Sandalwood Leading OnlineMedia

 ಓ ಎಂ ಜಿ ಗೆ ಶುರುವಾಯ್ತು  ಸೆನ್ಸಾರ್ ಸಂಕಟ, ಪ್ರಮಾಣ ಪತ್ರ ನೀಡಲು ನಿರಾಕರಣೆ.

 ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ. ಸಿಬಿಎಫ್​ಸಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದೆ.ಸಾಲು-ಸಾಲು ಫ್ಲಾಪ್ ಸಿನಿಮಾಗಳನ್ನು ನೀಡಿ ಗೆಲುವಿಗಾಗಿ ಹಾತೊರೆಯುತ್ತಿರುವ ಅಕ್ಷಯ್ ಕುಮಾರ್​ಗೆ  ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದ ತಮ್ಮದೇ ನಟನೆಯ ‘ಓಎಂಜಿ ಸಿನಿಮಾದ ಸೀಕ್ವೆಲ್ ‘ಓಎಂಜಿ 2‘ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಸೆನ್ಸಾರ್ ಮಂಡಳಿಯವರು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ನಿರಾಕರಿಸಿದ್ದು, ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿದ್ದಾರೆ.

ಇನ್ನೂ ಓದಿ ಐಶ್ವರ್ಯ ರಜನಿಕಾಂತ್ ಮತ್ತೇ ಮದುವೆ ಆಗುತ್ತಿದ್ದಾರೆ. ಧನುಷ್ ಗೆ ಸಂಬಂಧ ಮುರಿದು ಬಿತ್ತಾ? ಸಿನಿ ಬದುಕಿನಲ್ಲಿ ವಿಚ್ಛೇದನಗಳ ಸರಣಿ, ಏನಿದು ಬದುಕು..?

ಓಎಂಜಿ 2 ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಭಗವಂತ ಶಿವನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಭಕ್ತ ಕಷ್ಟದಲ್ಲಿರುವಾಗ ಆತನ ಸಹಾಯಕ್ಕೆ ಧಾವಿಸುವ ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಸಿನಿಮಾದ ಬಿಡುಗಡೆಯನ್ನು ಆಗಸ್ಟ್ 11 ರಂದು ಮಾಡುವುದಾಗಿ ಘೋಷಣೆಯೂ ಮಾಡಿ ಆಗಿತ್ತು. ಆದರೆ ಈಗ ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದೆ ಇದರಿಂದ ಚಿತ್ರತಂಡ ಆತಂಕಕ್ಕೆ ಒಳಗಾಗಿದೆ.ಈ ಸಿನಿಮಾವು ಲೈಂಗಿಕ ಶಿಕ್ಷಣದ ಕುರಿತಾದ ಕತೆಯನ್ನು ಹೊಂದಿದೆ. ಇದೇ ಕಾರಣಕ್ಕೆ ಈ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್​ಸಿ ಹಿಂದೇಟು ಹಾಕಿದೆ ಎನ್ನಲಾಗುತ್ತಿದೆ. ಲೈಂಗಿಕ ಶಿಕ್ಷಣದಂಥಹಾ ವಿಷಯದಲ್ಲಿ ಭಗವಂತ ಶಿವ ಪಾತ್ರವನ್ನು ಎಳೆದು ತಂದಿರುವುದರಿಂದ ಸಿಬಿಎಫ್​ಸಿ ಇಕ್ಕಟ್ಟಿಗೆ ಸಿಲುಕಿದೆ. ಸಿನಿಮಾದ ಕೆಲವು ದೃಶ್ಯಗಳು, ಸಂಭಾಷಣೆಗಳು ಲೈಂಗಿಕತೆಗೆ ಸಂಬಂಧಿಸಿದ್ದಾಗಿದ್ದು ಹಾಗಾಗಿಯೇ ಈ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್​ಸಿ ಯೋಚನೆ ಮಾಡುತ್ತಿದೆ. ಸಿನಿಮಾವನ್ನು ಪರಿಶೀಲನಾ ಸಮಿತಿಗೆ ರವಾನಿಸಲಾಗಿದ್ದು, ಸಮಿತಿಯ ನಿರ್ಣಯದ ಮೇಲೆ ಸಿನಿಮಾದ ಭವಿಷ್ಯ ನಿಂತಿದೆ.

ಇನ್ನೂ ಓದಿ *‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ*

ಶಿವನ ಅವತಾರದಲ್ಲಿ ಅಕ್ಷಯ್ ಕುಮಾರ್; ‘OMG 2’ ರಿಲೀಸ್ ದಿನಾಂಕ ಘೋಷಣೆ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ ಅನ್ನುತ್ತಿದೆ ಬಾಲಿವುಡ್ ಅಂಗಳ ಈ ಹಿಂದೆ ಬಿಡುಗಡೆ ಆಗಿದ್ದ ‘ಓಎಂಜಿ ಸಿನಿಮಾದಲ್ಲಿ ಭಗವಂತ ಶ್ರೀಕೃಷ್ಣ ಭೂಮಿಗೆ ಬಂದು ದೇವರ ಹೆಸರು ಹೇಳಿಕೊಂಡು ಮೋಸ ಮಾಡುವವರ ವಿರುದ್ಧ ಹೋರಾಡುತ್ತಿರುವ ನಾಸ್ತಿಕನಿಗೆ ಬೆಂಬಲವಾಗಿ ನಿಲ್ಲುವ ಕತೆ ಹೊಂದಿತ್ತು. ಆ ಸಿನಿಮಾ ಸೂಪರ್ ಹಿಟ್ ಆಗಿದ್ದಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ರೀಮೇಕ್ ಸಹ ಆಯ್ತು. ಕನ್ನಡದಲ್ಲಿ ಮುರಾರಿ ಹೆಸರಿನಲ್ಲಿ ಸಿನಿಮಾ ರೀಮೇಕ್ ಆಗಿದ್ದು ಉಪೇಂದ್ರ ಹಾಗೂ ಸುದೀಪ್ ಒಟ್ಟಿಗೆ ನಟಿಸಿದ್ದರು.

ಇನ್ನೂ ಓದಿ ಮದುವೆಗಾಗಿ ಇಷ್ಟೊಂದು ತಲೆ ಕೆಡಿಸಿಕೊಂಡ್ರಾ ವಿಜಯ್ ದೇವರಕೊಂಡ. ಸರಸ-ವಿರಸ ಮದುವೆ ಬಗ್ಗೆ ಹೇಳಿದ್ದೇನು ಈ ನಟ.?

ಇದೀಗ ಬಿಡುಗಡೆ ಸಜ್ಜಾಗಿರುವ ‘ಓಎಂಜಿ 2’ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಶಿವ ಭಕ್ತನ ಪಾತ್ರದಲ್ಲಿ ನಟಿಸಿದ್ದು ಆತನ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಕಾಪಾಡುವ ಸಾಕ್ಷಾತ್ ಶಿವನೇ ಬರುವ ಕತೆಯನ್ನು ಒಳಗೊಂಡಿದೆ. ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಸಿನಿಮಾದಲ್ಲಿ ಯಾಮಿ ಗೌತಮ್, ಅರುಣ್ ಗೋವಿಲ್ ಇನ್ನೂ ಹಲವರು ನಟಿಸಿದ್ದಾರೆ.

Share this post:

Related Posts

To Subscribe to our News Letter.

Translate »