ಚಂದನ್ ಪತ್ನಿ ನಿವೇದಿತಾ ಗೌಡ ಈಗ ‘ಮಿಸೆಸ್ ಇಂಡಿಯಾ’
ಬಿಗ್ ಬಾಸ್ ಸೇರಿದಂತೆ ವಿವಿಧ ಶೋಗಳ ಮೂಲಕ ನಾಡಿನ ಜನರಿಗೆ ಪರಿಚಿತರಾಗಿರುವ ನಿವೇದಿತಾ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಶಸ್ತಿಯೊಂದನ್ನು ಮುಡಿಗೇರಿಸಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರಿಂದ ಪ್ರಶಸ್ತಿ ಪಡೆಯುತ್ತಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
https://www.instagram.com/p/CgRS5kDP5QW/
ಮಿಸೆಸ್ ಇಂಡಿಯಾ ಇಂಕ್ನಲ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿರುವ ಸಂಸ್ಥೆ, ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ , ಅದನ್ನು ನಿವೇದಿತಾ ಮಾಡಿದ್ದಾರೆ. ಮಿಸೆಸ್ ಇಂಡಿಯಾ ಇಂಕ್ನ್ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಬರೆದುಕೊಂಡಿದೆ.
https://www.instagram.com/p/CfGKQ1Sj3YS/
ಕನ್ನಡದ ರ್ಯಾಪರ್ ಚಂದನ್ ಶೆಟ್ಟಿಯ ಪತ್ನಿಯಾಗಿರುವ ನಿವೇದಿತಾ ಗೌಡ ಸದ್ಯ ಕಲ್ಲರ್ಸ್ ಕನ್ನಡದ ಗಿಚ್ಚಿ ಗಿಲಿ ಗಿಲಿ ಶೋನಲ್ಲಿಯೂ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
https://www.instagram.com/p/Ce2mnf0p29P/