Sandalwood Leading OnlineMedia

ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದ ಪಾರು ಸೀರಿಯಲ್ ಆದಿ..ಶರತ್ ಪದ್ಮನಾಭ್ ಚೊಚ್ಚಲ ಕನಸಿಗೆ ಟೈಟಲ್ ಫಿಕ್ಸ್

 

 

ಇದನ್ನೂ ಓದಿ:Photos : ಒಂದು ಸಣ್ಣ ಆಸೆ ಈಡೇರಿಸಿದ ನಟಿ ಅದಿತಿ ಪ್ರಭುದೇವ;

ಪಾರು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನೆ ಮನ ಗೆದ್ದಿರುವ ಆದಿ ಊರೂಫ್ ಶರತ್ ಪದ್ಮನಾಭ್ ನಾಯಕನಾಗಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಶರತ್ ನಾಯಕನಾಗಿ ಬಣ್ಣ ಹಚ್ಚಿರುವ ಚೊಚ್ಚಲ ಸಿನಿಮಾಗೆ ಅನಿಮಾ ಎಂಬ ಶೀರ್ಷಿಕೆ ಇಡಲಾಗಿದೆ. ಅನಿಮಾ ಎಂದರೆ ಪ್ರತಿಬಿಂಬ ಕಾಣದ ಕನ್ನಡಿ ಎಂದರ್ಥ.

 

ಇದನ್ನೂ ಓದಿ :ವಿಮರ್ಶೆ ತಿಳಿಸಿದ ಕಮಲ್ ಹಾಸನ್ಹೇ : ಗಿದೆ ಪೃಥ್ವಿರಾಜ್ ನಟನೆಯ ‘ಆಡುಜೀವಿತಂ’ ಸಿನಿಮಾ?

ಅನಿಮಾಗೆ ವರ್ಧನ್ ಎಂ ಎಚ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ರೈತರ ಕುರಿತ ಹೊನ್ನು ಬಿತ್ಯಾರು ಎಂಬ ಕಿರುಚಿತ್ರ ಮಾಡಿದ್ದ ವರ್ಧನ್ ಈ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಟೈಟಲ್ ಪೋಸ್ಟರ್ ವಿಭಿನ್ನವಾಗಿದ್ದು, ದಟ್ಟ ಕಾಡಿನ ಮಧ್ಯೆ ಸಾಗುತ್ತಿರುವ ಕಾರು ನಾನಾ ಕಥೆಯನ್ನು ಬಿಚ್ಚಿಡುತ್ತಿದೆ,.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಿಮಾ ಸಿನಿಮಾ ಕೊನೆ ಹಂತದ ಚಿತ್ರೀಕರಣದಲ್ಲಿದೆ. ಬೆಂಗಳೂರು, ಸಕಲೇಶಪುರ, ಮಡಿಕೇರಿ, ಹುಲಿಯೂರು ದುರ್ಗ ಸುತ್ತಮುತ್ತ ಈಗಾಗ್ಲೇ ಶೂಟಿಂಗ್ ನಡೆಸಲಾಗಿದೆ. ಎ ಡ್ರೀಮರ್ಸ್ ಸ್ಟುಡಿಯೋ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗ್ತಿದೆ.

ಇದನ್ನೂ ಓದಿ :Naveen Sajju : ‘ಇಂಥ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ, ನನಗೆ ಸಿಕ್ಕಿದೆ’ ಎಂದ ನವೀನ್ ಸಜ್ಜು, ಏನದು?

ಶರತ್ ನಾಯಕನಾಗಿ ನಟಿಸ್ತಿದ್ದು, ಅನುಷಾ ಕೃಷ್ಣ ನಾಯಕಿಯರಾಗಿ ಬಣ್ಣ ಹಚ್ಚಿದ್ದು, ಪಂಕಜ್ ಎಸ್ ನಾರಾಯಣ್, ಯುವ ಶೆಟ್ಟಿ, ವಾಣಿ, ಸೂರಿ, ಸುಷ್ಮಿತಾ, ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಎನ್ ಕೆ ರಾಜ್ ಛಾಯಾಗ್ರಹಣ, ವಿರಾಜ್ ವಿಶ್ವ ಸಂಭಾಷಣೆ, ರೋನಾದ ಬಕ್ಕೇಶ್ ಹಿನ್ನೆಲೆ ಸಂಗೀತ, ಉಜ್ವಲ್ ಚಂದ್ರ ಸಂಕಲನ ಅನಿಮಾನ ಚಿತ್ರಕ್ಕಿದೆ.

Share this post:

Related Posts

To Subscribe to our News Letter.

Translate »