Sandalwood Leading OnlineMedia

ಅದ್ದೂರಿ ಸೆಟ್ ನಲ್ಲಿ  `ಪರಿಮಳ ಡಿಸೋಜಾ` ಚಿತ್ರದ ಚಿತ್ರೀಕರಣ

 

 

ಅರಸು ಚಿತ್ರದ ಮೀರಾ ಜಾಸ್ಮಿನ್ ಇವರೇನಾ? ಹೇಗಿದೆ ಗೊತ್ತಾ ಹೊಸ ಲುಕ್..?

ವಿಲೇಜ್ ರೋಡ್ ಸಂಸ್ಥೆಯ ಮೂಲಕ ವಿನೋದ್ ಶೇಷಾದ್ರಿ ಅವರು ನರ‍್ಮಿಸುತ್ತಿರುವ ಹಾಗೂ ಡಾ.ಗಿರಿಧರ್ ಹೆಚ್ ಟಿ ಅವರ ನರ‍್ದೇಶನದಲ್ಲಿ ಮೂಡಿಬರುತ್ತಿರುವ “ಪರಿಮಳ ಡಿಸೋಜಾ” ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನೆಲಮಂಗಲದ ಬಳಿ  ಅದ್ದೂರಿ ಸೆಟ್ ನಲ್ಲಿ ನಡೆಯಿತು. ರೆಟ್ರೋ ಶೈಲಿಯಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡಿನಲ್ಲಿ ವಿನೋದ್ ಶೇಷಾದ್ರಿ ಹಾಗೂ ಶ್ವೇತ ರಮೇಶ್ ನಟಿಸಿದ್ದಾರೆ. ವಿನೋದ್ ಶೇಷಾದ್ರಿ ಅವರೆ ಈ ಹಾಡನ್ನು ಬರೆದಿದ್ದು, ರಾಜೇಶ್ ಕೃಷ್ಣನ್ ‌ಹಾಗೂ ಶೃತಿ.ವಿ.ಎಸ್ ಹಾಡಿದ್ದಾರೆ.  ಈ ಹಾಡಿನ ಚಿತ್ರೀಕರಣದೊಂದಿಗೆ “ಪರಿಮಳ ಡಿಸೋಜಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಒಟ್ಟು ೭೨ ದಿನಗಳ ಚಿತ್ರೀಕರಣ ನಡೆದಿದೆ. 

 

 

ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದೆ. ಕ್ರಿಸ್ಟೋಪರ್ ಜೇಸನ್ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ.  ಡಾ.ವಿ.ನಾಗೇಂದ್ರ ಪ್ರಸಾದ್,ಜಯಂತ್ ಕಾಯ್ಕಿಣಿ, ಕೆ.ಕಲ್ಯಾಣ್ ಹಾಗೂ ವಿನೋದ್ ಶೇಷಾದ್ರಿ ಹಾಡುಗಳನ್ನು ಬರೆದಿದ್ದಾರೆ. ಜೋಗಿ ಪ್ರೇಮ್, ರಾಜೇಶ್ ಕೃಷ್ಣನ್, ಶೃತಿ ವಿ ಎಸ್, ನಕುಲ್ ಆಭಯಂಕರ್, ಸುಪ್ರೀಯ ರಾಮ್ ಹಾಡಿದ್ದಾರೆ,

 

ಬಿಕಿನಿಯಲ್ಲಿ ವೇದಿಕಾ ಸಖತ್ ಹಾಟ್: ನಟಿಯ ಅವತಾರ ನೋಡಿ ಸುಸ್ತಾದ ಅಭಿಮಾನಿಗಳು!

 ಕೆ ರಾಮ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ವಿಜಯನಗರ ಮಂಜು ನೃತ್ಯ ಈ ಚಿತ್ರಕ್ಕಿದೆ.  ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಲನಚಿತ್ರದ ಜೊತೆಗೆ ಉತ್ತಮ ಸಂಗೀತಮಯ ಚಿತ್ರವೂ ಹೌದು. ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು ಎನ್ನುತ್ತಾರೆ ನರ‍್ದೇಶಕರು.

 

ನಾಗಿಣಿ ಅವತಾರದಲ್ಲಿ ಸಂಗೀತಾ ಭಟ್​

ಶ್ರೀನಿವಾಸ್ ಪ್ರಭು, ಭವ್ಯ, ಕೋಮಲ ಬನವಾಸೆ, ವಿನೋದ್ ಶೇಷಾದ್ರಿ, ಶಿವಕುಮಾರ್ ಆರಾದ್ಯ, ಮೀಸೆ ಆಂಜನಪ್ಪ, ಶ್ವೇತ ರಮೇಶ್, ಸುನೀಲ್ ಎ ಮೋಹಿತೆ, ನಾಗಮಂಗಲ ಜಯರಾಮಣ್ಣ, ಚಂದನ ಶ್ರೀನಿವಾಸ್, ಡಾ.ಚಂದ್ರಶೇಖರ್ ಎನ್ ಆರ್, ಪೂಜಾ ರಾಮಚಂದ್ರ, ಯೋಗೇಶ್, ರೊಹಿಣಿ ಸೇರಿದಂತೆ ಐವತಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ  ನಟಿಸಿದ್ದಾರೆ

 

 

Share this post:

Translate »