ಭೈರತಿ ರಣಗಲ್ ಬ್ಲಾಕ್ ಬಸ್ಟರ್ ಸಕ್ಸಸ್ ಖುಷಿಯಲ್ಲಿರುವ ಭಜರಂಗಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ‘ಸೆಂಚುರಿ ಸ್ಟಾರ್’ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ. ಡೈರೆಕ್ಟರ್ಸ್ ಗಳ ಡಾರ್ಲಿಂಗ್ ಶಿವಣ್ಣನಿಗೆ ಪವನ್ ಆಕ್ಷನ್ ಕಟ್ ಹೇಳುತ್ತಿರುವ ಖುಷಿಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ರಾಜೀವ್ ನಟನೆಯ ಬೇಗೂರು ಕಾಲೋನಿ ಟೀಸರ್ ರಿಲೀಸ್ ಮಾಡಿದ ತರುಣ್ ಸುಧೀರ್-ಸತೀಶ್ ರೆಡ್ಡಿ
ಬರೀ ನಿರ್ದೇಶಕರಾಗಿ ಮಾತ್ರವಲ್ಲದೇ ಪವನ್ ಒಡೆಯರ್ ನಿರ್ಮಾಪಕರಾಗಿಯೂ ಹೆಸರು ಮಾಡಿದ್ದಾರೆ. ಡೊಳ್ಳು ಚಿತ್ರ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಸಿನಿರಂಗದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಅವರು ಮೊದಲ ಚಿತ್ರ ನಿರ್ಮಾಣದಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅವಸ್ತಿ vs ಅವಸ್ತಿ ಎಂಬ ಬಾಲಿವುಡ್ ಚಿತ್ರ ನಿರ್ಮಿಸಿರುವ ಪವನ್ ಒಡೆಯರ್ ಸದ್ಯ ವೆಂಕ್ಯಾ ಚಿತ್ರ ನಿರ್ಮಾಣದಲ್ಲಿ ತೊಡಗಿಸಿದ್ದಾರೆ. ಈಗ ಪವನ್ ಒಡೆಯರ್ ತಮ್ಮ ಒಡೆಯರ್ ಮೂವೀಸ್ ಬ್ಯಾನರ್ ನಡಿ ನಾಲ್ಕನೇ ಚಿತ್ರ ನಿರ್ಮಿಸುತ್ತಿದ್ದಾರೆ. ಅದು ಶಿವಣ್ಣನಿಗೆ ಎನ್ನುವುದೇ ವಿಶೇಷ.
2025ಕ್ಕೆ ಶಿವಣ್ಣ ಹಾಗೂ ಪವನ್ ಕಾಂಬೋದ ಹೊಸ ಚಿತ್ರ ಟೇಕಾಫ್ ಆಗಲಿದೆ. ಕರುನಾಡ ಕಿಂಗ್ ಗೆ ಆಕ್ಷನ್ ಕಟ್ ಹೇಳುತ್ತಿರುವ ಸಂತಸ ಹಂಚಿಕೊಂಡರು ಪವನ್ ಒಡೆಯರ್, “ಪ್ರತಿಯೊಬ್ಬ ನಿರ್ದೇಶಕರಿಗೂ ಶಿವಣ್ಣನಿಗೆ ಚಿತ್ರ ಮಾಡಬೇಕೆಂಬ ಕನಸು ಇರುತ್ತದೆ. ನನ್ನ ಈ ಕನಸು ಈಗ ನನಸಾಗುತ್ತದೆ. ಥ್ರಿಲ್ಲರ್ ಜೊತೆಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಎಂಟರ್ ಟೈನರ್ ಚಿತ್ರ ನಿರ್ದೇಶನ ಮಾಡುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸದ್ಯ ರಿವೀಲ್ ಮಾಡಲು ಆಗುತ್ತಿಲ್ಲ. ಆದರೆ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನವಾಗಿ ಕಾಣಲಿದ್ದಾರೆ” ಎಂದರು.
ಒಡೆಯರ್ ಮೂವೀಸ್ ಬ್ಯಾನರ್ ನಡಿ ಅಪೇಕ್ಷಾ ಪವನ್ ಒಡೆಯರ್ ಹಾಗೂ ಪವನ್ ಒಡೆಯರ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ನಾ ಕ್ರಿಯೇಟಿವ್ ನಿರ್ಮಾಣದಲ್ಲಿ ಸಾಥ್ ಕೊಡಲಿದ್ದಾರೆ.