Sandalwood Leading OnlineMedia

ವಿಭಿನ್ನ ಕಥಾವಸ್ತುವಿನ, ಮಹಿಳಾ ಪ್ರಧಾನ ಚಿತ್ರ ಪದ್ಮಾವತಿ

 

     

 ತಲೆ ಬಾಚ್ಕೋಳ್ಳಿ ಪೌಡ್ರು ಹಾಕ್ಕೋಳ್ಳಿ  ಚಿತ್ರದಲ್ಲಿ ನಟಿಸಿ ನಿರ್ಮಾಣ ಮಾಡಿದ್ದ ವಿಕ್ರಂಆರ್ಯ ಗ್ಯಾಪ್ ನಂತರ ಮಿಲಿಟರಿ ಅಧಿಕಾರಿಯಾಗಿ ನಾಯಕ ಮತ್ತು ನಾಮದೇವಭಟ್ಟರ್ ಹೆಸರಿನಲ್ಲಿ ನಿರ್ಮಾಪಕರಾಗಿ ಅಭಿನಯಿಸಿರುವ ’ಪದ್ಮಾವತಿ ಚಿತ್ರದ ಧ್ವನಿಸಾಂದ್ರಿಕೆಯನ್ನು ಲಹರಿವೇಲು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮತ್ತೋಂದು ಮುಖ್ಯ ಪಾತ್ರದಲ್ಲಿ ದಾಮೋದರ್‌ಪಾರಗೆ ಅಭಿನಯ ಹಾಗೂ ನಿರ್ಮಾಣದಲ್ಲಿ ಪಾಲುದಾರರು. ಹಿರಿಯ ನಿರ್ದೇಶಕರುಗಳ ಗರಡಿಯಲ್ಲಿ ಪಳಗಿರುವ ಮಿಥುನ್‌ಚಂದ್ರಶೇಖರ್ ಚಿತ್ರಕತೆ, ಸಂಭಾಷಣೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. 

small screen to Bollywood; ಬೆಟ್ಟದಷ್ಟು ಅವಕಾಶಗಳ ನಿರೀಕ್ಷೆಯಲ್ಲಿ ಕೃತಿ ಬೆಟ್ಟದ್

       

ತಪ್ಪೇ ಮಾಡಬೇಡಿ, ಮಾಡುವ ತಪ್ಪನ್ನು ತಪ್ಪು ತಪ್ಪಾಗಿ ಮಾಡಬೇಡಿ, ತಪ್ಪು ಮಾಡಿದ ಮೇಲೆ ತಪ್ಪದೆ ತಪ್ಪಾಯಿತು ಎಂದು ಒಪ್ಪಿಕೊಳ್ಳಿ. ಎಲ್ಲೋ ಒಂದು ಕಡೆ ತಿಳಿಯದೆ ಇರೋ ವಯಸ್ಸಿನಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಅದನ್ನು ಹಲವಾರು ವರ್ಷಗಳ ನಂತರ ಹೆಣ್ಣು ಸರಿಪಡಿಸಿಕೊಳ್ಳುವ ದಾರಿಯಲ್ಲಿ ತನ್ನ ಹಳೆಯ ನೆನಪುಗಳನ್ನು ಕೆದಕಿಕೊಂಡು ಹೋಗುತ್ತಾಳೆ. ಅಲ್ಲಿಂದ ಅವಳ ಹಾದಿ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಹೇಳಲಾಗಿದೆ. ಜೊತೆಗೆ ತಾಯಿ ಮಗನ ಸೆಂಟಿಮೆಂಟ್ ಅಂಶಗಳು ಇರಲಿದೆ. ಶಿವಳ್ಳಿಬೆಟ್ಟ, ಸಾಗರ, ಹೊಸನಗರ,ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಕಡೆಗಳಲ್ಲಿ 51 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. 

 

ಕಡಲತಡಿಯ ತಂಡದ ವಿಭಿನ್ನ ಪ್ರಯತ್ನ, `ಚೇಜ಼್’ ಜುಲೈ 15ರಂದು ತೆರೆಗೆ

       

ಯುವತಿ,ಮಧ್ಯವಯಸ್ಸಿನ ಮಹಿಳೆ ಮತ್ತು ೪೬ ವರ್ಷದವಳಾಗಿ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ನಾಯಕಿ ಸಾಕ್ಷಿಮೇಘನಾ ಈಗ ಮೇಘನಾರಾಮ್ ಅಂತ ನಾಮಕರಣ ಮಾಡಿಕೊಂಡಿದ್ದಾರೆ. ಉಳಿದಂತೆ ಸುರೇಶ್‌ಸ್ವಾಮಿರಾವ್, ಕವಿತಪ್ರಿಯಾ, ರಾಘವಕುಮಾರ್,  ಅಭಿಲಾಶ್.ಬಿ.ಹೊಸನಗರ, ಶಿವಮೊಗ್ಗ ರಾಮಣ್ಣ, ಅರ್ಚನಾಶೆಟ್ಟಿ,ರಾಜೇಶ್ವರಿಪಾಂಡೆ, ಶರಣ್‌ಗಿನಕೇರಿ  ಮುಂತಾದವರ ತಾರಗಣವಿದೆ. ಪುಟ್ಟರಾಜಗವಾಯಿ ಆಶ್ರಮದ ವಿದ್ಯಾರ್ಥಿಯಾಗಿದ್ದ ಶರಣ್‌ಕುಮಾರ್ ಗಜೇಂದ್ರಗಡ ನಾಲ್ಕು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಜ್ಯೂ.ಎಸ್.ಜಾನಕಿ ಎಂದೇ ಖ್ಯಾತರಾಗಿರುವ ಕೊಪ್ಪಳದ ಗಂಗಮ್ಮ ಒಂದು ಗೀತೆಗೆ ಧ್ವನಿಯಾಗಿದ್ದಾರೆ. ಸಂಗೀತ ದಿನೇಶ್‌ಕುಮಾರ್, ಛಾಯಾಗ್ರಹಣ ಕೆ.ಎಂ.ಶೋಯಿಬ್‌ಅಹ್ಮದ್, ಕತೆ ಲತಾ.ಎಸ್, ಸಂಕಲನ ಈಶ್ವರ್, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ  ಸಂಯೋಜಿಸಿರುವ ತ್ರಿಭುವನ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ರಾವ್ ಅಂಡ್ ರಾವ್ಸ್ ಸಿನಿಮಾಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರವು ಜುಲೈ 15ರಂದು ತೆರೆಗೆ ಬರುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಸಾಹಸ ದೃಶ್ಯ ಹಾಗೂ ನಾಲ್ಕು ಹಾಡುಗಳನ್ನು ತೋರಿಸಲಾಯಿತು.

 

 

ನಾವು ಜೋಡಿಯಾಗಿ ತೆರೆಯ ಮೇಲೆ ನೋಡಲು ಇಷ್ಟಪಡುವ ನಟರು

 

 

 

 

Share this post:

Related Posts

To Subscribe to our News Letter.

Translate »