Sandalwood Leading OnlineMedia

ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?

ಟಿವಿಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಈ ಸೀಸನ್ ಬಹಳ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಇದಾದ ಬಳಿಕ ವರ್ತೂರು ಸಂತೋಷ್ ಕೆಲ ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲವೂ ಸರಿಯಾಗಿ ವರ್ತೂರ್ ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸಿ ತನ್ನ ಆಟ ಮುಂದುವರೆಸಿದ್ದಾರೆ. ಅಷ್ಟರಲ್ಲೇ ಬಿಗ್ ಬಾಸ್ ಮನೆಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?

ಇದನ್ನೂ ಓದಿ ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?

ತನಿಷಾ ಮತ್ತು ಡ್ರೋನ್ ಪ್ರತಾಪ್ ವಿಚಾರಣೆ : ಹೌದು, ಬಿಗ್ ಬಾಸ್ ಸ್ಪರ್ದಿ ತನಿಷಾ ಮತ್ತು ಡ್ರೋನ್ ಪ್ರತಾಪ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಪದ ಬಳಸಿರುವ ಆರೋಪದ ಮೇಲೆ ಇವರ ವಿಚಾರಣೆ ನಡೆಸಲಾಗಿದೆ. “ವಡ್ಡ ಅಲ್ಲಾ ವಡ್ಡನ ತರ ಆ್ಯಕ್ಟ್ ಮಾಡ್ತಿದೀಯಾ” ಎಂದು ಡ್ರೋನ್ ಪ್ರತಾಪ್ ಗೆ ಹೇಳಿರುವ ಆರೋಪದ ಮೇಲೆ ವಿಚಾರಣೆ ನಡೆಸಲಾಗಿದೆ.

ಕುಂಬಳಗೋಡು ಪೊಲೀಸರಿಂದ ವಿಚಾರಣೆ : ಬಿಗ್ ಬಾಸ್ ಕಾರ್ಯಕ್ರಮದಲ್ಲಿ “ವಡ್ಡ ಅಲ್ಲಾ ವಡ್ಡನಾ ತರ ಆ್ಯಕ್ಟ್ ಮಾಡ್ತಿದೀಯಾ” ಎಂದು ಡ್ರೋನ್ ಪ್ರತಾಪ್ ಗೆ ತನಿಷಾ ಹೇಳಿದ್ದಾರೆ ಎನ್ನಲಾಗಿದೆ. ಈ ಮಾತು ಬೋವಿ ಸಮುದಾಯಕ್ಕೆ ನೋವಾಗಿದೆ ಎಂದು ದೂರು ದಾಖಲಿಸಿತ್ತು. ದೂರಿನ ಆಧಾರದ ಮೇಲೆ ಪೊಲೀಸರು ಬಿಗ್ ಬಾಸ್ ಸೆಟ್ ಬಳಿ ತೆರಳಿ ವಿಚಾರಣೆ ನಡೆಸಿದ್ದಾರೆ. ಕುಂಬಳಗೋಡು ಪೊಲೀಸ್ ಠಾಣಾ ಪೊಲೀಸರಿಂದ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ವರ್ತೂರ್ ಸಂತೋಷ್ ಬಂಧನ – ಬಿಡುಗಡೆಯಾಗಿ ಮತ್ತೆ ಮನೆಗೆ ಪ್ರವೇಶಿಸಿದ್ದರಾದರೂ ಆ ಘಟನೆ ಅವರನ್ನು ಇನ್ನೂ ಕಾಡುತ್ತಲೇ ಇದೆ. ಇದೇ ಕಾರಣದಿಂದತಾನು ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು ಎಂದು ವರ್ತೂರ್ ಹಠ ಹಿಡಿದಿದ್ದು, ನಂತರ ಅವರ ಅಮ್ಮನೇ ಬಂದು ಅವರನ್ನು ಸಮಾಧಾನಪದಿಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.

ಇದೀಗ ಮತ್ತೆ ತನಿಷಾ, ಪ್ರತಾಪ್ ಪೋಲೀಸ್ ವಿಚಾರಣೆ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಒಂದಲ್ಲ ಒಂದು ರೀತಿಯ ಕಂಟ್ರವರ್ಸಿ ನಡೆಯುತ್ತಲೇ ಇದೆ.

Share this post:

Translate »