Sandalwood Leading OnlineMedia

ಸಮಂತಾ-ನಾಗಚೈತನ್ಯ ಡಿವೋರ್ಸ್‌ಗೆ ಕಾರಣ ಇದೇ!! 4 ವರ್ಷಗಳ ನಂತರ ಬಟಾಬಯಲಾಯ್ತು ಅಸಲಿ ಸತ್ಯ!

Samantha Naga Chaitanya: ನಟಿ ಸಮಂತಾ ಮತ್ತು ನಾಗ ಚೈತನ್ಯ ಅವರುಗಳ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.

ತೆಲುಗು ಚಿತ್ರರಂಗದ (Tollywood) ಜನಪ್ರಿಯ ಜೋಡಿ ಸಮಂತಾ  (Samantha) ಹಾಗೂ ನಾಗ ಚೈತನ್ಯ ವಿಚ್ಛೇದನ ದೊಡ್ಡದಾಗಿ ಸುದ್ದಿಯಾಗಿತ್ತು. ಹಲವು ವರ್ಷಗಳ ಕಾಲ ಪ್ರೀತಿ ಅದ್ಧೂರಿಯಾಗಿ ಈ ಜೋಡಿ ವಿವಾಹವಾಗಿತ್ತು. ದಕ್ಷಿಣ ಭಾರತದ ಟಾಪ್ ತಾರಾ ಜೋಡಿ ಎಂದು ಹೆಸರಾಗಿದ್ದರು ಸಮಂತಾ ಹಾಗೂ ನಾಗ ಚೈತನ್ಯ. ಆದರೆ ಅಚಾನಕ್ಕಾಗಿ ಈ ಇಬ್ಬರೂ ದೂರಾದರು. ಇಬ್ಬರೂ ಸಹ ವಿಚ್ಛೇದನ ಪಡೆದುಕೊಂಡರು. ಆದರೆ ವಿಚ್ಚೇದನಕ್ಕೆ ಸ್ಪಷ್ಟ ಕಾರಣವನ್ನು ಇಬ್ಬರೂ ಕೊಡಲಿಲ್ಲ. ಇದೀಗ ವಿಚ್ಛೇದನವಾಗಿ ಮೂರು ವರ್ಷಗಳ ಬಳಿಕ ವಿಚ್ಛೇದನಕ್ಕೆ ಕಾರಣ ಹೊರಬಿದ್ದಿದೆ.

 

ತೆಲಂಗಾಣ ರಾಜಕೀಯದಲ್ಲಿ ಭಾರಿ ಅಲೆಗಳನ್ನು ಎಬ್ಬಿಸಿರುವ ಫೋನ್ ಟ್ಯಾಪಿಂಗ್​ನಿಂದಲೇ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಫೋನ್ ಟ್ಯಾಪಿಂಗ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ತೆಲುಗು ಚಿತ್ರರಂಗದ ತಾರಾ ಜೋಡಿಯೊಂದರ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣವಾಗಿದೆ ಎಂಬ ಅಂಶ ಹರಿದಾಡುತ್ತಲೇ ಇತ್ತು. ಆದರೆ ಆ ತಾರಾ ಜೋಡಿ ಯಾರೆಂಬುದು ಬೆಳಕಿಗೆ ಬಂದಿರಲಿಲ್ಲ. ಆ ತಾರಾ ಜೋಡಿ ಸಮಂತಾ ಮತ್ತು ನಾಗ ಚೈತನ್ಯ ಅವರೇ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.

ಇದನ್ನೂ ಓದಿ :ಈ ಫೋಟೋದಲ್ಲಿರುವ ಪುಟಾಣಿ ಯಾರು ಗೊತ್ತಾ..? ಈಗ ಹೀರೋಯಿನ್ ಇವ್ರು

ತೆಲುಗಿನ ಕೆಲ ಮಾಧ್ಯಮಗಳು ಯೂಟ್ಯೂಬ್ ಚಾನೆಲ್​ಗಳಲ್ಲಿ ಸಮಂತಾ ಹಾಗೂ ನಾಗ ಚೈತನ್ಯರ ವಿಚ್ಛೇದನಕ್ಕೆ ಫೋನ್ ಟ್ಯಾಪಿಂಗ್ ಕಾರಣ ಎಂಬ ಸುದ್ದಿಯನ್ನು ಬಿತ್ತರಿಸಿವೆ. ಸಮಂತಾ ಅವರೇ ನಾಗ ಚೈತನ್ಯರ ಫೋನ್ ಟ್ಯಾಪಿಂಗ್ ಮಾಡಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ. ನಾಗ ಚೈತನ್ಯರ ವರ್ತನೆ ಮೇಲೆ ಸಮಂತಾಗೆ ಅನುಮಾನವಿದ್ದ ಕಾರಣದಿಂದ ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದ ವ್ಯಕ್ತಿಯೊಬ್ಬನ ಸಹಾಯ ಪಡೆದು ಸಮಂತಾ, ನಾಗ ಚೈತನ್ಯರ ಫೋನ್ ಟ್ಯಾಪ್ ಮಾಡಿಸಿದ್ದರು ಎನ್ನಲಾಗುತ್ತಿದೆ.

ಫೋನ್ ಟ್ಯಾಪಿಂಗ್ ಪ್ರಕರಣ ತೆಲಂಗಾಣ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಪೊಲೀಸ್ ಇಲಾಖೆಯ ಇಬ್ಬರು ಉನ್ನತ ಮಟ್ಟದ ಅಧಿಕಾರಿಗಳನ್ನು ಬಂಧಿಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥನ ವಿರುದ್ಧ ಲುಕ್ ಔಟ್ ನೊಟೀಸ್ ಸಹ ಜಾರಿಯಾಗಿದೆ. ಹಲವು ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ-ನಟಿಯರ ಫೋನ್​ಗಳನ್ನು ಟ್ಯಾಪ್ ಮಾಡಿ ಅವರುಗಳನ್ನು ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಲಾಗಿತ್ತಂತೆ. ಹಲವು ರಾಜಕಾರಣಿಗಳ ಫೋನ್ ಸಹ ಟ್ಯಾಪ್ ಮಾಡಲಾಗಿದ್ದು, ತೆಲಂಗಾಣದ ಹಾಲಿ ಸಿಎಂ ರೇವಂತ್ ರೆಡ್ಡಿಯ ಫೋನ್ ಸಹ ಟ್ಯಾಪ್ ಮಾಡಲಾಗಿತ್ತು.

ಇದನ್ನೂ ಓದಿ :ಶಿವಣ್ಣ ಸಿನಿಮಾಗಳ ಮೇಲೆ ಯಾವುದೇ ನಿರ್ಬಂಧವಿಲ್ಲ : ಕಾಂಗ್ರೆಸ್ ದೂರಿಗೆ ಚುನಾವಣಾ ಆಯೋಗ ಸ್ಪಷ್ಟನೆ

Share this post:

Translate »