Sandalwood Leading OnlineMedia

‘ಪೆಪೆ’ ಟೀಮ್ ಜೊತೆ ರಾಘಣ್ಣನ ಬರ್ತ್ಡೇ

ಸ್ಯಾಂಡಲ್ವುಡ್ನ ಹಿರಿಯ ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರು ಇಂದು ಬಹು ನಿರೀಕ್ಷಿತ ಪೆಪೆ ಫಿಲ್ಮ್ ಟೀಮ್ ಜೊತೆ ಬರ್ತ್ಡೇಯನ್ನ ಆಚರಣೆಯನ್ನ ಮಾಡಿಕೊಂಡರು. ಪೆಪೆ ಫಿಲ್ಮ್ ಟೀಮ್ ಜೊತೆ ಅಭಿಮಾನಿ ದೇವರುಗಳು ರಾಘಣ್ಣನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಹೇಳುತ್ತಾ ಫೋಟೋಗೆ ಫೋಸ್ ಕೊಟ್ಟರು.


ವಿನಯ್ ರಾಜ್ ಕುಮಾರ್ ನಟನೆಯ ಬಹುನಿರೀಕ್ಷತ ಸಿನಿಮಾ ಪೆಪೆ. ಈ ಸಿನಿಮಾದ ಮೇಲೆ ದೊಡ್ಮನೆ ಅಭಿಮಾನಿ ಕೋಟಿಗೆ ಕುತೂಹಲವಿದೆ. ಕ್ಲಾಸ್ ಆಗಿದ್ದ ವಿನಯ್ ರಾಜ್ ಕುಮಾರ್ ಈ ಬಾರಿ ಮಾಸ್ ಅವತಾರವೆತ್ತಿ ರಂಜಿಸಲು ತನ್ನ ಸ್ಟ್ರೇಂಥ್ ಅನ್ನ ಸಾಬೀತು ಮಾಡಲು ಬರುತ್ತಿದ್ದಾರೆ. ಕಳೆದ ದಿನ ಆಟೋ ಸಾರಥಿಗಳಿಂದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ ಪೆಪೆ ತಂಡ ಇಂದು ರಾಘಣ್ಣನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನ ಹೇಳಿ ಆಶೀರ್ವಾದ ಪಡೆದಿದೆ.


ಪೆಪೆ ಫಿಲ್ಮ್ ಟೀಮ್ ಜೊತೆ ರಾಘಣ್ಣ ಕೇಕ್ ಕಟ್ ಮಾಡುವಾಗ ರಾಘಣ್ಣನ ಮಡದಿ ಮಂಗಳ ರಾಘವೇಂದ್ರ ರಾಜ್ ಕುಮಾರ್ , ಪುತ್ರರಾದ ವಿನಯ್ ರಾಜ್ ಕುಮಾರ್ ಮತ್ತು ಯುವರಾಜ್ ಕುಮಾರ್ ಸಂಭ್ರಮಿಸಿದ್ರು.

ಪೆಪೆ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದ ರಾಘಣ್ಣ ಈ ಸಿನಿಮಾದ ಮೇಲೆ ಅಭಿಮಾನಿ ದೇವರುಗಳಂತೆ ನನಗೂ ನಿರೀಕ್ಷೆಗಳಿವೆ. ಶೋ ರೀಲ್ ಮತ್ತು ಪೋಸ್ಟರ್ಗಳನ್ನ ನೋಡಿದಾಗ ಈ ಸಿನಿಮಾದ ಮೇಲೆ ಕುತೂಹಲ ಇನಷ್ಟು ಹೆಚ್ಚಾಗಿದೆ ಎಂದು ರಾಘಣ್ಣ ಮನಬಿಚ್ಚಿ ಮಾತನಾಡಿದ್ದಾರೆ.ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಕಲ್ಪನೆಯಲ್ಲಿ ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ಈ ತಿಂಗಳ 30ನೇ ತಾರೀಖ್ ಪೆಪೆ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ..

Share this post:

Related Posts

To Subscribe to our News Letter.

Translate »