Sandalwood Leading OnlineMedia

ಹೆದರಿಸಿ ಬೆದರಿಸಿ `ಎಚ್ಚರಿಸುವ’ ಚಿತ್ರ

 

 

`ವಿಜಯಾನಂದ’ ಚಿತ್ರದ ರೆಟ್ರೋ ಹಾಡಿಗೆ ಪ್ರೇಕ್ಷಕ ಫಿದಾ  

ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಪ್ರಯೋಗಾತ್ಮಕ ಚಿತ್ರಗಳ ಸಾಲಿಗೆ `ಓ’ ಚಿತ್ರವನ್ನು ಹೊಸದಾಗಿ ಸೇರಿಸಿಕೊಳ್ಳಬಹುದು. ಹೊಸತನ್ನು ನಿರೀಕ್ಷಿಸುತ್ತಿರುವ ಪ್ರೇಕ್ಷಕ ಬಳಗಕ್ಕೆ ಈ ಸಿನಿಮಾ ಖಂಡಿತ ನಿರಾಸೆಪಡಿಸಲ್ಲ. ಈ ಹಿಂದೆ ಚಿತ್ರದ ಟ್ರೇಲರ್ ಸಾಕಷ್ಟು ಮಂದಿಯನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿ, ಈಗ ಸಿನಿಮಾ ಕೂಡ ಗಮನ ಸೆಳೆದಿದೆ. ಟ್ರೇಲರೇ ಹಿಂಗಿದ್ದರೆ ಇನ್ನು ಸಿನಿಮಾ ಹೆಂಗಿರುತ್ತದೋ ಎಂದುಕೊ0ಡು ಬಂದವರಿಗೆ ಮೋಸವಾಗಲ್ಲ. ಅಕ್ಕ-ತಂಗಿಯರಿಬ್ಬರ ಜೀವನದಲ್ಲಿ ನಡೆದ ನೈಜ ಘಟನೆಯೇ ಚಿತ್ರದ ಕಥಾವಸ್ತು. ವಾಮಾಚಾರ ಮತ್ತು ದೆವ್ವದ ಮೇಲಿನ ಕುತೂಹಲದಿಂದ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ. ಲವ್ ಮಾಕ್ಟೇಲ್’ ಚಿತ್ರದ ನಂತರ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಒಟ್ಟಿಗೇ ನಟಿಸಿರುವ ಚಿತ್ರ `ಓ’. ವಾಮಾಚಾರ ಹಾಗೂ ಹಾರರ್ ಹಿನ್ನೆಲೆಯಲ್ಲಿ ಈ ಚಿತ್ರದ ಮೂಲಕ ಮಹೇಶ್ ಚಂದನವನಕ್ಕೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಕಿರಣ್ ತಲಕಾಡು ಚಿತ್ರದ ಕಥೆ ಬರೆಯುವುವುದರ ಜೊತೆಗೆ `ಏಕಾಕ್ಷರ ಫಿಲಂಸ್’ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿ, ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದಲ್ಲೇ ಗೆಲ್ಲುವ ಎಲ್ಲಾ ಸೂಚನೆ ನೀಡಿದ್ದಾರೆ.

 

ತೆರೆಯ ಮೇಲೆ ಮತ್ತೆ `ಮಠ’ದಾಟ! ಕುತೂಹಲ ಹೆಚ್ಚಿಸಿದೆ trailer

 

