Rating :
ಮತ್ತೊಂದು ಸುನಿ ಜಾನರ್‌ನ ಚಿತ್ರ ರಿಲೀಸ್ ಆಗಿದೆ. ಎಂದಿನAತೆ ಸುನಿ ಜಾನರ್ ಸಿನಿಮಾಗಳಲ್ಲಿರುವ ನಗುವಿನ ಹನಿ, ಭಾವನೆಯ ಆಳ, ಮನಮುಟ್ಟುವ ಸಂಭಾಷಣೆಗಳು ಮತ್ತು ಗಮನ ಸೆಳೆಯುವ ಹಾಡುಗಳು ಇಲ್ಲೂ ಮುಂದುವರಿದಿದೆ. ಚಿತ್ರಮಂದಿರದಲ್ಲಿ ಕುಳಿತು ಎರಡೂವರೆ ಗಂಟೆ ಸಿನಿಮಾ ನೋಡುವ ಪ್ರೇಕ್ಷಕನನ್ನು ರಂಜಿಸಬೇಕು ಎಂಬುದಷ್ಟೇ ಅನ್ನುವ ಸುನಿ ಅವರ ಉದ್ದೇಶ ಇಲ್ಲೂ ಈಡೆರಿದೆ. `ಒಂದು ಸರಳ ಪ್ರೇಮ ಕಥೆ’ ಎಂದಿದ್ದರೂ, ಇಲ್ಲಿರುವ ಲವ್ ಸ್ಟೋರಿ ಸಾಕಷ್ಟು ವಿರಳವಾಗಿದೆ. ಕಥೆಯ ವಿಚಾರಕ್ಕೆ ಬರೋದಾದ್ರೆ. ಕಥಾನಾಯಕ ಅತಿಶಯ್‌ಗೆ (ವಿನಯ್) ಜೀವನದಲ್ಲಿ ಇರುವುದು ಫೇಮಸ್ ಮ್ಯೂಸಿಕ್ director ಆಗುವ ಮತ್ತು ಪ್ರೇಯಸಿಯನ್ನೇ ಮದುವೆ ಆಗುವ ಕನಸು. ಈ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ಅತಿಶಯ್ ಎದುರಿಸುವ ಅತಿಶಯದ ಘಟನೆಗಳೆ ಚಿತ್ರದ ಜೀವಾಳ.. ಸಾಕಷ್ಟು ಟ್ವಿಸ್ಟ್ & ಟರ್ನ್ಗಳನ್ನು ಕಥೆಯೊಳಗೆ ಇಟ್ಟು, ಕೊನೆವರೆಗೂ ಕುತೂಹಲ ಉಳಿಸುವುದರ ಮೂಲಕ ನಿಜಕ್ಕೂ ಒಂದು `ವಿರಳ’ ಸಿನಿಮಾವಾಗಿದೆ.
