ವಿಲೇಜ್ ರೋಡ್ ಫಿಲಂಸ್ ಸಂಸ್ಥೆ ಲಾಂಛನದಲ್ಲಿ ವಿನೋದ್ ಶೇಷಾದ್ರಿ ಅವರು ನಿರ್ಮಿಸಿರುವ ಹಾಗೂ
ಡಾ.ಗಿರಿಧರ್ ಹೆಚ್ ಟಿ ಅವರ ನಿರ್ದೇಶನದ, ಬಹು ತಾರಾಗಣದ ಹಾಗೂ ಬಹು ನಿರಿಕ್ಷೇಯ “ಪರಿಮಳ ಡಿಸೋಜಾ” ಕನ್ನಡ ಚಲನಚಿತ್ರವನ್ನು ಇತ್ತೀಚಿಗೆ ಪ್ರಾದೇಶಿಕ ಸೆನ್ಸಾರ್
ಮಂಡಳಿ ವೀಕ್ಷಿಸಿ U/A ಪ್ರಮಾಣ ಪತ್ರವನ್ನು ನೀಡಿದೆ. ಚಿತ್ರ ಸೆಪ್ಟೆಂಬರ್ 15 ರಂದು ಬಿಡುಗಡೆಯಾಗುತ್ತಿದೆ.
ಇತ್ತೀಚಿಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಪರಿಮಳ ಡಿಸೋಜಾ ಚಿತ್ರದ ಟ್ರೈಲರ್ ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಹತ್ತು ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿ ದಾಖಲೆ ಸೃಷ್ಟಿಸಿದ್ದಾರೆ,ಕರ್ನಾಟಕ ಅಲ್ಲದೆ ಚೆನೈ ಮುಂಬೈ ಹೈದ್ರಾಬಾದ್ ಹಾಗೂ ವಿದೇಶಗಳಲ್ಲೂ ಈ ಚಿತ್ರ ತೆರೆಕಾಣುತ್ತಿದೆ
ಸಾಹಿತಿಗಳಾದ ಡಾ ವಿ ನಾಗೇಂದ್ರ ಪ್ರಸಾದ್ , ಜಯಂತ್ ಕಾಯ್ಕಿಣಿ, ಕೆ ಕಲ್ಯಾಣ್ ಅವರುಗಳು ಹಾಡುಗಳನ್ನ ಬರೆದಿದ್ದು , ಕ್ರಿಸ್ಟೋಫರ್ ಜೇಸನ್ ಸಂಗೀತ ನೀಡಿದ್ದಾರೆ. ಕೆ ರಾಮ್ ಛಾಯಾಗ್ರಹಣ ಹಾಗೂ ಸಂಜೀವ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ.
ಕೋಮಲ ಬನವಾಸೆ, ಭವ್ಯ, ಶ್ರೀನಿವಾಸ್ ಪ್ರಭು, ವಿನೋದ್ ಶೇಷಾದ್ರಿ, ಶ್ವೇತ ರಮೇಶ್, ಪೂಜಾ ರಾಮಚಂದ್ರ, ನಾಗಮಂಗಲ ಜಯರಾಮ್, ಮೀಸೆ ಆಂಜನಪ್ಪ, ಜ್ಯೋತಿ ಮರೂರ್, ಉಗ್ರಂ ರೆಡ್ಡಿ, ಚಂದನ ಶ್ರೀನಿವಾಸ್, ಲಕ್ಷ್ಮಣ್ ಗೌಡ, ರೋಹಿಣಿ ಮುಂತಾದವರು “ಪರಿಮಳಾ ಡಿಸೋಜ” ಚಿತ್ರದ ತಾರಾಬಳಗದಲ್ಲಿದ್ದಾರೆ.