Sandalwood Leading OnlineMedia

ʻಕೋಟಿʼ ಉತ್ಸಾಹದಲ್ಲಿದ್ದಾರೆ ಪರಮ್.. ʻಕೋಟಿʼ ಕಥೆಯಾಗಿದ್ದೇಗೆ..? ಮೊದಲ ಸಿನಿಮಾದ ಅನುಭವ ಹೇಳಿದ ನಿರ್ದೇಶಕರು

ಜನ ಥಿಯೇಟರ್ ಗೆ ಬರುತ್ತಿಲ್ಲ ಎಂಬ ಕೊರಗು ಇದೆ. ಆ ಕೊರಗನ್ನು ʻಕೋಟಿʼ ಖಂಡಿತ ನಿಭಾಯಿಸುವ ಭರವಸೆ ಇದೆ. ಯಾಕಂದ್ರೆ ಈಗಾಗಲೇ ರಿಲೀಸ್ ಆಗಿರುವ ಟೀಸರ್ ಮತ್ತು ಹಾಡು ಈ ನೀರೀಕ್ಷೆಯನ್ನು ಹುಟ್ಟಿಸಿದೆ.

ಜನತಾ ಸಿಟಿ ಹಾಡು, ಕೋಟಿ ಸುತ್ತ ಸುತ್ತುವ ಸಂಭವಿಸುವ ಕೆಲವೊಂದು ಘಟನೆ, ಆ ಪುಟ್ಟ ಫ್ಯಾಮಿಲಿ ಈ ಎಲ್ಲಾ ವಿಚಾರಗಳು ಸಿನಿಮಾವನ್ನು ನೋಡಲೇಬೇಕೆಂಬ ಹೆಬ್ಬಯಕೆಯನ್ನು ಉಂಟು ಮಾಡಿದೆ.

 

ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳ ಮನಗೆದ್ದ `ಸಹರಾ’ ಟ್ರೇಲರ್; ಕ್ರಿಕೆಟ್ ಆಧರಿತ ಕಥೆಗೆ ಪ್ರೇಕ್ಷಕ ಫಿದಾ

ಜೂನ್ 14ರಂದು ಕೋಟಿ ಸಿನಿಮಾ ರಿಲೀಸ್ ಆಗಲಿದ್ದು, ಪರಮ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದೆ. ಸಿನಿಮಾ ನಿರ್ದೇಶನಕ್ಕೆ ಹೊಸಬರೇ ಆದರೂ ಕತೆ ಹೇಳುವುದು ಅವರಿಗೆ ಹೊಸದಲ್ಲ. ಟೆಲಿವಿಷನ್ ಚಾನೆಲ್ಲಿನಲ್ಲಿ ಹಲವು ಯಶಸ್ವೀ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ರೂಪಿಸಿದ ಅನುಭವವಿರುವ ಅವರು ಇಲ್ಲಿ ವಿಶಾಲ ಕ್ಯಾನ್ವಾಸಿನಲ್ಲಿ ಕತೆ ಹೇಳುವ ಸವಾಲನ್ನು ಸ್ವೀಕರಿಸಿದ್ದಾರೆ.

ಅವರ ನಿರ್ದೇಶನದಲ್ಲಿ ಮೂಡಿ ಬಂದ ಕೋಟಿ ಬಗ್ಗೆ ಪ್ರೇಕ್ಷಕರಿಘು ಸಾಕಷ್ಟು ಕುತೂಹಕವಿದೆ. ಸಿನಿಮಾದ ಅನುಭವ, ಕಥೆಯ ಆಯ್ಕೆ ಬಗ್ಗೆ ʻಚಿತ್ತಾರʼದೊಂದಿಗೆ ನಿರ್ದೇಶಕ ಪರಮ್ ಮಾತನಾಡಿದ್ದಾರೆ.

* ಮೊದಲ ನಿರ್ದೇಶನದ ಅನುಭವ ಹೇಗಿತ್ತು..?

ʻನನ್ನ ಕನಸು ಈ ಸಿನಿಮಾ ಮೂಲಕ ನಿಜವಾಗಿರುವುದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇದೊಂದು ದೊಡ್ಡ ಅನುಭವದ ರೀತಿಯೇ ಆಯ್ತು. ತುಂಬಾ ಕಲಿಯುವುದಕ್ಕೆ ಸಿಕ್ಕಿದೆ. ಮೇಕಿಂಗ್ ಪ್ರೊಸೆಸ್ ನಲ್ಲಂತು ಕಷ್ಟ-ದುಃಖ ಎಲ್ಲವನ್ನು ಅನುಭವಿಸಿದೆ. ಜೊತೆಗೆ ಸಾಕಷ್ಟು ಕಲಿತಿದ್ದೀನಿ. ಜೀವನ ಪೂರ್ತಿಗೆ ಆಗುವಷ್ಟು ಅನುಭವ ಸಿಕ್ಕಿದೆ. ಒಂದು ಸಿನಿಮಾ ಮಾಡಿ ಮುಗಿಸುವುದೊರಳಗೆ ನಾನು ಬದಲಾಗಿದ್ದೀನಿʼ.

