ಹೈದರಾಬಾದ್: ಹೊಸ ವರ್ಷಾಚರಣೆಗೆ ಕೆಲವೇ ದಿನ ಬಾಕಿಯಿದ್ದು, ಸ್ಟಾರ್ ನಟರು ಫ್ಯಾಮಿಲಿ ಸಮೇತ ಪ್ರವಾಸದ ಮೂಡ್ ನಲ್ಲಿದ್ದಾರೆ.
ಟಾಲಿವುಡ್ ಸ್ಟಾರ್ ಜ್ಯೂ.ಎನ್ ಟಿಆರ್ ಹೊಸ ವರ್ಷಾಚರಣೆಗೆ ಕುಟುಂಬ ಸಮೇತ ಜಪಾನ್ ಪ್ರವಾಸಕ್ಕೆ ತೆರಳಿದ್ದಾರೆ. ಹೊಸ ವರ್ಷ ಬರಮಾಡಿಕೊಳ್ಳಲು ಒಂದು ವಾರಕ್ಕೆ ಮೊದಲೇ ತಾರಕ್ ಜಪಾನ್ ಗೆ ವಿಮಾನವೇರಿದ್ದಾರೆ.ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕುಟುಂಬ ಸಮೇತ ಜ್ಯೂ.ಎನ್ ಟಿಆರ್ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಸೂಟ್ ನಲ್ಲಿ ಪತ್ನಿ, ಮಕ್ಕಳ ಸಮೇತ ತಾರಕ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.ಇನ್ನು, ಸಿನಿಮಾ ವಿಚಾರಕ್ಕೆ ಬಂದರೆ ಜ್ಯೂ.ಎನ್ ಟಿಆರ್ ಸದ್ಯಕ್ಕೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೃತಿಕ್ ರೋಷನ್ ನಾಯಕರಾಗಿರುವ ಬಾಲಿವುಡ್ ನ ವಾರ್ 2 ಮತ್ತು ಟಾಲಿವುಡ್ ನ ದೇವರ ಸಿನಿಮಾದಲ್ಲಿ ನಾಯಕರಾಗಿ ಜ್ಯೂ.ಎನ್ ಟಿಆರ್ ನಟಿಸುತ್ತಿದ್ದಾರೆ. ಇವೆರಡೂ ಸಿನಿಮಾಗಳೂ ಶೂಟಿಂಗ್ ಹಂತದಲ್ಲಿದೆ.