Sandalwood Leading OnlineMedia

ಜಪಾನ್ ನಲ್ಲಿ ರಿಲೀಸ್ ಆಗಲು ರೆಡಿ ಆಗಿವೆ ಭಾರತೀಯ ಸಿನೆಮಾಗಳು, ಜಪಾನ್ ನಲ್ಲಿ ಭಾರತೀಯ ಸಿನಿಮಾಕ್ಕೆ ಯಾಕೆ ಅಷ್ಟೊಂದು ಬೇಡಿಕೆ. ಇಲ್ಲಿದೆ ಫುಲ್ ಸ್ಟೋರಿ.

 

ಜಪಾನ್​ನಲ್ಲಿ ಭಾರತದ ಸಿನಿಮಾಗಳಿಗೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಈ ಮೊದಲು ರಿಲೀಸ್ ಆದ ‘ಬಾಹುಬಲಿ’, ‘ಆರ್​ಆರ್​ಆರ್’ ಚಿತ್ರಗಳನ್ನು ಅಲ್ಲಿನ ಮಂದಿ ಇಷ್ಟಪಟ್ಟಿದ್ದರು.ಎಸ್​ಎಸ್​ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಈ ಚಿತ್ರದಿಂದ ರಾಜಮೌಳಿ ಖ್ಯಾತಿ ಹೆಚ್ಚಿತು. ಜೂನಿಯರ್ ಎನ್​ಟಿಆರ್ ಹಾಗೂ ರಾಮ್ ಚರಣ್ ಈ ಚಿತ್ರದಲ್ಲಿ ಮಿಂಚಿದರು.ಈ ಸಿನಿಮಾ ಜಪಾನ್​ನಲ್ಲಿ ರಿಲೀಸ್ ಆಗಿ ಭರ್ಜರಿ ಕಮಾಯಿ ಮಾಡಿತ್ತು. ಜಪಾನ್ ಒಂದರಲ್ಲೇ ನೂರು ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದ್ದು ‘ಆರ್​ಆರ್​ಆರ್​’ ಚಿತ್ರದ ಹೆಚ್ಚುಗಾರಿಕೆ. ಈಗ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಕೂಡ ಜಪಾನ್​ನಲ್ಲಿ ರಿಲೀಸ್ ಗೆ ರೆಡಿ ಆಗಿದೆ.

 

ಇನ್ನೂ ಓದಿಸೌತ್ ನಟಿಯರ ಸಂಭಾವನೆ ಎಷ್ಟಿದೆ.? ಯಾರು ಎಷ್ಟ್ ಕೋಟಿ ತಗೋತಾರೆ. ಸೌತ್ ಸಿನೆಮಾ ಹಿರೋಯಿನ್ ಗಳಲ್ಲಿ ಯಾರು ಟಾಪರ್!

‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅವರು ದೊಡ್ಡ ಮಟ್ಟದ ಗೆಲುವು ಕಂಡರು. ಶಾರುಖ್ ಖಾನ್ ಈ ಚಿತ್ರಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರ ಜಪಾನ್ ಭಾಷೆಗೆ ಡಬ್ ಆಗುತ್ತಿದ್ದು, ಅಲ್ಲಿಯೂ ಬಿಸ್ನೆಸ್ ಮಾಡಲು ರೆಡಿ ಆಗಿದೆ.
ಜಪಾನ್​ನಲ್ಲಿ ಭಾರತದ ಸಿನಿಮಾಗಳಿಗೆ ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಈ ಮೊದಲು ರಿಲೀಸ್ ಆದ ‘ಬಾಹುಬಲಿ’, ‘ಆರ್​ಆರ್​ಆರ್’ ಚಿತ್ರಗಳನ್ನು ಅಲ್ಲಿನ ಮಂದಿ ಇಷ್ಟಪಟ್ಟಿದ್ದರು. ಆಕ್ಷನ್ ಸಿನಿಮಾಗಳನ್ನು ಅಲ್ಲಿನ ಜನರು ಹೆಚ್ಚು ಇಷ್ಪಡುತ್ತಾರೆ. ‘ಜವಾನ್’ ಚಿತ್ರದಲ್ಲೂ ಭರ್ಜರಿ ಆಕ್ಷನ್ ಇರುವುದರಿಂದ ಈ ಸಿನಿಮಾ ಅಲ್ಲಿನವರಿಗೆ ಇಷ್ಟ ಆಗಬಹುದು. ಈ ಮೂಲಕ ಸಿನಿಮಾದ ಕಲೆಕ್ಷನ್ ಹೆಚ್ಚಬಹುದು.

ಇನ್ನೂ ಓದಿ  *’ಕೋಟಿಗೊಬ್ಬ’ನ ಹೃದಯವಂತಿಕೆ..ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಕಿಚ್ಚ ಸುದೀಪ್*

ಯಶ್ ರಾಜ್ ಫಿಲ್ಮ್ಸ್​ ಬ್ಯಾನರ್ ಅಡಿಯಲ್ಲಿ ‘ಪಠಾಣ್’ ಸಿನಿಮಾ ಮೂಡಿ ಬಂದಿದೆ. ಈ ನಿರ್ಮಾಣ ಸಂಸ್ಥೆ ಈಗಾಗಲೇ ಸ್ಪೈ ಯೂನಿವರ್ಸ್​ ಸೃಷ್ಟಿ ಮಾಡಿದೆ. ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ವಾರ್’, ‘ಪಠಾಣ್’ ಸಿನಿಮಾಗಳು ಸ್ಪೈ ಯೂನಿವರ್ಸ್ ಅಡಿಯಲ್ಲಿ ಸಿದ್ಧಗೊಂಡಿದೆ. ಮುಂದೆಯೂ ಇದೇ ಯೂನಿವರ್ಸ್ ಅಡಿಯಲ್ಲಿ ಸಿನಿಮಾಗಳು ಮೂಡಿಬರಲಿವೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಾಗಿ ಸಿನಿಮಾ ಮಾಡುತ್ತಾರೆ ಎನ್ನುವ ಮಾತೂ ಇದೆ.

Share this post:

Translate »