ಚಂದನ್ ಶೆಟ್ಟಿ ಹಾಗೂ ನಿವೇದಿತಾ ಇಬ್ಬರು ತಮ್ಮ ತಮ್ಮ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಮುಂದಿನ ಜೀವನಕ್ಕಾಗಿ ಬೇರೆ ಬೇರೆ ಆಗ್ತಾ ಇದ್ದೀವಿ, ಕೆರಿಯಲ್ ಡೆವಲಪ್ಮೆಂಟ್ ಗಾಗಿ ಈ ನಿರ್ಧಾರ ಎಂದು ಜಡ್ಜಸ್ ಮುಂದೆಯೇ ಹೇಳಿದ್ದಾರೆ.
ಇಬ್ಬರಿಗೂ ಒಪ್ಪಿಗೆ ಇದ್ದ ಕಾರಣ ಒಂದೇ ದಿನದಲ್ಲಿ ಡಿವೋರ್ಸ್ ಸಿಕ್ಕಿದೆ. ಇಬ್ಬರ ಡಿವೋರ್ಸ್ ಶಾಕಿಂಗ್ ಎನಿಸಿದ್ದರು ಕೂಡ, ಅವರ ಸುತ್ತ ಸಾಕಷ್ಟು ಗಾಳಿ ಸುದ್ದಿ ಗಿರಕಿ ಹೊಡೆಯುತ್ತಿವೆ. ನಿವೇದಿತಾ ಇಷ್ಟು ವರ್ಷವಾದರೂ ಮಕ್ಕಳು ಬೇಡ ಅಂದಿದ್ದರು ಅದಕ್ಕೆ ಡಿವೋರ್ಸ್ ಆಗಿದೆ ಅಂತೆಲ್ಲಾ ಪುಕಾರು ಎದ್ದಿದೆ. ಇದಕ್ಕೆ ಅವರ ಆಪ್ತ ಬಳಗ ಹೇಳಿದ್ದೇನು..?
ಚಂದನ್ ಶೆಟ್ಟಿ ಅವರ ಆಪ್ತ ನವರಸನ್ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನದವರೆಗೂ ನಾನು ಚಂದನ್ ಜೊತೆಯಲ್ಲೇ ಇದ್ದೆ. ನಮಗೂ ಕೂಡ ಇದು ಶಾಕಿಂಗ್ ನ್ಯೂಸ್. ಚಂದನ್ಗೆ ಕಾಲ್ ಮಾಡುತ್ತಿದ್ದೇನೆ.ಇದನ್ನೂ ಓದಿ:ವಿಚ್ಛೇದನ ಪಡೆದ ಚಂದನ್-ನಿವೇದಿತಾ : ನಾಲ್ಕು ವರ್ಷದ ದಾಂಪತ್ಯಕ್ಕೆ ಕೊನೆ!
ಆದರೆ ನಂಬರ್ ಸ್ವಿಚ್ ಆಫ್ ಬರ್ತಿದೆ ನಮ್ಮ ಸಿನಿಮಾದಲ್ಲಿ ಚಂದನ್ ನಟಿಸಿದ್ದರು. ಯಾಕೆ ಈ ತರಹ ನಿರ್ಧಾರ ತೆಗೆದುಕೊಂಡ್ರು ಅಂತ ಗೊತ್ತಾಗ್ತಿಲ್ಲ. ನಿವೇದಿತಾ ತುಂಬಾ ಒಳ್ಳೆ ಹುಡುಗಿ. ನಿವೇದಿತಾ ಹಾಗೂ ಚಂದನ್ ಕೆರಿಯರಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ಸುತ್ತೆ. ಇಬ್ಬರೂ ಅನ್ನೋನ್ಯವಾಗಿ ಇದ್ದರು. ಯಾವ ಗಲಾಟೆಯೂ ಇಲ್ಲ. ಪರಸ್ಪರ ಒಪ್ಪಿ ಈ ನಿರ್ಧಾರ ತೆಗೆದುಕೊಂಡಿರಬಹುದು.
ನಿವೇದಿತಾ ಕನಸುಗಳಿಗೆ ಚಂದನ್ ಸಾಥ್ ಕೊಟ್ಟಿದ್ದಾರೆ. ಚಂದನ್ ಕನಸುಗಳಿಗೆ ನಿವೇದಿತಾ ಸಪೋರ್ಟ್ ಮಾಡುತ್ತಿದ್ದರು. ನಿವೇದಿತಾ ನಾಯಕಿಯಾಗಿ ಸಿನಿಮಾ ಮಾಡ್ತಿದ್ರು. ಇದೇ ವಿಚಾರ ವಿಚ್ಛೇದನಕ್ಕೆ ಕಾರಣ ಆಯ್ತಾ ಅನ್ನಿಸುತ್ತೆ.ಇದನ್ನೂ ಓದಿ:ಐರಾ- ಯಥರ್ವ್ಗೆ ಬೊಂಬಾಟ್ ಗಿಫ್ಟ್ ಕಳಿಸಿದ ‘ಕಲ್ಕಿ’ ಮಾಮ ಪ್ರಭಾಸ್
ಮಕ್ಕಳಾಗುವ ವಿಚಾರದಲ್ಲಿ ಚಂದನ್, ನಿವೇದಿತಾ ಮಧ್ಯೆ ಭಿನ್ನಾಭಿಪ್ರಾಯವಿತ್ತು ಅಂತ ಹೇಳುತ್ತಿರೋದು ಶುದ್ಧ ಸುಳ್ಳು. ಸೋಷಿಯಲ್ ಮೀಡಿಯಾದಲ್ಲಿ ಈ ತರಹ ಯಾರ ಬಗ್ಗೆಯೂ ಅವಹೇಳನ ಮಾಡೋದು ತಪ್ಪು. ಅದು ಅವರ ಪರ್ಸನಲ್ ಜೀವನ. ಅವರ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.