ಸಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನ, ಕಾಮಿಡಿ ಕಿಂಗ್ ಜಗ್ಗೇಶ್ ನಟನೆಯ ಮೇಕಪ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಖಂಡಿತ್ತು. ದೊಡ್ಡಮ್ಮ ಪಾತ್ರದಲ್ಲಿ ಜಗ್ಗೇಶ್ ಅದ್ಭುತವಾಗಿ ನಟಿಸಿದ್ದರು. ಲೈಲಾ ಪಟೇಲ್, ಕೋಮಲ್, ಮಾಸ್ಟರ್ ಯತಿರಾಜ್ ಜಗ್ಗೇಶ್, ಬ್ಯಾಂಕ್ ಜನಾರ್ದನ್, ಟೆನ್ನಿಸ್ ಕೃಷ್ಣ ಸೇರಿದಂತೆ ದೊಡ್ಡ ಕಲಾವಿದರ ಗುಂಪು ಈ ಸಿನಿಮಾದಲ್ಲಿ.ಆದರೆ ಈಗ ದೊಡ್ಡಮ್ಮ ಪಾತ್ರದಲ್ಲಿ ಜಗ್ಗೇಶ್ ಮಾತ್ರವಲ್ಲ ನಟಿ ಪಂಕಜಾ ಕೂಡ ನಟಿಸಿದ್ದಾರೆ ಅನ್ನೋದು ಈಗ ತಿಳಿದು ಬರುತ್ತಿದೆ.
‘ಮೇಕಪ್ ಸಿನಿಮಾದಲ್ಲಿ ನಮ್ಮ ಮುಖಕ್ಕೆ ಮೋಲ್ಡ್ ಹಾಕುತ್ತಿದ್ದರು. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಂತ ಬರುತ್ತದೆ ಅದನ್ನು ಬೊಂಬೆ ಮೇಲೆ ಮಾಡಿ ಆನಂತರ ನಮಗೆ ಹಾಕುತ್ತಿದ್ದರು ಆ ಮುಖವಾಡ 24 ಗಂಟೆ ಎಸಿಯಲ್ಲಿ ಇರಬೇಕು ಇಲ್ಲದಿದ್ದರೆ ಸಣ್ಣ ಸಣ್ಣ ಬಿರುಕುಗಳು ಬರುತ್ತಿತ್ತು. ಈ ಮೇಕಪ್ ಲುಕ್ನ ಮೂರು ಜನ ಹಾಕಿಕೊಂಡಿದ್ದು ನನಗೆ ಜಯಲಲಿತಾ ರೀತಿ ಇರಬೇಕು ಸ್ಪಂಜ್ ಹಾಕಿ ದಪ್ಪ ದಪ್ಪ ಮಾಡುತ್ತಿದ್ದರು ಬೇಸಿಗೆ ಕಾಲದಲ್ಲಿ ಏನೂ ಮಾಡಲಾಗುತ್ತಿರಲಿಲ್ಲ ಆದರೆ ಜಗ್ಗೇಶ್ ಅಣ್ಣ ಮತ್ತು ಅವರ ಪತ್ನಿ ಪರಿಮಳಾ ಅವರು ಚೆನ್ನಾಗಿ ನೋಡಿಕೊಂಡರು. ಮೊದಲು ನಾನು ಹಾಕಿಕೊಳ್ಳುವೆ ನಂತರ ಟೆನ್ನಿಸ್ ಕೃಷ್ಣ ಹಾಕಿಕೊಳ್ಳುತ್ತಾರೆ ಕೊನೆಯಲ್ಲಿ ಜಗ್ಗೇಶ್ ಹಾಕಿಕೊಳ್ಳುತ್ತಾರೆ, ಮೂರು ಜನ ಹಾಕಿಕೊಳ್ಳುತ್ತಾರೆ ಆದರೆ ಮುಖ್ಯವಾಗಿ ದೊಡ್ಡಮ್ಮ ಧ್ವನಿ ನಾನೇ. ಮೇಕಪ್ ಸಿನಿಮಾದಲ್ಲಿ ದೊಡ್ಡಮ್ಮ ಪಾತ್ರವನ್ನು ಹುಡುಕಿ ಪಂಕಜಾ ಅವರೇ ಮಾಡಬೇಕು ಎಂದು ಮಾಡಿಸಿದ್ದು ಏಕೆಂದರೆ ಅವರ ಕಿಲಾಡಿ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ಮಾಡಿದ್ದೆ ಅವರ ಸಹೋದರನ ಸಿನಿಮಾದಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡಿದ್ದೆ. ನನ್ನ ಪಾತ್ರಗಳನ್ನು ನೋಡಿದಾಗ ಪಾತ್ರಕ್ಕೆ ಜೀವನ ತುಂಬುತ್ತೀಯಾ ಬಿಡಮ್ಮ ಎನ್ನುತ್ತಿದ್ದರು. ಜಗ್ಗೇಶ್ ಅಣ್ಣ ಅವರ ಜೊತೆ ಇದ್ದರೆ ಯಾರೇ ಆದರೂ ಖುಷಿಯಿಂದ ಕೆಲಸ ಮಾಡಿಕೊಂಡು ಇರುತ್ತಿದ್ದರು’ ಎಂದು ಪಂಕಜಾ ಖಾಸಗಿ ಕನ್ನಡ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಜಗ್ಗೇಶ್ ಅವರ ಬಗ್ಗೆ ಮಾತನಾಡಲು ನನಗೆ ನಾಲಿಗೆ ಇಲ್ಲ ಅವರ ಜೊತೆಗಿದ್ದರೆ ಎನರ್ಜಿ ಬರುತ್ತೆ ಆಮೇಲೆ ಆರೋಗ್ಯವಾಗಿರುತ್ತೀವಿ ಅವರಿಂದಲೇ ನಾನು ಆರೋಗ್ಯವಾಗಿರುವುದು’ ಎಂದು ಜಗ್ಗೇಶ್ ಒಳ್ಳೆ ಗುಣದ ಬಗ್ಗೆ ಹೊಗಳಿದ್ದಾರೆ
‘ಮುಖಕ್ಕೆ ಆ ಮುಖವಾಡ ಹಾಕಿದ್ದ ಕಾರಣ ಊಟ ಮಾಡಲು ಆಗುತ್ತಿರಲಿಲ್ಲ ಒಂದು ವೇಳೆ ಏನಾದರೂ ತಿನ್ನುವ ಪ್ರಯತ್ನ ಮಾಡಿದರೆ ಬಿರುಕು ಬರುತ್ತಿತ್ತು ಹೀಗಾಗಿ ಫುಲ್ ಲಿಕ್ವಿಡ್ ತೆಗೆದುಕೊಳ್ಳಬೇಕಿತ್ತು ತುಂಬಾ ಕಷ್ಟ ಇದ್ದ ಕಾರಣ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಸಖತ್ ತಮಾಷೆ ಇರುತ್ತಿತ್ತು ಡಬಲ್ ಮೀನಿಂಗ್ ಇರುತ್ತದೆ ಹೀಗಾಗಿ ರಿವೀಲ್ ಮಾಡಲು ಆಗಲ್ಲ. ಅನೇಕ ಸಲ ನಿರ್ಮಾಣ ಸಂಸ್ಥೆಗಳು ಸರಿಯಾಗಿ ಸಂಬಳ ಕೊಡುತ್ತಿದ್ದರು ಕೆಲವರು ಖಾಸಗಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಬಸ್ ಮತ್ತು ರೂಮ್ ಹಣ ಕೊಡುತ್ತಿದ್ದರು ಸಂಬಳ ಕೊಡುತ್ತಿರಲಿಲ್ಲ ನನ್ನ ಗಂಡನ ಪರಿಸ್ಥಿತಿ ಸರಿಯಾಗಿರಲಿಲ್ಲ ಯಾವ ನೆಂಟು ಆಗಿ ಬರಲಿಲ್ಲ. ಚಿತ್ರರಂಗದಲ್ಲಿ ಯಾರಿಗೂ ಕಷ್ಟದ ವಿಚಾರ ಹೇಳಿಕೊಂಡಿರಲಿಲ್ಲ ಒಂದು ವೇಳೆ ಹೇಳಿಕೊಂಡಿದ್ದರೂ ಸಹಾಯ ಮಾಡುತ್ತಿದ್ದರು ಅನಿಸುತ್ತದೆ’ ಎಂದಿದ್ದಾರೆ ಪಂಕಜಾ.