Sandalwood Leading OnlineMedia

18 ವರ್ಷದ ನಂತರ ಇಂಡಸ್ಟ್ರೀಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ಕಂಬ್ಯಾಕ್.. ‘ಟೈಗರ್ ನಾಗೇಶ್ವರ ರಾವ್’ ಸಿನಿಮಾದಲ್ಲಿ ರೇಣು ದೇಸಾಯಿ ಅಭಿನಯ

ಮಾಸ್ ಮಹಾರಾಜ ರವಿತೇಜ್ ಅಕೌಂಟ್ ನಲ್ಲಿರುವ ಬಹುನಿರೀಕ್ಷಿತ ಸಿನಿಮಾ ‘ಟೈಗರ್ ನಾಗೇಶ್ವರ ರಾವ್’ ಅಂಗಳದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ವಂಶಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎಂಟ್ರಿ ಕೊಟ್ಟಿದ್ದಾರೆ. ರೇಣು ಸಿನಿಮಾದಲ್ಲಿ ಪ್ರಮುಖವಾದ ಪಾತ್ರವೊಂದು ಪ್ಲೇ ಮಾಡುತ್ತಿದ್ದು, ಅವರ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಆಗಿದೆ.
ಭಾರತೀಯ ಸಾಮಾಜಿಕ ಕಾರ್ಯಕರ್ತೆ, ಲೇಖಕಿಯೂ ಆಗಿರುವ, ಅಸ್ಪೃಶತೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಹೇಮಲತಾ ಲವಣಂ ಪಾತ್ರದಲ್ಲಿ ರೇಣು ದೇಸಾಯಿ ಅಭಿನಯಿಸುತ್ತಿದ್ದು, ಶುಭ್ರ ಬಿಳಿ ಬಣ್ಣದ ಸೀರೆಯುಟ್ಟು ಪವರ್ ಫುಲ್ ಎಂಟ್ರಿ ಕೊಟ್ಟಿರುವ ರೇಣು ದೇಸಾಯಿ ಟೀಸರ್ ಝಲಕ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
   
  
 
 
ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ಮಾಣ ಮಾಡಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ ‘ಅಭಿಷೇಕ್ ಅಗರ್ವಾಲ್ ಆರ್ಟ್ಸ್’ ಬ್ಯಾನರ್ ಮೂಲಕ ‘ಟೈಗರ್ ನಾಗೇಶ್ವರ ರಾವ್’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೂಲಕ ರವಿ ತೇಜ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದಿಬ್ಬಣ ಹೊರಡಲಿದ್ದಾರೆ.
ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾನಕವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ರವಿತೇಜ ಸಂಪೂರ್ಣ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ನೂಪುರ್ ಸನೋನ್, ಗಾಯತ್ರಿ ಭಾರದ್ವಜ್ ನಟಿಸುತಿದ್ದು, ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ. ಆರ್. ಮ್ಯಾಥಿ ಐಎಸ್ಸಿ ಛಾಯಾಗ್ರಹಣ, ಜಿವಿ ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ, ಶ್ರೀಕಾಂತ್ ವಿಸ್ಸಾ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಮಯಾಂಕ್ ಸಿಂಘಾನಿಯಾ ಸಹ-ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.
 

Share this post:

Related Posts

To Subscribe to our News Letter.

Translate »