ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ನಲ್ಲಿ ಚಾರು ಪಾತ್ರದಲ್ಲಿ ನಟಿಸುತ್ತಿರುವ ಮೌನ ಗುಡ್ಡೆಮನೆ ಅಭಿಮಾನಿಗಳ ಪಾಲಿನ ದೇವತೆಯೇ ಸರಿ. ಅವರ ಬ್ಯೂಟಿಗೆ ಅದೆಷ್ಟೋ ಜನ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಇದನ್ನೂ ಓದಿ :ಸಲ್ಮಾನ್ ಖಾನ್ ಮೇಲೆ ಯಾಕಿಷ್ಟು ದ್ವೇಷ : ಅವರ ಹತ್ಯೆ ಪ್ರಕರಣದಲ್ಲಿ ಕೇಳಿ ಬಂತು ಹೊಸ ಹೆಸರು..!
ಅವರ ಮುದ್ದು ಮುದ್ದು ಮಾತಿಗೆ ಫಿದಾ ಆಗಿದ್ದಾರೆ. ಇದೀಗ ಪಿಂಕ್ ಕಲರ್ ಸೀರೆಯುಟ್ಟು ಹುಡುಗರ ಹೃದಯವನ್ನು ಕದ್ದಿದ್ದಾರೆ.
ಇದನ್ನೂ ಓದಿ :ಮಧ್ಯರಾತ್ರಿ ನಟ ಚೇತನ್ ಚಂದ್ರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ..!
ಮೌನ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಸದಾ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಳ್ಳುವ ಚಾರು, ಹೆಚ್ಚಾಗಿ ತಮ್ಮ ಸೋಶಿಯಲ್ ಮಿಡಿಯಾದಲ್ಲೂ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡು ಶೇರ್ ಮಾಡುತ್ತಿರುತ್ತಾರೆ.
ಈ ಬಾರಿ ಚಾರು ಪಿಂಕ್ ಕಲರ್ ಸೀರೆಯುಟ್ಟು ಮುದ್ದಾಗಿ ಫೋಟೋಸ್ಗೆ ಫೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಬ್ಯೂಟಿಫುಲ್, ಪ್ರೆಟ್ಟೀ, ಕ್ಯೂಟ್, ಗಾರ್ಜಿಯಸ್ ಎಂದೆಲ್ಲಾ ಹೊಗಳಿದ್ದಾರೆ.ಮತ್ತೆ ಕೆಲ ಅಭಿಮಾನಿಗಳು, Mrs ರಾಮಾಚಾರಿ ಅಂದ್ರೆ ಸುಮ್ನೆನಾ, ಶ್ರೀಗಂಧದ ಗೊಂಬೆ ತರ ಕಾಣ್ಸ್ತಾ ಇದೀರಾ, ಸೀರೆಲಿ ಹುಡುಗಿರ ನೋಡಲೆ ಬಾರದು ನಿಲ್ಲಲ್ಲ ಟೆಂಪ್ರೆಚರು ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.