Left Ad
Pentagon’ Kannada Movie Review : ಪಂಚ ಕಥೆಗಳ ಪವರ್‌ಫುಲ್ ಪಂಚ್!` - Chittara news
# Tags

Pentagon’ Kannada Movie Review : ಪಂಚ ಕಥೆಗಳ ಪವರ್‌ಫುಲ್ ಪಂಚ್!`

ಕಥಾಸಂಕಲನದ ರೀತಿಯಲ್ಲಿ ಮೂಡಿಬಂದ ಸಿನಿಮಾಗಳ ಸಂಖ್ಯೆ ಕನ್ನಡದಲ್ಲಿ ಅಪರೂಪ. ಅಂಥ ಅಪರೂಪದ ಪ್ರಯತ್ನಗಳ ಪಟ್ಟಿಗೆ ‘ಪೆಂಟಗನ್’ ಚಿತ್ರ ಕೂಡ ಸೇರ್ಪಡೆ ಆಗಿದೆ. ಈ ಸಿನಿಮಾದಲ್ಲಿ 5 ಪ್ರತ್ಯೇಕ ಕಥೆಗಳಿಗೆ, ಐವರು ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. ಒಂದೇ ಸಿನಿಮಾದಲ್ಲಿ ಹಲವು ಅಂಶಗಳನ್ನು ನಿರೀಕ್ಷಿಸುವವರಿಗೆ ಪೆಂಟಗನ್ ಬೋನಸ್. ಯಾಕೆಂದರೆ,  ‘ಪೆಂಗಟನ್’ ಚಿತ್ರ ಸಾವನ್ನು ಮೂಲವಾಗಿಟ್ಟುಕೊಂಡು ೫5ಬೇರೆ ಬೇರೆ ಜಾನರ್‌ನಲ್ಲಿ ತೆರೆದುಕೊಳ್ಳುವ ಚಿತ್ರ. ‘ಪೆಂಟಗನ್’ ಸಿನಿಮಾದ ಮೊದಲ ಕಥೆಯಲ್ಲಿ ಕಾಮಿಡಿಗೆ ಹೆಚ್ಚು ಮಹತ್ವ ನೀಡದರೆ, ಎರಡನೇ ಕಥೆಯಲ್ಲಿ ಕೌಟುಂಬಿಕ ಮೌಲ್ಯಕ್ಕೆ ಒತ್ತು ನೀಡಲಾಗಿದೆ. ಮೂರನೇ ಕಥೆಯಲ್ಲಿ ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಎಚ್ಚರಿಸುವ ಕೆಲಸ ಮಾಡಲಾಗಿದೆ. ನಾಲ್ಕನೇ ಕಥೆಯಲ್ಲಿ ಜಾತಿ ಸಂಘರ್ಷದ ವಿಷಯ ವಿಷಯದ ಮೇಲೆ ಬೆಳಕು ಚೆಲ್ಲಲ್ಗಿದ್ದು, ೫ನೇ ಕಥೆಯಲ್ಲಿ ಕನ್ನಡ ಪರ ಹೋರಾಟಗಾರರ ಅಸಲಿ ಮುಖವನ್ನು ಬಟ್ಟಾ ಬಯಲು ಮಾಡಲಾಗಿದೆ. ಪ್ರತಿ ಕಥೆಗೂ ಸಾವು ಫುಲ್‌ಸ್ಟಾಪ್ ನೀಡುತ್ತದೆ. ಆ ಸಾವುಗಳಿಗೆ ಕಾರಣ ಏನು ಎಂಬುದು ಇಂಟ್ರೆಸ್ಟಿAಗ್ ಫ್ಯಾಕ್ಟರ್. ಪ್ರತಿ ಸಾವಿನ ಹಿಂದಿರುವ ಸಂದರ್ಭಗಳು ಬೇರೆ ಬೇರೆಯಾಗಿದ್ದು ಪ್ರತೀ ಕಥೆಯನ್ನೂ ಭಿನ್ನವಾಗಿ ನಿಲ್ಲಿಸುತ್ತದೆ.

