ನಟ ನಿರ್ದೇಶಕ ಓಂ ಪ್ರಕಾಶ್ ರಾವ್ ದರ್ಶನ್ ಅವರ ನಿವಾಸಕ್ಕೆ ತೆರಳಿ ಅವರನ್ನ ಭೇಟಿ ಮಾಡಿದ್ದು ಅವರ ಜೊತೆಗಿರುವ ಚಿತ್ರ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರು ಓಂ ಪ್ರಕಾಶ್ ರಾವ್ ಅವರೊಂದಿಗೆ ಸಿನಿಮಾ ಮಾಡಬಹುದು ಎಂದು ಹೀಗೆ ಹಲವಾರು ಚರ್ಚೆಗಳಾಗುತ್ತಿವೆ.ಈ ಜೋಡಿಯ ಚಿತ್ರವೆಂದರೆ ಸಿನಿಮಾ ಪ್ರೇಕ್ಷಕರಿಗೆ ಒಂಚೂರು ಕುತೂಹಲ ಜಾಸ್ತಿ. ಕಾರಣ ಇಷ್ಟೇ ಈ ನಿರ್ದೇಶಕ ಕ್ಯಾಪ್ ಹಾಕಿಕೊಂಡು ಸಿನಿಮಾ ಮಾಡಿದರು ಎಂದರೆ ಅದೊಂದು ಒಳ್ಳೆಯ ಚಿತ್ರ ಎನ್ನಿಸಿಬಿಡುತ್ತದೆ ಕಲಾಸಿ ಪಾಳ್ಯ, ಅಣ್ಣಾವ್ರು, ಅಯ್ಯ, ಮಂಡ್ಯ, ಯೋಧ, ಪ್ರಿನ್ಸ್ ಚಿತ್ರಗಳ ಮೂಲಕ ಕಮಾಲ್ ಮಾಡಿದ್ದ ಈ ಕಾಂಬಿನೇಷನ್ ಮತ್ತೆ ತೆರೆಯ ಮೇಲೆ ಒಂದಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.