ಚಿತ್ರದ ಕಥೆಯ ವಿಚಾರಕ್ಕೆ ಬರೋದಾದರೆ, ಇಬ್ಬರು ಅಕ್ಕ ತಂಗಿಯರು ಪ್ರೇಮ ಕಹಾನಿಯ ನಡುವೆ ವಾಮಾಚಾರಕ್ಕೆ ಸಂಬAಧಿಸಿದ ಪುಸ್ತಕವೊಂದು ಜೀವಕ್ಕೇ ಕುತ್ತು ತಂದು ಬಿಡುತ್ತದೆ. ಆದರೆ, ಪುಸ್ತಕದಿಂದಾಗಿ ಅಕ್ಕ ಬಲಿಯಾಗುತ್ತಾಳೋ ಅಥವಾ ತಂಗಿ ಬಲಿಯಾಗುತ್ತಾಳೋ ಅನ್ನೋದಕ್ಕೆ ಚಿತ್ರವನ್ನೇ ನೋಡ ಬೇಕು. ಇನ್ನು, ನಿರ್ದೇಶಕರು ಅಕ್ಕ-ತಂಗಿಯ ನಡುವಿನ ಕಥೆಯನ್ನು ಇಟ್ಟುಕೊಂಡು ಅದ್ಭುತವಾದ ಮೆಸೇಜ್ ಒಂದನ್ನು ನೀಡುವ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಚಿತ್ರದ ಕೊನೆಯಲ್ಲಿ, ನಿಜಕ್ಕೂ ವಾಮಾಜಾರಕ್ಕೆ ಸಿಲುಕಿಕೊಂಡ ಜೀವಗಳು ಉಳಿಯುತ್ತವಾ? ಪುಸ್ತಕದ ಮಾಯಾ ಶಕ್ತಿ ಏನಾಗುತ್ತದೆ? ಅಸಲಿಗೆ ಚಿತ್ರಕ್ಕೆ `ಓ’ ಎಂಬ ಟೈಟಲ್ ಯಾಕೆ? ಇವೆಲ್ಲವನ್ನೂ ಚಿತ್ರ ನೋಡಿಯೇ ಅರಿಯಬೇಕು.

 

ಬಹುನಿರೀಕ್ಷಿತ `ಧರಣಿ ಮಂಡಲ ಮಧ್ಯದೊಳಗೆ’ nov25ಕ್ಕೆ ತೆರೆಗೆ

 

 

ಅಭಿನಯದ ವಿಚಾರಕ್ಕೆ ಬರುವುದಾದರೆ, ಅಕ್ಕ-ತಂಗಿಯಾಗಿ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಹಾರರ್ ಜಾನರ್‌ನ ಚಿತ್ರದಲ್ಲೂ ಸೈ ಅನ್ನಿಸಿಕೊಂಡಿದ್ದಾರೆ. ಇಬ್ಬರೂ ಪೈಪೋಟಿಗೆ ಬಿದ್ದು ಅಭಿನಯಿಸಿದ್ದಾರೆ. ನಟ ಸಿದ್ದು ಮೂಲಿಮನಿಯ ಲೀಲಾಜಾಲವಾದ ನಟನೆ ಇಷ್ಟವಾಗುತ್ತದೆ. ಇನ್ನುಳಿದಂತೆ, ಪುಟ್ಟ ಪೋರನ ಬಾಯಲ್ಲಿನ ಪಂಚಿAಗ್ ಸಂಭಾಷಣೆಗಳನ್ನು ಕೇಳಿ ಆನಂದಿಸಲೇಬೇಕು. ಇನ್ನುಳಿದಂತೆ, ಎಲ್ಲಾ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

 

`ಡೆಡ್ಲಿಕಿಲ್ಲರ್’ ಚಿತ್ರಕ್ಕೆ ನವರಸ ನಾಯಕ ಸಾಥ್

 

 