ಸದ್ದಿಲ್ಲದೆ ಸಿದ್ಧವಾಯ್ತು ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಚಿಣ್ಣರ ಚಂದ್ರ’ ಚಿತ್ರ

‘ಪೆಂಟಗನ್’ ಸಿನಿಮಾದಲ್ಲಿನ 5 ಪ್ರತ್ಯೇಕ ಕಥೆಗಳನ್ನು ನೋಡುಗನನ್ನು ಸಿನಿಮಾದೊಳೆಗೆ ಸೆಳೆಯುವ ತಂತ್ರದ ಭಾಗವಾಗಿ ಜೋಡಿಸಲಾಗಿದೆ. ಆರಂಭದಲ್ಲಿ ಸರಳ ಎನಿಸುವಂತಹ ಕಥೆಯೊಂದಿಗೆ ಸಿನಿಮಾ ಶುರುವಾಗಿ, ನಂತರದ ಕಥೆಯಲ್ಲಿ ತೀವ್ರತೆ ಹೆಚ್ಚುತ್ತದೆ. ಮೂರನೇ ಕಥೆ ಬರುವ ವೇಳೆಗೆ ಪ್ರೇಕ್ಷಕ, ನಾಲ್ಕನೆಯ ಕಥೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಾನೆ. ಮಧ್ಯಂತರದ ನಂತರ ಬರುವ ಕಥೆಗಳು ಗಂಭೀರ ಸ್ವರೂಪದಾಗಿದ್ದು, ಇಡೀ ಚಿತ್ರದ ಬಗಗೆ ಬೆರಗು ಹುಟ್ಟಿಸುತ್ತದೆ. ವೈಜನಾಥ ಬಿರಾದಾರ್, ಪಿ. ರವಿಶಂಕರ್, ಕಿಶೋರ್, ಪೃಥ್ವಿ ಅಂಬಾರ್, ಪ್ರಕಾಶ್ ಬೆಳವಾಡಿ ಮುಂತಾದವರಿAದಾಗಿ ‘ಪೆಂಟಗನ್’ ಸಿನಿಮಾ ಸಾರ್ಥಕತೆಯನ್ನು ಮೂಡಿಸುತ್ತದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರಕಾಶ್ ಬೆಳವಾಡಿ ಮಾತಿಲ್ಲದ ಭಾಗದಲ್ಲೂ ಇಷ್ಟವಾಗುತ್ತಾರೆ. ಕನ್ನಡಪರ ಹೋರಾಟಗಾರನಾಗಿ ಕಿಶೋರ್ ಗೆದ್ದಿದ್ದಾರೆ. ಜಾತಿ ಮತ್ತು ಮಗಳ ಮೇಲೆ ವಿಪರೀತ ವ್ಯಮೋಹ ಇರುವಂತಹ ತಂದೆಯಾಗಿ ಪಿ.ರವಿಶಂಕರ್ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೂ ಮುನ್ನ ಸಾಕಷ್ಟು ಸುದ್ದಿಯಲ್ಲಿದ್ದ, ತನಿಷಾ ಕುಪ್ಪಂಡ ಅವರು ಗ್ಲಾಮರಸ್ ಆಗಿ ಮಾತ್ರವಲ್ಲದೇ ನಟನೆ ಮೂಲಕ ಸಿನಿಮಾ ರಿಲೀಸ್ ಆದ ಮೇಲೂ ಸುದ್ದಿಯಲ್ಲಿದ್ದಾರೆ.

ನೆತ್ತರ ಕಡಲಲ್ಲಿ ಅರಕೇಶ್ವರನ ದುನಿಯಾ!