* ಕೋಟಿ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು ಹೇಗೆ..?

ಇದನ್ನೂ ಓದಿ :B AJANEESH LOKANATH

ʻಒಂದು ಕಥೆಯನ್ನು ಹೇಳಬೇಕು ಎಂಬ ಒದ್ದಾಟ ಆಗಿದ್ದಕ್ಕೆ ನಾನು ಕೋಟಿ ಸಿನಿಮಾ ಮಾಡುವುದಕ್ಕೆ ಬಂದಿದ್ದು. ನನ್ನತ್ರ ಮೂರ್ನಾಲ್ಕು ಕಥೆಗಳಿದ್ದವು. ಅದರಲ್ಲಿ ಈ ಕಥೆ ಜೊತೆಗೆ ಹೋಗಬೇಕು ಅಂತ ಅನ್ನಿಸಿ, ಕೋಟಿ ಮಾಡಿದೆವು. ನಾನು ಮೂಲತಃ ಕಥೆಗಾರ. ಕಥೆಯನ್ನು ಹೇಳಬೇಕು ಅಂತಾನೇ ಒದ್ದಾಡುವವನು. ಈ ಕಥೆ ಮಾಡಿದ್ದೀನಿ. ಕೋಟಿ ಸಿನಿಮಾದ ಕಥೆ ನನ್ನನ್ನು ಹೆಚ್ಚು ಕಾಡಿದಂತದ್ದು. ಇದರಲ್ಲಿ ಧನಂಜಯ್ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ.ʼ

* ನಿರೀಕ್ಷೆ ಜಾಸ್ತಿ ಇದೆ.. ಸಿನಿಮಾದಲ್ಲಿ ಏನೆಲ್ಲಾ ಸಿಗಲಿದೆ..?

ʻಇದು ಒಂದೊಳ್ಳೆ ಕಂಟೆಂಟ್ ಇರುವಂಥ ಸಿನಿಮಾ. ಅದ್ಭುತವಾಗಿರುವ ಪರ್ಫಾಮೆನ್ಸ್ ಸಿಗುತ್ತದೆ. ಧನಂಜಯ್ ಅವರನ್ನು ನೀವೂ ಯಾವತ್ತು ಈ ರೀತಿಯಾಗಿ ನೋಡಿರುವುದಕ್ಕೆ ಸಾಧ್ಯವೇ ಇಲ್ಲ. ತಾರಮ್ಮ ಕೂಡ ಈ ಸಿನಿಮಾ ಮೂಲವ ವಿಭಿನ್ನವಾಗಿಯೇ ಕಾಣಿಸುತ್ತಾರೆ. ಕಥೆ ಸಿಗುತ್ತೆ, ಒಳ್ಳೆ ಪರ್ಫಾಮೆನ್ಸ್ ಸಿಗುತ್ತೆ, ಒಳ್ಳೆ ಮೇಕಿಂಗ್ ಸಿಗುತ್ತೆ. ಕನ್ನಡದ ಕಂಪು ಸಿಗಲಿದೆʼ ಎಂದಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ – ವಿಜಯ್ ದೇವರಕೊಂಡ ಸುದ್ದಿ ನಿಜವಾ..? ರಶ್ಮಿಕಾ ಕೊಟ್ಟ ಸೂಚನೆ ಏನು..?

ಈಗಾಗಲೇ ಪ್ರಚಾರದ ಕಾರ್ಯ ಕೂಡ ಶುರುವಾಗಿದೆ. ಧನಂಜಯ್ ನಟನೆಯೊಂದಿಗೆ ಖಳನಾಯಕನಾಗಿ ನಟಿಸಿರುವ ರಮೇಶ್ ಇಂದಿರಾ ಅವರನ್ನು ನೋಡುವುದಕ್ಕೂ ಕುತೂಹಲದಿಂದ ಜನ ಕಾಯುತ್ತಿದ್ದಾರೆ.

Share this post:

Related Posts

To Subscribe to our News Letter.

Translate »