READ MORE Sugar Factory Movie Review: ನಗುವಿನ ಕಡಲಲ್ಲಿ ರೋಚಕ ಒಲವಿನ ಪಯಣ
ವಿನಯ್ ರಾಜ್‌ಕುಮಾರ್ ‘ಒಂದು ಸರಳ ಪ್ರೇಮಕಥೆ’ ಸಿನಿಮಾದದಲ್ಲಿ ನೈಜ ಅಭಿನಯದಿಂದ ಗಮನ ಸೆಳೆಯುತ್ತಾರೆ. ಸಿಂಪಲ್ ಸುನಿ ಬರೆದಿರುವ ಅರ್ಥಗರ್ಭಿತ ಸಂಭಾಷಣೆಗಳಿಗೆ ಭಾವ ತುಂಬಿ ನಟಿಸಿದ್ದಾರೆ. ಮಿಡಲ್ ಕ್ಲಾಸ್ ಮಂದಿಯ ಕ್ಲಾಸಿಕಲ್ ಮನೋಭಾವವನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ಗೆದ್ದಿದ್ದಾರೆ. ಅನುರಾಗಳಾಗಿ ನಟಿ ಸ್ವಾದಿಷ್ಟ ಇಷ್ಟವಾಗುತ್ತಾರೆ. `ರಾಧೆ’ಯಾಗಿ ಮಲ್ಲಿಕಾ ಸಿಂಗ್ ಗಮನ ಸೆಳಯುತ್ತಾರೆ.ರಾಜೇಶ್ ನಟರಂಗ ಸಂಬಾಷಣೆಯ ಇರುವ ನಟನೆಗಿಂತ ಕಣ್ಣಲ್ಲೇ ನಟಿಸುವ ಬಗೆ ಬೆರಗು ಮೂಡಿಸುತ್ತದೆ. ಸಾಧು ಕೋಕಿಲ ಅವರು ಈ ಸಿನಿಮಾದಲ್ಲಿ ಸಾಧು ಕೋಕಿಲ ಆಗಿಯೇ ಕಾಣಿಸಿಕೊಂಡಿರೋದು ನಿಜವಾದ ಟ್ವಿಸ್ಟ್. ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ & ಶ್ವೇತಾ ಶ್ರೀವಾತ್ಸವ್ ಕಥೆಗೆ ಯಾವ ರೀತಿಯ ತಿರುವು ಕೊಡುತ್ತಾರೆ ಅನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು. ಅಮ್ಮನಾಗಿ ಅರುಣಾ ಬಾಲರಾಜ್, ಅಜ್ಜಿಯಾಗಿ ಸಂಧ್ಯಾ ಮಧು ರಾವ್ ಕಾಡುತ್ತಾರೆ.
READ MORE ; Garadi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?
ಎಂ.ಎಲ್.ಪ್ರಸನ್ನ ಅವರ ಕಥೆಗೆ ಸುನಿ ಬೇರೆಯದೇ ಆಯಾಮ ಕೊಟ್ಟು ನೋಡುಗನನ್ನು ರಂಜಿಸುವಲ್ಲಿ ಗೆದ್ದಿದ್ದಾರೆ. ಸಂಗೀತದ ಜೊತೆಗೆ ಸಾಗುವ ತ್ರಿಕೋನ ಪ್ರೇಮಕಥೆಯುಳ್ಳ ಈ ಸಿನಿಮಾಗ ವೀರ್ ಸಮರ್ಥ್, ಸಮರ್ಥವಾದ ಸಂಗೀತ ಸಂಯೋಜನೆ ನೀಡುವಲ್ಲಿ ಗೆದ್ದಿದ್ದಾರೆ `ನೀನ್ಯಾರೆಲೆ..’, ‘ಗುನುಗುನುಗೋ…’ ಹಾಡುಗಳು ಸಿನಿಮಾ ಮುಗಿದ ಮೇಲೂ ಗುನುಗಿಸಿಕೊಳ್ಳುತ್ತದೆ. `ಮೂಕನಾಗಬೇಕು ಜಗದೊಳು..’ ಹಾಡಿನ ಆಯ್ಕೆ ಕಥೆಗೆ ಇನ್ನಷ್ಟು ಶಕ್ತಿ ತುಂಬಿದೆ. ಒಟ್ಟಿನಲ್ಲಿ `ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಅಂತ ಟೈಟಲ್ ಕೊಟ್ಟು `ಭಯಂಕರ’ hit ಕೊಟ್ಟ ಸುನಿ, `ಸರಳ ವಿರಳ ಪ್ರೇಮಕಥೆ’ಯಲ್ಲೂ ಮೋಡಿ ಮಾಡಿದ್ದಾರೆ. ಕತ್ತಲೆ ಕತ್ತಲೆ, ರಕ್ತ ರಕ್ತ.. ಚಿತ್ರಗಳ ನಡುವೆ ಒಂದು `ವಿರಳ’ ತಂಗಾಳಿಯನ್ನು ಪ್ರೇಕ್ಷಕರು ಸಿನಿಮಾ ಮಂದಿರದಲ್ಲಿ ಅನುಭವಿಸಬಹುದು.