಣ ಪುಟ್ಟ ಪಾತ್ರವನ್ನೂ ಮಾಡಿದ್ದಾರೆ.
ಕಳೆದ ಕೆಲವು ಸಮಯದಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದೆ ಎನ್ನಲಾಗಿದೆ. ಸದ್ಯದಲ್ಲಿಯೇ ಮದುವೆಯಾಗುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ. ಕಳೆದ ಒಂದು ವರ್ಷದಿಂದ ಪೂಜಾ ಸಿನಿಮಾಗಳು ಬಿಡುಗಡೆಯಾಗಿಲ್ಲ. ಹೊಸ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ಹೀಗಾಗಿ ಮದುವೆಯಾಗುವುದು ಪಕ್ಕಾ ಎನ್ನಲಾಗುತ್ತಿದೆ.