 ‘ಪೆಂಟಗನ್’ ಚಿತ್ರವನ್ನು ನೋಡಲು ವಿಭಿನ್ನ ರೀತಿಯ ಮನಸ್ಥಿತಿ ಬೇಕಾಗುತ್ತದೆ. ಇಲ್ಲಿನ ಪ್ರತಿ ಕಥೆ ಕೂಡ ಬೇರೆ ಬೇರೆ ಜಾನರ್‌ನಲ್ಲಿರುವುದರಿಂದ. ಒಂದು ಕಥೆಯನ್ನು ನೋಡಿ ಮುಗಿಸಿದ ಬಳಿಕ ಮತ್ತೊಂದು ಕಥೆಯನ್ನು ನೋಡುವಾಗ ಪ್ರೇಕ್ಷಕ ತನ್ನ ಮನಸ್ಥಿಯನ್ನೂ ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಗುಣಮಟ್ಟದ ವಿಚಾರದಲ್ಲಿ ಯಾವ ಕಥೆಗೂ ಚಿತ್ರತಂಡ ರಾಜಿ ಆಗಿಲ್ಲ. ಐದು ಕಥೆಗಳಲ್ಲಿ ಮೂರು ಕಥೆಗಳು ಅದ್ಭುತವಾಗಿವೆ. ಇನ್ನೆರಡು ಕಥೆಗಳನ್ನು ಇನ್ನಷ್ಟು ಚೆನ್ನಾಗಿ ತೆರೆಗೆ ತರಬಹುದಿತ್ತೇನೋ ಅನಿಸುತ್ತದೆ. ಅದ್ಯಾವವ ಚಿತ್ರ ಅನ್ನವುದು ಪ್ರೇಕ್ಷಕನಿಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಕಿರಣ್ ಹಂಪಾಪುರ, ಗುರುಪ್ರಸಾದ್.ಎಂ.ಜಿ ಹಾಗೂ ಅಭಿಲಾಷ್ ಅವರ ಛಾಯಾಗ್ರಹಣ ಸೂಪರ್. ಮಣಿಕಾಂತ್ ಕದ್ರಿ ಅವರ ಸಂಗೀತ ಕಥೆಯ ಜಾನರ್‌ಗೆ ತಕ್ಕಂತೆ ಬದಲಾಗಿ ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುವುದು ನಿಜಕ್ಕೂ ಚಿತ್ರಗಳನ್ನು ಆಪ್ತವಾಗಿಸುತ್ತದೆ. ಸಿನಿಮಾದ ಒಟ್ಟು ಅವಧಿ 2 ಗಂಟೆ 54 ನಿಮಿಷ ಇರುವುದರಿಂದ ಪ್ರೇಕ್ಷಕರು ತಾಳ್ಮೆ ಅಲ್ಲಲ್ಲಿ ಪರೀಕ್ಷೆಗೆ ಒಳಗಾಗುವುದು ಸುಳ್ಳಲ್ಲ. ಒಟ್ಟಿನಲ್ಲಿ ಟ್ರೆöÊಲರ್ ಮತ್ತು ಹಾಡುಗಳ ಬೋಲ್ಡ್ ದೃಶ್ಯಗಳು, ಚರ್ಚೆಗೆ ಒಡ್ಡುವ ಡೈಲಾಗ್‌ಗಳ ಮೂಲಕ ಕುತೂಹಲ ಹುಟ್ಟಿಸಿಕೊಂಡ ಚಿತ್ರ ಪ್ರೇಕ್ಷಕನಿಗೆ ನಿರಾಸೆ ಹುಟ್ಟಿಸಿವುದಿಲ್ಲ. ಸೆನ್ಸಾರ್‌ನಿಂದ ‘ಎ’ ಪ್ರಮಾಣಪತ್ರ ಸಿಕ್ಕಿರುವುದರಿಂದ ಈ ಸಿನಿಮಾ `ವಯಸ್ಕರಿಗೆ ಮಾತ್ರ’ ಎಂದು ಅಶ್ಲೀಲತೆಯ ಪರಮಾವಧಿಯಲ್ಲಿ `ನಗ್ನ’ ಸತ್ಯವನ್ನು ಹುಡುಕುವ ಧಾವಂತದಿAದ ಥೀಯೆಟರ್‌ಗೆ ಲಗ್ಗೆ ಇಟ್ಟವರಿಗೆ ನಿರಾಸೆ ಖಂಡಿತ!

by Naveen Krishna.B.Puttur

Spread the love
Translate »
Right Ad