ಚಿತ್ರದ ಪ್ರಮುಖ ಅಂಶ ಎಂದರೆ ಈ ರೀತಿಯ ಕೌತುಕ ಕಥೆಯನ್ನು ಅದ್ಭುತವಾಗಿ ನಿರೂಪಿಸಿರುವುದು, ಚಿತ್ರಕ್ಕೆ ಹೊಸದೊಂದು ಆಯಾಮವನ್ನು ತಂದಿದೆ. ಒಂದು ವೇಳೆ ನಿರೂಪಣೆಯಲ್ಲಿ ಸೋತಿದ್ದರೆ ಚಿತ್ರ ಸಪ್ಪೆಯಾಗುತ್ತಿತ್ತು. ಅಂಡರ್‌ವಾಟರ್‌ನಲ್ಲಿ ಸರೆ ಹಿಡಿದ ದೃಶ್ಯಗಳು ಹಾರರ್ ಜಾನರ್ ಚಿತ್ರಗಳಲ್ಲಿ ಕನ್ನಡದ ಮಟ್ಟಿಗೆ ಬಹುಶಃ ಹೊಸದು. ಹಾರರ್ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಚಿತ್ರ ಇನ್ನಷ್ಟು ಥ್ರಿಲ್ ಕೊಡುತ್ತದೆ. ದೆವ್ವ ಭೂತ ಚಿತ್ರಗಳನ್ನು ನೋಡಬೇಕು ಎಂದು ಹಂಬಲಿಸುವವರಿಗೆ ಈ ಚಿತ್ರ ಇನ್ನಷ್ಟು ಭಯಭೀತಿಗೊಳಿಸುತ್ತದೆ. ಉಳಿದಂತೆ, ಅಮೃತಾ ಟಾಯ್ಲೆಟ್‌ನಲ್ಲಿ ಪುಸ್ತಕ ಓದುವ ದೃಶ್ಯ, ರಿಪೀಟ್ ಆಗುವ ಪುಸ್ತಕದ ದೃಶ್ಯ.. ಹೀಗೆ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಚಿತ್ರ ಇನ್ನಷ್ಟು ಆಪ್ತವಾಗುತ್ತಿತ್ತು.

 

ಈವಾರ ತೆರೆಗೆ ವಿಭಿನ್ನ ಹಾರರ್‌ ಚಿತ್ರ `ಓ’

 

 

ಈವರೆಗೆ ಪ್ರೇಕ್ಷಕ ನೋಡಿದ ಹಾರರ್ ಸಿನಿಮಾಗಳಿಗಿಂತ, ಅದೆಲ್ಲಕ್ಕಿಂತ ವಿಭಿನ್ನವಾದ ಚಿತ್ರ `ಓ’. ಈ ಥರದ ಚಿತ್ರಗಳನ್ನು ಮಾಡುವಾಗ ಇಡೀ ಚಿತ್ರತಂಡಕ್ಕೆ ತುಂಬಾ ಸಹನೆ ಇರಬೇಕು, ಆ ಸಹನೆ ಮತ್ತು ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತದೆ. ಬ್ಲಾಕ್ ಮ್ಯಾಜಿಕ್, ಹಾರರ್ ಹೀಗೆ ತುಂಬಾ ವಿಷಯಗಳಿರುವ `ಓ’ ಚಿತ್ರವನ್ನು ಇದನ್ನು ನಾರ್ಮಲ್ ಸಿನಿಮಾ ರೀತಿ ಶೂಟ್ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ, ಸಿನಿಮಾದ ಎಲ್ಲಾ ವಿಭಾಗಳನ್ನೂ ಸೂಕ್ತವಾಗಿ ನಿಭಾಯಿಸಿದ ನಿರ್ದೇಶಕ ಮಹೇಶ್ ಅವರ ಸಿನಿಮಾ ಪ್ರೀತಿ ಮೆಚ್ಚಲೇಬೇಕು.ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ ಮತ್ತು ಶ್ರೀಕಾಂತ್ ಸಂಕಲನ ಚಿತ್ರದ ಅಸಲಿ ಶಕ್ತಿ. ಇನ್ನು, ಹಾರರ್ ಜಾನರ್‌ನ ಚಿತ್ರದಲ್ಲಿ ಜಯಂತ್ ಕಾಯ್ಕಿಣಿಯವರ ಸಾಹಿತ್ಯದ ಹಾಡೊಂದು ರಿಲೀಫ್ ನೀಡುವಲ್ಲಿ ಯಶಸ್ವಿಯಾಗುತ್ತದೆ. ಒಟ್ಟಿನಲ್ಲಿ, ಹಾರರ್ ಜಾನರ್‌ನ ಚಿತ್ರಗಳನ್ನು ಇಷ್ಟ ಪಡುವವರಿಗೆ ಖಂಡಿತಾ `ಓ’ ನಿರಾಸೆ ಮೂಡಿಸೊಲ್ಲ.

 

 

 

Share this post:

Translate »