ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ಫ್ಯಾನ್ಸ್ ಶಾಕ್ ಕೊಟ್ಟಿದ್ದಾರೆ. ಇವರಿಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇವರಿಬ್ಬರು ಬೇರೆ ಬೇರೆಯಾಗಿದ್ದು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಕಾರಣಗಳು ಹರಿದಾಡುತ್ತಿವೆ. ಇದೀಗ ಚಂದನ್ ಶೆಟ್ಟಿ ಹಾಗೂ ನಿವೇದಿತಾ ದಾಂಪತ್ಯ ಮುರಿದು ಬಿದ್ದಿದ್ದಕ್ಕೆ ಪ್ರಶಾಂತ್ ಸಂಬರ್ಗಿ ಹೇಳಿದ್ದು ವೈರಲ್ ಆಗಿದೆ. ಒಂದು ಯೂಟ್ಯೂಬ್ ಚಾನೆಲ್ ನಲ್ಲಿ ಈ ರೀತಿಯಾಗಿ ಹೇಳಿದ್ದಾರೆ.
ʻಚಂದನ್ ಶೆಟ್ಟಿ ಆತ್ಮೀಯ ಗೆಳೆಯ. ಚಂದನ್ ಶೆಟ್ಟಿ ಬಿಗ್ ಬಾಸ್ ಸ್ಪರ್ಧಿ. ಚಂದನ್ ಶೆಟ್ಟಿ ನಾವು ಮಾಡಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಸಿನಿಮಾದಲ್ಲಿ ಆತ ಹೀರೊ. 15 ದಿನ ನಾವು ಶೂಟಿಂಗ್ ಮಾಡಿದ್ದೇವೆ. ಫೈಟಿಂಗ್ ಮಾಡಿದ್ದೇವೆ. ಹೊಡೆದಾಡಿದ್ದೇವೆ. ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಯಾರು ಅಂದರೆ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಹೆಸರು ಬರುತ್ತೆ. ಆದ್ರೀಗ ಎಲ್ಲರಿಗೂ ಶಾಕ್ ಆಗಿದೆ. ಆದರೆ, ನನಗೆ ಒಂದು ವರ್ಷದ ಹಿಂದೇನೆ ಈ ವಿಷಯ ಬಂದಿತ್ತು.
ಅವರ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಅನೇಕ ಪ್ರಶ್ನೆಗಳು ಬರುತ್ತವೆ. ನಾನು ಕರಿಯರ್ಗೋಸ್ಕರ್ ತೆಲುಗು ಪಿಕ್ಚರ್ಗೆ ಹೋಗುತ್ತಿದ್ದೇನೆ. ಅಲ್ಲಿ ನನಗೆ ಮದುವೆ ಆಗಿದೆ ಅಂದರೆ, ಅವಕಾಶ ಸಿಗೋದಿಲ್ಲ. ಡಿವೋರ್ಸ್ ಆಗಿದ್ದರೆ ಅವಕಾಶ ಸಿಗುತ್ತೆ ಅನ್ನೋದು ಒಂದು ವದಂತಿ. ನಾವಿಬ್ಬರು ಬೇರೆಯಾಗೋಣ, ನನ್ನ ಜೀವನದಲ್ಲಿ ಯಾರೋ ಬಂದಿದ್ದಾರೆ. ನಿನ್ನ ಜೀವನದ ಶೈಲಿ ನನಗೆ ಇಷ್ಟ ಆಗುತ್ತಿಲ್ಲ. ನನ್ನ ಜೀವನದಲ್ಲಿ ಬೇರೆ ಲೈಫ್ ಸ್ಟೈಲ್ ಬೇಕು ಅಂತ ನಿವೇದಿತಾ ಬಿಟ್ಟು ಹೋಗಿರೋದು ಈ ಎಲ್ಲಾ ಊಹಾ ಪೋಹಗಳನ್ನು ನೋಡಿದಾಗ ಚಂದನ್ಗೆ ನಿಜವಾಗಲೂ ಬೇಜಾರಾಗಿದೆ.
ಇರುವ ಸ್ವಿಫ್ಟ್ ಕಾರು ಬಿಟ್ಟು ಬೆನ್ಜ್ ಕಾರು ಬೇಕು ಅಂದರೆ ನಾವೇನು ಮಾಡುವುದಕ್ಕೆ ಆಗುವುದಿಲ್ಲ. ಬೆನ್ಜ್ ಹಿಂದೆ ಹೋಗಿರುವಂತವರು, ದುಡ್ಡಿನ ಹಿಂದೆ ಹೋಗಿರುವಂತಹವರು ಅಥವಾ ಅವಕಾಶಗಳ ಹಿಂದೆ ಹೋಗಿರುವಂತಹವರು ಯಾರು ಅಂತ ಕರ್ನಾಟಕದ ಜನತೆಗೆ ಗೊತ್ತಾಗುತ್ತೆ. ಚಂದನ್ಗೆ ನಮ್ಮ ಬ್ರದರ್ಲಿ ಸಪೋರ್ಟ್, ಎಮೋಷನಲ್ ಸಪೋರ್ಟ್ ಇದೆʼ ಎಂದಿದ್ದಾರೆ.