Sandalwood Leading OnlineMedia

‘ಪೊನ್ನಿಯಿನ್ ಸೆಲ್ವನ್-2’ ತಮಿಳು, ಹಿಂದಿ ಆವೃತ್ತಿ ಐಮ್ಯಾಕ್ಸ್ ನಲ್ಲಿ ಬಿಡುಗಡೆ

ಐಮ್ಯಾಕ್ಸ್ ಕಾರ್ಪೊರೇಷನ್ ಮತ್ತು ಲೈಕಾ ಪ್ರೊಡಕ್ಷನ್ಸ್ ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ ‘ಪೊನ್ನಿಯಿನ್ ಸೆಲ್ವನ್-2’ ತಮಿಳು ಹಾಗೂ ಹಿಂದಿ ಆವೃತ್ತಿ ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾಗುತ್ತಿರುವುದನ್ನು ಖಾತ್ರಿ ಪಡಿಸಿದೆ. ತಮಿಳು ಚಿತ್ರರಂಗದ ಬಿಗ್ ಪ್ರಾಜೆಕ್ಟ್ ಹಾಗೂ ಸ್ಟಾರ್ ತಾರಾಗಣವನ್ನೊಳಗೊಂಡ ‘ಪೊನ್ನಿಯಿನ್ ಸೆಲ್ವನ್-2’ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದ್ದು, ಭಾರತದಾದ್ಯಂತ ಚಿತ್ರದ ತಮಿಳು ಹಾಗೂ ಹಿಂದಿ ಆವೃತ್ತಿ ಐಮ್ಯಾಕ್ಸ್ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುತ್ತಿದೆ.

 ಬ್ಯಾಂಕಾಕ್ ಇಂಟರ್ ನ್ಯಾಶನಲ್  ಫೆಸ್ಟಿವಲ್ ನಲ್ಲಿ ಎಲ್ಲರ ಮನಗೆದ್ದ `ನಿರ್ಮಲ’ ಚಿತ್ರ

ಖ್ಯಾತ ನಿರ್ದೇಶಕ ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ. ಕಾರ್ತಿ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಜಯಂ ರವಿ, ತ್ರಿಶಾ, ಶರತ್ ಕುಮಾರ್, ಪ್ರಕಾಶ್ ರಾಜ್ ರಂತ ದಿಗ್ಗಜ ಕಲಾವಿದರ ಸಮಾಗಮವಿರುವ ಈ ಚಿತ್ರ ಪ್ರೇಕ್ಷಕ ಮಹಾಶಯರಿಂದಲೂ ಬಹುಪರಾಕ್ ಪಡೆದುಕೊಂಡಿತ್ತು. ಸೀಕ್ವಲ್ 2 ಏಪ್ರಿಲ್ 28ರಂದು ಮನರಂಜನೆ ನೀಡಲು ಸಜ್ಜಾಗಿದೆ. ಪ್ಯಾನ್ ಇಂಡಿಯಾ ಚಿತ್ರದ ತಮಿಳು ಹಾಗೂ ಹಿಂದಿ ಸೀಕ್ವೆಲ್ ಐಮ್ಯಾಕ್ಸ್ ನಲ್ಲಿ ಬಿಡುಗಡೆಯಾಗುತ್ತಿದೆ.

 `ಜೋಗಪ್ಪನ ಅರಮನೆ’ಯಲ್ಲಿ `ಕಂಬ್ಳಿಹುಳ’ ಹಿರೋ!

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಪ್ರಖ್ಯಾತಿ ಗಳಿಸಿರುವ ಲೈಕಾ ಸ್ಟುಡಿಯೋ ತಮಿಳು ಚಿತ್ರರಂಗದ ಬಿಗ್ ಬಜೆಟ್ ಸಿನಿಮಾಗಳಾದ ‘ಐ’, ‘ರೋಬೋಟ್ 2.0’ ಹಾಗೂ ‘ಪೊನ್ನಿಯಿನ್ ಸೆಲ್ವನ್- 1’ ನಿರ್ಮಾಣ ಮಾಡಿದೆ. ಇದೀಗ ‘ಪೊನ್ನಿಯಿನ್ ಸೆಲ್ವನ್- 2’ ಕೂಡ ಇದೇ ಸಂಸ್ಥೆಯಡಿ ನಿರ್ಮಾಣವಾಗಿ ತೆರೆ ಕಾಣುತ್ತಿದೆ. ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ, ರವಿವರ್ಮನ್ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಕ್ರಿಯೇಟ್ ಮಾಡಿರುವ ‘ಪೊನ್ನಿಯಿನ್ ಸೆಲ್ವನ್- 2’ ಏಪ್ರಿಲ್ 28ರಂದು ಬಿಡುಗಡೆಯಾಗುತ್ತಿದೆ.

 

 

 

Share this post:

Related Posts

To Subscribe to our News Letter.

Translate »